ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರಕ್ಕೆ ಅಧಿಕಾರ: ವರದಿ

Published : Aug 07, 2023, 11:53 AM ISTUpdated : Aug 10, 2023, 11:46 AM IST
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರಕ್ಕೆ ಅಧಿಕಾರ: ವರದಿ

ಸಾರಾಂಶ

ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ರೂಪಿಸುವ ಅಧಿಕಾರ ರಾಜ್ಯಗಳಿಗೆ ಇದೆಯೇ ಎಂದು ಪರಿಶೀಲಿಸಲು ನೇಮಕಗೊಂಡಿದ್ದ ಸಮಿತಿಯಿಂದ ಅಸ್ಸಾಂ ಸರ್ಕಾರಕ್ಕೆ ವರದಿ ಸಲ್ಲಿಕೆ. 

ಗುವಾಹಟಿ (ಆ.7): ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ರಚನೆ ಮಾಡಲು ರಾಜ್ಯ ವಿಧಾನಸಭೆಗೆ ಶಾಸನಾತ್ಮಕ ಅಧಿಕಾರವಿದೆಯೇ ಎಂಬುದನ್ನು ಪರಿಶೀಲಿಸಲು ನೇಮಕಗೊಂಡಿದ್ದ ತಜ್ಞರ ಸಮಿತಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಭಾನುವಾರ ತನ್ನ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಕುರಿತ ಫೋಟೋಗಳನ್ನು ಶರ್ಮಾ ಅವರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ಜಾತಿ, ನಂಬಿಕೆ ಅಥವಾ ಧರ್ಮ ನೋಡದೆ ಮಹಿಳಾ ಸಬಲೀಕರಣಕ್ಕೆ ಧನಾತ್ಮಕ ವಾತಾವರಣವನ್ನು ಸೃಷ್ಟಿಸುವತ್ತ ಅಸ್ಸಾಂ ಹೆಜ್ಜೆ ಇಡುತ್ತಿದೆ’ ಎಂದು ಹಿಮಂತ ಬಿಸ್ವ ಶರ್ಮಾ ಅವರು ತಿಳಿಸಿರುವುದು, ಸಮಿತಿ ಸರ್ಕಾರದ ಆಶಯಗಳಿಗೆ ಅನುಗುಣವಾದ ರೀತಿಯಲ್ಲೇ ವರದಿ ಸಲ್ಲಿಸಿರಬಹುದು ಎಂಬ ಸುಳಿವನ್ನು ನೀಡಿದೆ.

ಕುರುಹು ಸಿಕ್ಕಿರುವ ವದಂತಿ ನಿಲ್ಲಿಸದಿದ್ದರೆ ಗ್ಯಾನವಾಪಿ ಮಸೀದಿ ಸರ್ವೇಗೆ ಬಹಿಷ್ಕಾರ: ಮುಸ್ಲಿಮರ

ವರದಿಯಲ್ಲಿ ಯಾವೆಲ್ಲಾ ಶಿಫಾರಸುಗಳು ಇವೆ ಎಂಬುದು ಬಹಿರಂಗವಾಗಿಲ್ಲ. ಒಂದು ವೇಳೆ, ಬಹುಪತ್ನಿತ್ವ ನಿಷೇಧಿಸಲು ವಿಧಾನಸಭೆಗೆ ಅಧಿಕಾರವಿದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ಹೇಳಿದ್ದರೆ, ಅಸ್ಸಾಂ ಸರ್ಕಾರ ಸೆಪ್ಟೆಂಬರ್‌ ಅಥವಾ ಜನವರಿಯಲ್ಲಿ ಬಹುಪತ್ನಿತ್ವ ನಿಷೇಧ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ತನ್ಮೂಲಕ ಬಹುಪತ್ನಿತ್ವಕ್ಕೆ ನಿಷೇಧ ಹೇರಿದ ದೇಶದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ.

ಇಂಡಿಯಾ ಮೈತ್ರಿಕೂಟಕ್ಕೆ ಸೋನಿಯಾ ಅಧ್ಯಕ್ಷೆ, ನಿತೀಶ್‌ ಸಂಚಾಲಕ ಬಹುತೇಕ ನಿಶ್ಚಿತ

ನಿವೃತ್ತ ನ್ಯಾ. ರುಮಿ ಕುಮಾರಿ ಫುಕಾನ್‌ ನೇತೃತ್ವದಲ್ಲಿ ರಾಜ್ಯ ಅಡ್ವೋಕೇಟ್‌ ಜನರಲ್‌ ದೇವಜಿತ್‌ ಸೈಕಿಯಾ ಹಾಗೂ ಹಿರಿಯ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ನಳಿನ್‌ ಕೊಹ್ಲಿ ಮತ್ತು ಹಿರಿಯ ವಕೀಲ ನೆಕಿಬುರ್‌ ಜಮಾನ್‌ ಅವರನ್ನು ಒಳಗೊಂಡ ಸಮಿತಿಯನ್ನು ಮೇ 12ರಂದು ಹಿಮಂತ ಅವರು ರಚನೆ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ