ಜಾತ್ಯಾತೀತತೆ ಎಂದರೇನು?: ಉದ್ಧವ್ ಠಾಕ್ರೆ ಹೇಳಿದ್ದು ಕೇಳಿದಿರೇನು?

By Web Desk  |  First Published Nov 29, 2019, 12:11 PM IST

ಮಹಾರಾಷ್ಟ್ರದ ನೂತನ ಸಿಎಂ ಉದ್ಧವ್ ಠಾಕ್ರೆ ಮೊದಲ ಪತ್ರಿಕಾಗೋಷ್ಠಿ| ಮೊದಲ ಪತ್ರಿಕಾಗೋಷ್ಠಿಯಲ್ಲೇ ಜಾತ್ಯಾತೀತೆಯ ಅರ್ಥ ತಿಳಿಸಿದ ಉದ್ಧವ್| ಸಂವಿಧಾನ ಹೇಳುವ ಜಾತ್ಯಾತೀತತೆಯನ್ನು ಪಕ್ಷ ಪಾಲಿಸಿಕೊಂಡು ಬಂದಿದೆ ಎಂದ ಉದ್ಧವ್| ಕಾಂಗ್ರೆಸ್-ಎನ್‌ಸಿಪಿ ಜೊತೆ ಕೈಜೋಡಿಸಿದ್ದ ಶಿವಸೇನೆ ಹಿಂದುತ್ವ ಕೈಬಿಟ್ಟಿದೆ ಎಂದಿದ್ದ ಬಿಜೆಪಿ|


ಮುಂಬೈ(ನ.29): ಕಾಂಗ್ರೆಸ್-ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಸಿಎಂ ಆದ ಶಿವಸೇನಯ ಮುಖ್ಯಸ್ಥ ಉದ್ಧವ್ ಠಾಕ್ರೆ, ಹಿಂದುತ್ವದೊಂದಿಗೆ ರಾಜಿ ಮಾಡಿಕೊಂಡಂತಿದೆ.

ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಜಾತ್ಯಾತೀತ ಪದದ ಅರ್ಥ ವಿವರಿಸಿರುವ ಉದ್ಧವ್, ಸಂವಿಧಾನದಲ್ಲಿ ವಿವರಿಸಿರುವಂತೆಯೇ ತಮ್ಮ ಪಕ್ಷ ನಡೆದುಕೊಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!

ಸಂವಿಧಾನ ಜಾತ್ಯಾತೀತೆಯ ಕುರಿತು ಏನು ಹೇಳುತ್ತದೆಯೋ ಅದನ್ನು ಪಾಲಿಸುವುದು ಪಕ್ಷದ ಧರ್ಮ ಎಂದು ಉದ್ಧವ್ ಹೇಳಿದ್ದಾರೆ. ಅಘಾಡಿ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕೆಲಸ ಮಾಡುತ್ತದೆ ಎಂದು ಉದ್ಧವ್ ಸ್ಪಷ್ಟಪಡಿಸಿದ್ದಾರೆ.

Maharashtra CM Uddhav Thackeray on being asked 'Has Shiv Sena has become secular?': Secular ka matlab kya hai? Samvidhan mein jo kuch hai woh hai. pic.twitter.com/eS2zkXEpIE

— ANI (@ANI)

ಪಕ್ಷ ಜಾತ್ಯಾತೀತತೆಯ ಸಿದ್ಧಂತ ಅಳವಡಿಸಿಕೊಂಡಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉದ್ಧವ್, ಜಾತ್ಯಾತೀತತೆ ಎಂದರೇನು ಎಂದು ಪತ್ರಕರಿಗೆ ಮರು ಪ್ರಶ್ನೆ ಹಾಕಿದ್ದು ವಿಶೇಷವಾಗಿತ್ತು.

ಇನ್ನು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಎನ್‌ಸಿಪಿ ಯ ಜಯಂತ್ ಪಾಟೀಲ್, ಜಾತ್ಯಾತೀತತೆ ಎಂದರೆ ಹಿಂದೂಗಳು ಹಿಂದೂವಾಗಿ, ಮುಸ್ಲಿಮರು ಮುಸ್ಲಿಮರಾಗಿ ಈ ದೇಶದಲ್ಲಿ ಬದುಕುವುದು ಎಂದರ್ಥ ಎಂದು ಹೇಳಿದರು.

ನೂತನ ಸಿಎಂ ಉದ್ಧವ್ ಠಾಕ್ರೆ ಅಭಿನಂದಿಸಿ ಪ್ರಧಾನಿ ಮೋದಿ ಟ್ವಿಟ್!

ಈ ವೇಳೆ ಹಾಜರಿದ್ದ ಶಿವಸೇನೆಯ ಏಕನಾಥ್ ಶಿಂಧೆ, ಜಯಂತ್ ಪಾಟೀಲ್ ಅವರ ಮಾತಿಗೆ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್‌-ಎನ್‌ಸಿಪಿ ಜೊತೆ ಕೈ ಜೋಡಿಸಿದ್ದ ಶಿವಸೇನೆ ಇದೀಗ ಹಿಂದುತ್ವ ಸಿದ್ಧಾಂತ ಕೈ ಬಿಟ್ಟಿದೆ ಎಂಬುದು ಬಿಜೆಪಿಯ ಆರೋಪವಾಗಿದೆ.

ಉದ್ಧವ್ ತಮ್ಮ ಹಿಂದುತ್ವದ ಸಿದ್ಧಾಂತವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದದಡಿ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!