ಪ್ರಶ್ನಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದ, ಅಳಲು ತೋಡಿಕೊಂಡ ಶಂಕಿತ ISIS ಉಗ್ರನ ಪತ್ನಿ

By Suvarna NewsFirst Published Aug 23, 2020, 7:05 PM IST
Highlights

ದೆಹಲಿಯಲ್ಲಿ ಭಾರಿ ವಿದ್ವಂಸ ಕೃತ್ಯಕ್ಕೆ ಸಜ್ಜಾದ ಐಸಿಸ್ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಹುದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಉತ್ತರ ಪ್ರದೇಶದ ಮೂಲದ ಈ ಶಂಕಿತ ಉಗ್ರ ಪತ್ನಿ ಹಾಗೂ ತಂದೆ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. 

ಉತ್ತರ ಪ್ರದೇಶ(ಆ.23): ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟಕ ಇಡುವ ಪ್ರಯತ್ನದಲ್ಲಿದ್ದ ಶಂಕಿತ ISIS ಭಯೋತ್ಪಾದಕನನ್ನು ದೆಹಲಿ ಪೊಲೀಸರು ಕಳೆದ ಶುಕ್ರವಾರ(ಆ.21) ಬಂಧಿಸಿದ್ದಾರೆ. ಇದೀಗ ತೀವ್ರ ತನಿಖೆಯಲ್ಲಿ ತೊಡಗಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಇದರ ಜೊತೆಗೆ ಬಂಧಿತ ಉಗ್ರನ ಪತ್ನಿ ಮಾಧ್ಯಮಕ್ಕೆ ಹಲವು ಮಾಹಿತಿ ಬಹಿರಂಗ ಪಡಿಸಿದ್ದಾರೆ.

 ಪಾಕಿಸ್ತಾನ ಸುಳ್ಳು ಬಟಾ ಬಯಲು; ಪಾತಕಿ ದಾವುದ್ ಇಬ್ರಾಹಿಂ ನಮ್ಮಲ್ಲಿದ್ದಾನೆ ಎಂದ ಇಮ್ರಾನ್ ಸರ್ಕಾರ!.

ಮೊಹಮ್ಮದ್ ಮಸ್ತಾಕೀಮ್ ಖಾನ್ ಅಲಿಯಾಸ್ ಅಬು ಯೂಸುಫ್ ಬಂಧನದ ಬಳಿಕ, ಶಂಕಿತ ಉಗ್ರನ ಪತ್ನಿಯನ್ನು ಮಾಧ್ಯಮ ಮಾತನಾಡಿಸುವ ಪ್ರಯತ್ನ ಮಾಡಿತ್ತು. ಮನೆಯಲ್ಲಿ ಗನ್ ಪೌಡರ್ ಸೇರಿದಂತೆ ಇತರ ಸ್ಫೋಟಕ ವಸ್ತುಗಳನ್ನು ಶೇಖರಿಸಿಟ್ಟಿದ್ದ. ಈ ಕುರಿತು ನಾನು ಪ್ರಶ್ನಿಸಿದ್ದೆ. ಈ ವೇಳೆ ತನನ್ನು ತಡೆಯಬೇಡ ಎಂದು ಅಬು ಯೂಸುಫ್ ನನಗೆ ಎಚ್ಚರಿಸಿದ್ದ ಎಂದು ಪತ್ನಿ ಹೇಳಿದ್ದಾರೆ.

ಅಮೆರಿಕ ನೀಡಿದ ಸುಳಿವಿನಿಂದಾಗಿ ಸಿಕ್ಕಿಬಿದ್ದ ಬೆಂಗಳೂರು ಟೆರರ್ ಡಾಕ್ಟರ್..!.

ದೆಹಲಿಯಲ್ಲಿ ಸ್ಫೋಟ ನಡೆಸುವಂತೆ ಆಫ್ಘಾನಿಸ್ತಾನದಿಂದ ಕೆಲ ಕರೆಗಳು ಬಂದಿತ್ತು. ಈ ನಿಟ್ಟಿನಲ್ಲಿ ಆತ ಕಾರ್ಯಪ್ರವೃತ್ತನಾಗಿದ್ದ. ಆದರೆ ಸಂಚು ನಡೆದಿಲ್ಲ. ಪೊಲೀಸರು ನನ್ನ ಪತಿಯನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ನನಗೆ ನಾಲ್ಕು ಮಕ್ಕಳಿದ್ದು, ನಾನು ಎಲ್ಲಿಗೆ ಹೋಗಲಿ ಎಂದು ಬಂಧಿತನ ಪತ್ನಿ ಅಳಲು ತೋಡಿಕೊಂಡಿದ್ದಾರೆ.

36 ವರ್ಷದ ಬಂಧಿತ ಐಸಿಸ್ ಶಂಕಿತ ಉಗ್ರನ ಕುರಿತ ಆತನ ತಂದೆ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ. ಯಾರೊಂದಿಗೆ ಜಗಳವಾಡದ, ಸೌಮ್ಯ ಸ್ವಭಾವದ ಮಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ಊಹಿಸಲು ಅಸಾಧ್ಯವಾಗಿದೆ ಎಂದಿದ್ದಾರೆ.

ಮನೆಯಲ್ಲಿ ಸ್ಫೋಟಕ ಶೇಖರಿಸಿಟ್ಟಿರುವ ಕುರಿತು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗಲೇ ನನಗೆ ತಿಳಿಯಿತು. ಈ ರೀತಿ ಸ್ಫೋಟಕಗಳನ್ನು ಮನೆಯಲ್ಲಿಡಲು ನಾನು ಅವಕಾಶ ಮಾಡಿಕೊಡುತ್ತಿರಲಿಲ್ಲ. ಇಷ್ಟೇ ಅಲ್ಲ ಮಗನನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ ಎಂದು ಬಂಧಿತನ ತಂದೆ ಹೇಳಿದ್ದಾರೆ.

ದೆಹಲಿಯ ದೌಲಾ ಕೌನಾ ಹಾಗೂ ಕರೋಲಾ ಬಾಘ್ ನಡುವಿನ ರಿಡ್ಡ್ ರೋಡ್ ಬಳಿ ಪ್ರಶರ್ ಕುಕ್ಕರ್‍‌ನಲ್ಲಿ ಸ್ಫೋಟಕವಿಡುವ ಪ್ರಯತ್ನದಲ್ಲಿ ಅಬು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಅಬುವನ್ನು ಬಂಧಿಸಲಾಗಿತ್ತು. ಬಳಿಕ ಅಬು ಇರಿಸಿದ್ದ ಸ್ಫೋಟಕಗಳನ್ನು ಬಾಂಬ್ ನಿಷ್ಟ್ರೀಯ ತಂಡ ನಿಷ್ಕ್ರೀಯಗೊಳಿಸಿತ್ತು.

click me!