
ಅಲಿಗಢ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮನ ದೇಗುಲಕ್ಕೆ ಇಲ್ಲಿನ ಬೀಗ ತಯಾರಕರೊಬ್ಬರು ಬರೋಬ್ಬರಿ 400 ಕೇಜಿ ತೂಕದ ಬೀಗವನ್ನು ಉಡುಗೊರೆಯಾಗಿ ನೀಡಲು ಸಿದ್ಧಪಡಿಸಿದ್ದಾರೆ. ಸತ್ಯ ಶರ್ಮ ಎಂಬ ವ್ಯಕ್ತಿ ಬೀಗ ತಯಾರಿಕೆ ಅವರ ಕುಲ ಕಸುಬಾಗಿದ್ದು, ರಾಮ ಮಂದಿರಕ್ಕೆ ಬೀಗವನ್ನು ಕೊಡುಗೆಯಾಗಿ ನೀಡಬೇಕು ಎಂದು ಆಸೆ ಹೊಂದಿದ್ದರು. ಇದರ ಭಾಗವಾಗಿ 10 ಅಡಿ ಎತ್ತರ, 4.5 ಅಡಿ ಅಗಲ, 9.5 ಇಂಚು ದಪ್ಪ, 400 ಕೇಜಿ ತೂಕವಿರುವ ಬೀಗವನ್ನು ನಿರ್ಮಾಣ ಮಾಡಿದ್ದಾರೆ. ಈ ಬೀಗ ಜಗತ್ತಿನ ದೊಡ್ಡ ಬೀಗ ಎಂಬ ಕೀರ್ತಿ ಗಳಿಸಿದೆ. ಇದನ್ನು ಅಲಿಗಢದ ಎಕ್ಸಿಬಿಷನ್‌ನಲ್ಲಿ ಇರಿಸಿದ್ದರು.
ಅಯೋಧ್ಯೆ ರಾಮನ ದರ್ಶನಕ್ಕೆ ತೆರಳುವ ರಾಮಪಥ ಸಂಚಾರಕ್ಕೆ ಮುಕ್ತ
ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರ ಪ್ರವೇಶಕ್ಕೆ ನಿರ್ಮಿಸಲಾಗಿರುವ ನೂತನ ‘ರಾಮಪಥ’ ಮಾರ್ಗವನ್ನು ಜೂನ್‌ನಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ರಾಮಮಂದಿರ ನಿರ್ಮಾಣ ಕಾಮಗಾರಿಗೆ ಚುರುಕು ನೀಡುವ ನಿಟ್ಟಿನಲ್ಲಿ ಇದುವರೆಗೂ ಬಳಸಲಾಗುತ್ತಿದ್ದ ಮಾರ್ಗವನ್ನು ಭಾನುವಾರದಿಂದ ಬಂದ್ ಮಾಡಲಾಗಿದ್ದು, ನೂತನವಾಗಿ ನಿರ್ಮಿಸಲಾಗಿರುವ ರಾಮಪಥ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಹೀಗಾಗಿ ರಾಮಲಲ್ಲಾನ ವಿಗ್ರಹ ನೋಡಲು ಇದೇ ಮಾರ್ಗದಲ್ಲಿ ತೆರಳಬೇಕು.
ಅಯೋಧ್ಯೆ ರಾಮನ ದರ್ಶನಕ್ಕೆ ತೆರಳುವ ರಾಮಪಥ ಸಂಚಾರಕ್ಕೆ ಮುಕ್ತ: 100 ಮೀ. ಅಗಲ, 800 ಮೀ. ಉದ್ದದ ಮಾರ್ಗ
100 ಮೀಟರ್ ಅಗಲ, 800 ಮೀಟರ್ ಉದ್ದದ ಈ ರಾಮಪಥವನ್ನು (Rampath)ಸುಂದರವಾದ ಕೆಂಪುಕಲ್ಲುಗಳಿಂದ ನಿರ್ಮಿಸಲಾಗಿದೆ. 40 ಕೋಟಿ ರು. ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಭಕ್ತರಿಗೆ ಕುಡಿಯುವ ನೀರು, ವಿಶ್ರಾಂತಿ ಸ್ಥಳ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷದ ಸಂಕ್ರಮಣ ಸಂದರ್ಭದಲ್ಲಿ ರಾಮಲಲ್ಲಾ (Ram lalla Idol) ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದ್ದು, ನಂತರ ದೇಗುಲ (Lord Ram Temple) ಪ್ರವೇಶಕ್ಕೆ ಭಕ್ತರಿಗೆ ಅನುಮತಿ ಸಿಗಲಿದೆ.
ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಮೋದಿಗೆ ಅಧಿಕೃತ ಆಹ್ವಾನ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ (Ram Mandir) ಗರ್ಭಗುಡಿಯಲ್ಲಿ ಮುಂದಿನ ಜನವರಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ತಿಳಿಸಿದೆ. ಪ್ರಧಾನಿ ಮೋದಿಯವರಿಗೆ ಇತ್ತೀಚೆಗೆ ಪತ್ರ ಬರೆದು ಔಪಚಾರಿಕವಾಗಿ ಆಹ್ವಾನಿಸಲಾಗಿದೆ. ಸಮಾರಂಭಕ್ಕೆ ಜ.15 ರಿಂದ 24ರ ನಡುವಿನ ದಿನಾಂಕಗಳನ್ನು ನೀಡಲಾಗಿದ್ದು ಈ ಪೈಕಿ ಒಂದು ನಿಖರ ದಿನಾಂಕವನ್ನು ಪ್ರಧಾನಿಗಳೇ ನಿರ್ಧರಿಸಲಿದ್ದಾರೆ. ಅಲ್ಲದೇ ಈ ಸಮಾರಂಭಕ್ಕೆ ಸುಮಾರು 10,000 ಅತಿಥಿಗಳಿಗೆ ಮಂಡಳಿಯು ಆಮಂತ್ರಣ ನೀಡಲಿದೆ ಎಂದು ರಾಮ ಮಂದಿರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಮೋದಿಗೆ ಅಧಿಕೃತ ಆಹ್ವಾನ
2024ರ ಜನವರಿ ವೇಳೆಗೆ ಭಕ್ತರಿಗೆ ದೇವಾಲಯವನ್ನು ಮುಕ್ತಗೊಳಿಸಬೇಕಿರುವುದರಿಂದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 550 ಇದ್ದ ಕಾರ್ಮಿಕರು ಮತ್ತು ತಂತ್ರಜ್ಞರ ಸಂಖ್ಯೆಯನ್ನು 1,600ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಐತಿಹಾಸಿಕ ಸಮಾರಂಭದ ಸಿದ್ಧತೆಗಾಗಿ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 22 ಕೋಟಿ ರು. ಮೌಲ್ಯದ ಗಿಡಗಳು ಮತ್ತು ಹೂಬಿಡುವ ಮತ್ತು ಅಲಂಕಾರಿಕ ಸಸ್ಯಗಳನ್ನು ನಡೆಲಾಗಿದೆ. ಈ ರಾಮ ಪಥ, ಧರ್ಮ ಪಥ ಮತ್ತು ಭಕ್ತಿ ಪಥಗಳ ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ಉತ್ತರ ಪ್ರದೇಶದ ರಾಜ್ಯ ಅರಣ್ಯ ಇಲಾಖೆ ವಹಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ