ನವದೆಹಲಿ(ಮಾ.10): ಪಂಚ ರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಧಿಕೃತ ಪ್ರಕಟಣೆ ಬಾಕಿ ಇದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಿದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಸಂಭ್ರಮ ಆಚರಿಸಿದೆ. ಇನ್ನು ಉತ್ತರಖಂಡ, ಮಣಿಪುರ ಹಾಗೂ ಗೋವಾದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕೆಲ ಘಟಾನುಘಟಿ ನಾಯಕರಿಗೆ ಸೋಲಾಗಿದೆ. ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ, ಉತ್ತರಖಂಡ ಸಿಎಂ ಫುಷ್ಕರ್ ಸಿಂಗ್ ಧಮಿ ಪ್ರಮುಖರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್‌ನ ಹಾಲಿ ಹಾಗೂ ಮಾಜಿ ಸಿಎಂ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು. ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇನ್ನು ಪಂಜಾಬ್ ಮಾಜಿ ಸಿಎಂ, ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
Election Result 2022 ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!
ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲು ಕಂಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ 2002 ರಿಂದ 2007 ಹಾಗೂ 2007 ರಿಂದ ಹಾಗೂ 2017 ರಿಂ 2019ರ ವರೆಗೆ ಪಂಜಾಬ್ ಸಿಎಂ ಆಗಿ ಅಧಿಕಾರದಲ್ಲಿದ್ದರು. ಬಳಿಕ ಕಾಂಗ್ರೆಸ್ ಅಮಾನಿಸಿದೆ ಎಂದು ಪಕ್ಷ ತೊರೆದು ಹೊಸ ಪಕ್ಷ ಕಟ್ಟಿದ್ದರು.
ಉತ್ತರ ಖಂಡದಲ್ಲಿ ಧಮಿ ಹಾಗೂ ಹರೀಶ್ ರಾವತ್‌ಗೆ ಸೋಲು
ಪಂಜಾಬ್‍ನಂತೆ ಉತ್ತರಖಂಡದಲ್ಲೂ ಹಾಲಿ ಹಾಗೂ ಮಾಜಿ ಸಿಎಂಗಳನ್ನು ಜನ ಸೋಲಿಸಿದ್ದಾರೆ. ಬಿಜೆಪಿ ಹಾಲಿ ಸಿಎಂ ಪುಷ್ಕರ್ ಸಿಂಗ್ ಧಮಿ ಖಾತಿಮಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಲಿ ಸಿಎಂ ಸೋಲು ಕಂಡಿದ್ದಾರೆ. ಜನರ ಆದೇಶವನ್ನು ಪುಷ್ಕರ್ ಸಿಂಗ್ ಧಮಿ ಸ್ವಾಗತಿಸಿದ್ದಾರೆ.ಉತ್ತರಖಂಡದ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಲಖೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಡಾ. ಮೊಹನ್ ಸಿಂಗ್ ವಿರುದ್ಧ ಸೋಲು ಕಂಡಿದ್ದಾರೆ.
Election Result ಕಾಮಿಡಿಯನ್‌ಗೆ ಸಿಎಂ ಪಟ್ಟ, ಕಾಮಿಡಿ ಶೋ ಜಡ್ಜ್‌ಗೆ ಸೋಲಿನ ಆಘಾತ!
ಯುಪಿ, ಗೋವಾ, ಮಣಿಪುರ ಸಿಎಂಗೆ ಭರ್ಜರಿ ಗೆಲುವು
ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಲಿ ಸಿಎಂಗಳ ಪೈಕಿ ಉತ್ತರ ಪ್ರದೇಶ, ಮಣಿಪುರ ಹಾಗೂ ಗೋವಾ ಮುಖ್ಯಮಂತ್ರಿಗಳಿಗೆ ಭರ್ಜರಿ ಗೆಲುವು ದಕ್ಕಿದೆ.ಯೋಗಿ ಸ್ವಕ್ಷೇತ್ರ ಗೋರಖ್‌ಪುರದಿಂದ ಸ್ಪರ್ಧಿಸಿದ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಗೆಲುವು ಕಂಡಿದ್ದಾರೆ.ಸಮಾಜವಾದಿ ಪಾರ್ಟಿ ಅಭ್ಯರ್ಥಿ ಶುಭವತಿ ಶುಕ್ಲಾ ವಿರುದ್ಧ 44,000 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ.
ಘಟಾನುಘಟಿ ನಾಯಕರಿಗೆ ಸೋಲಿನ ಕಹಿ
ಪಂಜಾಬ್ ವಿಧಾನಸಭಾ ಚುನಾಣವೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಮುಗ್ಗರಿಸಿದ್ದಾರೆ. ಇನ್ನು ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಕ್ಬೀರ್ ಸಿಂಗ್ ಬಾದಲ್ ಕೂಡ ಸೋಲು ಕಂಡಿದ್ದಾರೆ. ಆಮ್ ಆದ್ಮಿ ಪಾರ್ಟಿ ಜಗದೀಪ್ ಕಾಂಬೊಜ್ ವಿರುದ್ಧ ಸೋಲು ಕಂಡಿದ್ದಾರೆ. ಸುಕ್ಬೀರ್ ಸಿಂಗ್ ಬಾದಲ್ 2009ರಿಂದ 2017ರ ವರೆಗೆ ಪಂಜಾಬ್ ಉಪ ಮುಖ್ಯಮಂತ್ರಿಯಾಗಿದ್ದರು.ಕಾಂಗ್ರೆಸ್‌ನ ಹಾಲಿ ,ಮಾಜಿ ಶಾಸಕರು ಸೋಲಿನ ಕಹಿ ಅನುಭವಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ಅಬ್ಬರದ ಮುಂದೆ ಕಾಂಗ್ರೆಸ್ ಧೂಳೀಪಟವಾಗಿದೆ. ಪಂಜಾಬ್‌ನಲ್ಲಿ ಬಿಜಿಪೆ ಕೂಡ ಸೈಡ್ ಲೈನ್ ಆಗಿದೆ.