ಅಸ್ಸಾಂನ ಹೋಂಡಾ ರಾಯಲ್ ರೈಡರ್ಸ್ ಶೋರೂಮ್‌ಗೆ ಮೊಹಮ್ಮದ್ ಸೈದುಲ್ ಹೋಕ್ ಎಂಬಾತ ಸ್ಕೂಟರ್ ಅನ್ನು ಖರೀದಿಸಲು ಗೋಣಿಚೀಲದ ತುಂಬಾ ನಾಣ್ಯಗಳನ್ನು ಭುಜದ ಮೇಲೆ ಹೊತ್ತುಕೊಂಡಿದ್ದ ವಿಡಿಯೋ ವೈರಲ್ ಆಗಿದೆ.
ಡಿಸ್ಪುರ (ಮಾರ್ಚ್ 22, 2023): ಅಸ್ಸಾಂನ ವ್ಯಕ್ತಿಯೊಬ್ಬ ಸ್ಕೂಟರ್ ಹೊಂದುವ ತನ್ನ ಕನಸನ್ನು ನನಸಾಗಿಸಲು ಅರ್ಧ ದಶಕಕ್ಕೂ ಹೆಚ್ಚು ಕಾಲ ನಾಣ್ಯಗಳನ್ನು ಸೇವ್ ಮಾಡಿಟ್ಟುಕೊಂಡಿದ್ದ. ಐದರಿಂದ ಆರು ವರ್ಷಗಳ ಅವಧಿಯಲ್ಲಿ 90,000 ರೂ.ಗಳನ್ನು ನಾಣ್ಯಗಳ ರೂಪದಲ್ಲಿ ಮೊಹಮ್ಮದ್ ಸೈದುಲ್ ಹೋಕ್ ಎಂಬಾತ ಸಂಗ್ರಹಿಸಿದ್ದ. ಅಲ್ಲದೆ, ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅಂದ್ರೆ, ಸ್ಕೂಟರ್ ಖರೀದಿಸಲು ದ್ವಿಚಕ್ರ ವಾಹನಗಳ ಶೋರೂಂಗೆ ನಾಣ್ಯಗಳ ಮೂಟೆಯನ್ನೇ ಸಾಗಿಸಿದ್ದಾನೆ ಈತ.
ಈ ವಾರದ ಆರಂಭದಲ್ಲಿ ಅಸ್ಸಾಂನ ಹೋಂಡಾ ರಾಯಲ್ ರೈಡರ್ಸ್ ಶೋರೂಮ್‌ಗೆ ಮೊಹಮ್ಮದ್ ಸೈದುಲ್ ಹೋಕ್ ಎಂಬಾತ ಸ್ಕೂಟರ್ ಅನ್ನು ಖರೀದಿಸಲು ಗೋಣಿಚೀಲದ ತುಂಬಾ ನಾಣ್ಯಗಳನ್ನು ಭುಜದ ಮೇಲೆ ಹೊತ್ತುಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಸುದ್ದಿ ಸಂಸ್ಥೆ ANI ಈ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದು, ಸ್ಕೂಟರ್ ಶೋರೂಮ್‌ನವನು ನಾಣ್ಯಗಳನ್ನು ಎಣಿಸುತ್ತಿರುವುದನ್ನು ಮತ್ತು ಖರೀದಿಯ ದಾಖಲೆಗಳಿಗೆ ಸಹಿ ಮಾಡುವುದನ್ನು ನೋಡಬಹುದು.
undefined
ಇದನ್ನು ಓದಿ: 31 ಸಾವಿರ ಕೋಟಿ ದೋಚಿ ‘ಕ್ರಿಪ್ಟೋಕ್ವೀನ್’ ಪರಾರಿ: ಇದು ಜಗತ್ತಿನ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ವಂಚನೆ..!
"I run a small shop in Boragaon area and it was my dream to buy a scooter. I started to collect coins 5-6 years ago. Finally, I have fulfilled my dream. I am really happy now," said Md Saidul Hoque pic.twitter.com/Vj4HsOqI3v
— ANI (@ANI)ನಾನು ಬೋರಗಾಂವ್ ಪ್ರದೇಶದಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದೇನೆ ಮತ್ತು ಸ್ಕೂಟರ್ ಖರೀದಿಸುವುದು ನನ್ನ ಕನಸಾಗಿತ್ತು. ನಾನು 5-6 ವರ್ಷಗಳ ಹಿಂದೆ ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಅಂತಿಮವಾಗಿ, ನಾನು ನನ್ನ ಕನಸನ್ನು ನನಸಾಗಿಸಿಕೊಂಡಿದ್ದೇನೆ. ನಾನು ಈಗ ನಿಜವಾಗಿಯೂ ಸಂತೋಷವಾಗಿದ್ದೇನೆ" ಎಂದು ಮೊಹಮ್ಮದ್ ಸೈದುಲ್ ಹೋಕ್ ಹೇಳಿದ್ದಾರೆಂದು ಎಎನ್‌ಐ ವರದಿ ಮಾಡಿದೆ.
ಇನ್ನು, ಶೋರೂಂ ಮಾಲೀಕರು ಸಹ ಮೊಹಮ್ಮದ್ ಸೈದುಲ್ ಹೋಕ್‌ಗೆ ಸೇವೆ ಸಲ್ಲಿಸಲು ಸಂತೋಷಪಟ್ಟಿರುವುದಾಗಿ ಹೇಳಿದ್ದು, ಅವರಿಗೆ ಒಳ್ಳೇದಾಗಲಿ ಎಂದು ಹಾರೈಸಿದ್ದಾರೆ. ಗ್ರಾಹಕರೊಬ್ಬರು ಸುಮಾರು 90,000 ರೂಪಾಯಿಗಳ ನಾಣ್ಯಗಳಿರುವ ಸ್ಕೂಟರ್ ಖರೀದಿಸಲು ನಮ್ಮ ಶೋರೂಮ್‌ಗೆ ಬಂದಿದ್ದಾರೆ ಎಂದು ನನ್ನ ಕಾರ್ಯನಿರ್ವಾಹಕ ನನಗೆ ಹೇಳಿದಾಗ, ನಾನು ಟಿವಿಯಲ್ಲಿ ಅಂತಹ ಸುದ್ದಿಗಳನ್ನು ನೋಡಿದ್ದರಿಂದ ನನಗೆ ಸಂತೋಷವಾಯಿತು. ಭವಿಷ್ಯದಲ್ಲಿ ಅವರು ನಾಲ್ಕು ಚಕ್ರದ ವಾಹನವನ್ನು ಖರೀದಿಸುತ್ತಾರೆ ಎಂದು ನಾನು ಬಯಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Gold ATM: ಮುತ್ತಿನ ನಗರಿಯ ಈ ಎಟಿಎಂನಲ್ಲಿ ಹಣ ಅಲ್ಲ, ಚಿನ್ನ ಬರುತ್ತೆ..!
ಚಿಲ್ಲರೆ ನಾಣ್ಯ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸದೆ ಎಲ್ಲ ಕಾಯಿನ್‌ಗಳನ್ನು ಶೋರೂಮ್‌ನವರು ಎಣಿಸಿದ್ದು, ನಂತರ ಅಸ್ಸಾಂನ ಆ ವ್ಯಕ್ತಿಗೆ ವಾಹನ ಖರೀದಿಗೆ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ. ಇನ್ನು, ಯಾರಾದರೂ ದೊಡ್ಡ ಖರೀದಿಗಳಿಗೆ ನಾಣ್ಯಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ತೆಲಂಗಾಣದಲ್ಲಿ, ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬರು ಕೆಟಿಎಂ ಸ್ಪೋರ್ಟ್ಸ್ ಬೈಕ್ ಖರೀದಿಸಲು 112 ಬ್ಯಾಗ್‌ಗಳಲ್ಲಿ 1 ರೂ. ನಾಣ್ಯಗಳನ್ನು ಶೋರೂಮ್‌ಗೆ ತೆಗೆದುಕೊಂಡು ಹೋಗಿದ್ದರು. ಅದಕ್ಕೂ ಕೆಲವು ತಿಂಗಳ ಹಿಂದೆ ತಮಿಳುನಾಡಿನ ಸೇಲಂ ಮೂಲದ ವ್ಯಕ್ತಿಯೊಬ್ಬರು 2.6 ಲಕ್ಷ ರೂಪಾಯಿ ನಾಣ್ಯ ನೀಡಿ ಹೊಸ ಬೈಕ್ ಖರೀದಿಸಿದ್ದರು. ಈಗ, ಅದೇ ರೀತಿ ಅಸ್ಸಾಂನ ವ್ಯಕ್ತಿ ಸುಮಾರು 90 ಸಾವಿರ ರೂ. ಅನ್ನು ನಾಣ್ಯಗಳ ರೂಪದಲ್ಲಿ ನೀಡಿ ಸ್ಕೂಟರ್ ಖರೀದಿಸಿದ್ದಾರೆ.
ಇದನ್ನೂ ಓದಿ: Aishwarya Rajinikanth ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ದೋಚಿದ್ದ ಮನೆ ಕೆಲಸದಾಕೆ, ಡ್ರೈವರ್ ಅಂದರ್