ಅಸ್ಸಾಂ ವಿದ್ಯಾರ್ಥಿ ಒಕ್ಕೂಟಕ್ಕೆ 3.87 ಲಕ್ಷ ರು. ಮೌಲ್ಯದ ಭತ್ತ!| ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಹೋರಾಟಕ್ಕೆ ಅಸ್ಸಾಂ ರೈತರು ವಿಶಿಷ್ಟ ರೀತಿಯ ನೆರವು
ಗುವಾಹಟಿ[ಜ.19]: ದೇಶಾದ್ಯಂತ ಸರಣಿ ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಹೋರಾಟಕ್ಕೆ ಅಸ್ಸಾಂ ರೈತರು ವಿಶಿಷ್ಟರೀತಿಯ ನೆರವು ನೀಡಿದ್ದಾರೆ.
ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘಟನೆ(ಎಎಎಸ್‌ಯು)ಗೆ ಅಸ್ಸಾಂನ ದಿಬ್ರುಗಢ ಜಿಲ್ಲೆಯ 85 ಗ್ರಾಮಗಳ ರೈತರು 320 ಕ್ವಿಂಟಲ್(32 ಸಾವಿರ ಕೇಜಿ) ಭತ್ತವನ್ನು ನೀಡಿದ್ದಾರೆ.
ಮದುವೆ ಮಂಟಪದಲ್ಲೂ ಪೌರತ್ವ ಕಾಯ್ದೆಯದ್ದೇ ಹವಾ..!
ಇತ್ತೀಚೆಗಷ್ಟೇ ದಿಬ್ರುಗಢ ಜಿಲ್ಲೆಯ ಸಸೋನಿ ಎಂಬಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ವೇಳೆ 80 ಗ್ರಾಮಸ್ಥರು ತಾವು ತಮ್ಮ ಗದ್ದೆಯಲ್ಲಿ ಬೆಳೆದ 320 ಕ್ವಿಂಟಲ್ ಭತ್ತವನ್ನು ದಾನವಾಗಿ ನೀಡಿದ್ದಾರೆ. ಈ ಭತ್ತ ಮಾರಾಟದಿಂದ ಬರುವ ಹಣವನ್ನು ಸಿಎಎ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ಎಎಎಸ್‌ಯುಗೆ ರವಾನಿಸಲಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಪ್ರತೀ ಕ್ವಿಂಟಲ್ ಭತ್ತ ಸುಮಾರು 1200 ರು.ಗೆ ಮಾರಾಟವಾಗುತ್ತದೆ. ಈ ಪ್ರಕಾರ, 32 ಕ್ವಿಂಟಲ್ ಭತ್ತ ಮಾರಾಟದಿಂದ 3.87 ಲಕ್ಷ ರು. ಬರುತ್ತದೆ. ಅಲ್ಲದೆ, ಈ ಭತ್ತ ಮಾರಾಟಕ್ಕಾಗಿ ಗ್ರಾಮಸ್ಥರು ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಅಮಿತ್ ಶಾ ಘರ್ಜನೆ: ಸಿಎಎ ಜಾರಿ ನಮ್ಮೆಲ್ಲರ ಹೊಣೆ!