ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ. ಹಲವು ಪ್ರಯೋಗದ ಹಂತದಲ್ಲಿದೆ. ಇನ್ನೂ ಕೆಲವು ಬಳಕೆಗೆ ಅಂತಿಮ ಮುದ್ರೆಗಾಗಿ ಕಾಯುತ್ತಿದೆ. ಆದರೆ ಲಸಿಕೆ ಜನಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಮಾತ್ರ ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಇದೀಗ ICMR ಹೊಸ ಸೂತ್ರ ಜಾರಿಗೆ ತರುತ್ತಿದೆ.
ನವದೆಹಲಿ(ಆ.23): ಕೊರೋನಾ ಲಸಿಕೆ ಕುರಿತು ಸಂಪೂರ್ಣ ಮಾಹಿತಿಗಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಕೊರೋನಾ ವ್ಯಾಕ್ಸಿನ್ ವೆಬ್‌ಸೈಟ್ ಬಿಡುಗಡೆ ಮಾಡುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಭಾರತದ ಹಾಗೂ ವಿದೇಶದಲ್ಲಿ ತಯಾರಾಗುತ್ತಿರುವ ಕೊರೋನಾ ಲಸಿಕೆ, ಪ್ರಯೋಗ ಸೇರಿದಂತೆ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.
ವರ್ಷಾಂತ್ಯಕ್ಕೆ ಕೊರೋನಾಗೆ ಭಾರತದ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಕೇಂದ್ರ ಆರೋಗ್ಯ ಸಚಿವ!..
ಮುಂದಿನ ವಾರದ ನೂತನ ಕೊರೋನಾ ವ್ಯಾಕ್ಸಿನ್ ವೆಬ್‌ಸೈಟ್ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಈ ಮಾಹಿತಿಗಳು ಇಂಗ್ಲೀಷ್‌ನಲ್ಲಿ ಮಾತ್ರವಲ್ಲ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಲಿದೆ. ಮುಂದಿನ ವಾರದಿಂದ ಸಾರ್ವಜನಿಕರು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು.
ಭಾರತದ ಜೊತೆ ಸೇರಿ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸುಕ!.
ನೂತನ ಕೊರೋನಾ ಲಸಿಕೆ ವೆಬ್‌ಸೈಟ್ ಮಾಹಿತಿ:
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾರತ ಕೊರೋನಾ ಲಸಿಕೆ ಲಭ್ಯತೆ ಕುರಿತು ಮಾಹಿತಿ ನೀಡಿದ್ದಾರೆ. ಈ ವರ್ಷಾಂತ್ಯದಲ್ಲಿ ಭಾರತದ ಕೊರೋನಾ ಲಸಿಕೆ ಸಿದ್ಧವಾಗಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಭಾರತದ 2 ಕೊರೋನಾ ವೈರಸ್ ಲಸಿಕೆ ತಯಾರಿಕಾ ಫಾರ್ಮಾ 2ನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. ಪ್ರಾಯೋಗಿಕ ಹಂತದ ಪರೀಕ್ಷೆಗಳು ಬಹುತೇಕ ಮುಗಿದೆ ಎಂದು ICMR ಇತ್ತೀಚೆಗೆ ಹೇಳಿದೆ.