ಆಪ್‌ನಿಂದ ಟಿಕೆಟ್ ನಿರಾಕರಣೆ: ಶಾಸ್ತ್ರಿ ಮೊಮ್ಮಗ ಕಾಂಗ್ರೆಸ್‌ಗೆ| ದ್ವಾರಕಾ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆ
ನವದೆಹಲಿ[ಜ.19]; ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮೊಮ್ಮಗ ಹಾಗೂ ಆಮ್ ಆದ್ಮಿ ಪಕ್ಷ (ಆಪ್)ದ ಶಾಸಕ ಆದರ್ಶ ಶಾಸ್ತ್ರಿ ಅವರು ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
20 ದಿನದಲ್ಲಿ 5000 ರ‍್ಯಾಲಿಗೆ ಬಿಜೆಪಿ ಮೆಗಾ ಪ್ಲಾನ್!
undefined
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್, ದ್ವಾರಕಾ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆದರ್ಶ ಅವರು ಬೇಸರಗೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಸುಭಾಷ್ ಛೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ ಚಾಕೋ ಅವರ ನೇತೃತ್ವದಲ್ಲಿ ಆದರ್ಶ ಕಾಂಗ್ರೆಸ್ ಸೇರಿದ್ದಾರೆ.
लालबहादुर शास्त्री जी के पोते श्री ने थामा कांग्रेस का हाथ..
दिल्ली प्रदेश कांग्रेस कमेटी के अध्यक्ष श्री जी एवं प्रभारी श्री पीसी चाको की मौजूदगी में ली कांग्रेस की सदस्यता । pic.twitter.com/5KeBwc0eip
ಫೆ.8ಕ್ಕೆ ನಿಗದಿಯಾಗಿರುವ ದಿಲ್ಲಿ ವಿಧಾನಸಭೆ ಚುನಾವಣೆಗೆ ದ್ವಾರಕಾ ಕ್ಷೇತ್ರದಿಂದಲೇ ಆದರ್ಶ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿಯುವ ಸಾಧ್ಯತೆಯಿದೆ.
ಕೇಜ್ರಿವಾಲ್ ವಿರುದ್ಧ ಸ್ಪರ್ಧೆ ಇಲ್ಲ: ನಿರ್ಭಯಾ ತಾಯಿ
ಇನ್ನು ಇತ್ತ ಬಿಜೆಪಿಯು ದೆಹಲಿ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ.