ಏಷ್ಯಾನೆಟ್‌ ನ್ಯೂಸ್ ಮರಾಠಿ ಡಿಜಿಟಲ್ ಅನಾವರಣಗೊಳಿಸಿದ ಡಿಸಿಎಂ ದೇವೇಂದ್ರ ಫಡ್ನವಿಸ್!

By Suvarna NewsFirst Published Dec 5, 2023, 9:50 PM IST
Highlights

ಏಷ್ಯಾನೆಟ್‌ ನ್ಯೂಸ್.ಕಾಂ ಕುಟುಂಬ ವಿಸ್ತರಣೆಯಾಗಿದೆ.ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಇದೀಗ ಏಷ್ಯಾನೆಸ್ ನ್ಯೂಸ್ ಮರಾಠಿ ಅನಾವರಣ ಮಾಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಮರಾಠಿ ಪೋರ್ಟಲ್ ಅನಾವರಣ ಮಾಡಿದ್ದಾರೆ.
 

ಮುಂಬೈ(ಡಿ.05) ನ್ಯೂಸ್ ಹಾಗೂ ಎಂಟರ್ಟೈನ್ಮೆಂಟ್‌ ಕ್ಷೇತ್ರದಲ್ಲಿ ಜನರ ಪ್ರೀತಿಗೆ ಪಾತ್ರರಾಗಿರುವ ಏಷ್ಯಾನೆಟ್‌ ನ್ಯೂಸ್‌.ಕಾಮ್‌  ಹಾಗೂ  ಏಷ್ಯಾನೆಟ್ ನ್ಯೂಸ್ ಮೀಡಿಯಾ ಹಾಗೂ ಎಂಟರ್‌ಟೇನ್‌ಮೆಂಟ್‌ ಪ್ರೈ.ಲಿ. ಇದೀಗ ತನ್ನ ಕುಟುಂಬವನ್ನು ವಿಸ್ತರಿಸಿದೆ. ಇಂದು(ಡಿ.05) ಮುಂಬೈನಲ್ಲಿ ಏಷ್ಯಾನೆಟ್ ನ್ಯೂಸ್ ಮರಾಠಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನ್ನು ಅನಾವರಣ ಮಾಡಲಾಗಿದೆ. ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಏಷ್ಯಾನೆಟ್ ನ್ಯೂಸ್ ಮರಾಠಿ ಡಿಜಿಟಲ್ ಅನಾವರಣ ಮಾಡಿದ್ದಾರೆ.

ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಪ್ಲಾಟ್‌ಫಾರ್ಮ್ ಅನಾವರಣ ಮಾಡಿ ಮಾತನಾಡಿದ  ದೇವಂದ್ರ ಫಡ್ನವಿಸ್, ಸದ್ಯ ಎದುರಿಸುತ್ತಿರುವ ನಕಲಿ ಸುದ್ದಿ, ಡೀಪ್ ಫೇಕ್, ತಪ್ಪು ಮಾಹಿತಿಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಡಿಜಿಟಲ್ ಮಾಧ್ಯಮಗಳು ನಿರ್ವಹಿಸಬೇಕು ಎಂದರು. ಏಷ್ಯಾನೆಟ್ ನ್ಯೂಸ್‌ನಂತಹ ನಿಜವಾದ ಸುದ್ದಿ ಪೂರೈಸುವ ಸಂಸ್ಥೆಗಳು  ನಕಲಿ, ಡೀಫ್ ಫೇಕ್, ತಪ್ಪು ಮಾಹಿತಿ ಸುದ್ದಿಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕು. ತಪ್ಪು ಮಾಹಿತಿ ಹರಡದಂತೆ ಹಾಗೂ ಮರಾಠಿಗರಿಗೆ ವಿಶ್ವಾಸಾರ್ಹ ಸುದ್ದಿಯನ್ನು ತಲುಪಿಸುವಲ್ಲಿ ಕೆಲಸ ಮಾಡಬೇಕು ಎಂದರು.  

Latest Videos

ಯೂಟ್ಯೂಬ್‌ನಿಂದ ಸಿಲ್ವರ್‌ ಬಟನ್‌ ಫಲಕ ಸ್ವೀಕರಿಸಿದ ಏಷ್ಯಾನೆಟ್‌ನ ಮೂರು ಸಹವರ್ತಿ ಚಾನೆಲ್‌ಗಳು!

ಕನ್ನಡ, ಇಂಗ್ಲೀಷ್, ಹಿಂದಿ, ಮಳೆಯಾಂಳ, ತಮಿಳು, ತೆಲುಗು, ಬಂಗಾಳಿ ಭಾಷೆಯಲ್ಲಿ ಈಗಾಗಲೇ ಸುದ್ದಿ ನೀಡುತ್ತಿರುವ ಏಷ್ಯಾನೆಟ್ ಡಿಜಿಟಲ್ ಮಾಧ್ಯಮ ಇದೀಗ 8ನೇ ಮಾಧ್ಯಮವಾಗಿ ಏಷ್ಯಾನೆಟ್ ನ್ಯೂಸ್ ಮರಾಠಿ ಸೇರಿಕೊಂಡಿದೆ. ರಾಷ್ಟ್ರೀಯ ಹಾಗೂ ಜಾಗತಿಕವಾಗಿ ಹೆಜ್ಜೆಗುರುತು ಸ್ಥಾಪಿಸಿರುವ ಏಷ್ಯಾನೆಟ್‌ ನ್ಯೂಸ್‌.ಕಾಮ್‌ ಸುದ್ದಿ ಮಾಧ್ಯಮ ಇದೀಗ ಪಶ್ಚಿಮದತ್ತ ತನ್ನ ವ್ಯಾಪ್ತಿ ವಿಸ್ತರಿಸಿದೆ.

ಏಷ್ಯಾನೆಟ್ ನ್ಯೂಸ್.ಕಾಮ್‌ ತನ್ನ ಹಾಗೂ ವಿಶ್ವಾಸಾರ್ಹತೆ ಮೂಲಕ ಜನರ ಮನ್ನಣೆಗಳಿಸಿದೆ. ಪ್ರಾದೇಶಿಕ ಒಳನೋಟ, ಪ್ರಾದೇಶಿಕ ಮಾಹಿತಿಗಳನ್ನು ಇತರರಿಗಿಂತ ಮೊದಲು ಹಾಗೂ ನಿಖರವಾಗಿ ನೀಡುವ ಮೂಲಕ ಪ್ರತಿ ರಾಜ್ಯದ ಜನರ ಮನಸ್ಸಿನಲ್ಲಿ ಬೇರೂರಿದೆ. ಇದೀಗ ಮಹಾರಾಷ್ಟ್ರ ಕೇಂದ್ರಿಕೃತ ಸುದ್ದಿ ಹಾಗೂ ವಿಡಿಯೋಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ಏಷ್ಯಾನೆಟ್ ನ್ಯೂಸ್.ಕಾಮ್‌ ಹೊಂದಿದೆ. 

ಮರಾಠಿ ಮಾಧ್ಯಮ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಏಷ್ಯಾನೆಟ್ ನ್ಯೂಸ್ ಗ್ರೂಪ್ ಎಕ್ಸಿಕ್ಯೂಟೀವ್ ಚೇರ್ಮೆನ್ ರಾಜೇಶ್ ಕಾಲ್ರಾ, ಮಹಾರಾಷ್ಟ್ರ ದೇಶದಲ್ಲಿ ಅತೀ ಹೆಚ್ಚು ಇಂಟರ್ನೆಟ್ ಬಳಕೆಯಾಗುತ್ತಿರುವ ರಾಜ್ಯಗಳ ಪೈಕಿ 3ನೇ ಸ್ಥಾನದಲ್ಲಿದೆ. ಭಾರತದ ಪ್ರಮುಖ ಭಾಷೆಯಾಗಿ ಮರಾಠಿ ಗುರುತಿಸಿಕೊಂಡಿದೆ. ಏಷ್ಯಾನೆಟ್ ನ್ಯೂಸ್.ಕಾಮ್‌ ಇತರ ಭಾಷೆಗಳಿಗೆ ವಿಸ್ತರಣೆ ಕುರಿತು ಚರ್ಚಿಸುವಾಗ ಮರಾಠಿ ನಮ್ಮ ಸರ್ವಾನುಮತದ ಆಯ್ಕೆಯಾಗಿತ್ತು. ಮಹಾರಾಷ್ಟ್ರ ಜನತೆಗೆ ಅತ್ಯಂತ ವಿಶ್ವಾಸಾರ್ಹ, ಉತ್ತಮ ಗುಣಮಟ್ಟದ ವಿಷಯವನ್ನು ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.  

ಏಷ್ಯಾನೆಟ್ ನ್ಯೂಸ್.ಕಾಮ್‌ ಇತರ 7 ಭಾಷೆಗಳಲ್ಲಿ ಸಾಧಿಸಿರುವ ಯಶಸ್ಸನ್ನು ಇದೀಗ ಮರಾಠಿ ಭಾಷೆಯಲ್ಲಿ ಸಾಧಿಸುಬ ಬದ್ಧತೆಯನ್ನು ಹೊಂದಿದ್ದೇವೆ. ಇದರ ಜೊತೆಗೆ ಮಹಾರಾಷ್ಟ್ರ ಜನರು  ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವ ಗುರಿ ಹೊಂದಿದ್ದೇವೆ. ನಮ್ಮ ಪ್ರೇಕ್ಷಕರು, ಓದುಗರಿಗೆ ನವೀಕೃತ, ಪ್ರಾಮಾಣಿಕ, ಹಾಗೂ ಗುಣಮಟ್ಟದ ವಿಷಗಳನ್ನು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏಷ್ಯಾನೆಟ್ ನ್ಯೂಸ್ ಗ್ರೂಪ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀರಜ್ ಕೊಹ್ಲಿ ಹೇಳಿದ್ದಾರೆ. 

Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ 

ಪ್ರಪಂಚದಾದ್ಯಂತ ಹರಡಿರುವ ಮರಾಠಿ ವಲಸಿಗರಿಗೆ ನೇರ, ದಿಟ್ಟ, ನಿರಂತರ ಸುದ್ದಿ ತಲುಪಿಸಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ನಮ್ಮ ಪತ್ರಕರ್ತರ ತಂಡ ಹಗಲಿರುಳು ಕೆಲಸ ಮಾಡುವ ಮೂಲಕ ಮರಾಠಿಗರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಏಷ್ಯಾನೆಟ್ ನ್ಯೂಸ್ ಗ್ರೂಪ್ ಸಿಒಒ ಸಮರ್ಥ್‌ ಶರ್ಮಾ ಹೇಳಿದ್ದಾರೆ.  

ಏಷ್ಯಾನೆಟ್ ನ್ಯೂಸ್.ಕಾಮ್‌ ಮರಾಠಿ ನ್ಯೂಸ್ ಅನಾವರಣ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇನ್ನು ಮಹಾರಾಷ್ಟ್ರ ಜಲಸಂಪನ್ಮೂಲ ನಿಯಂತ್ರಣ ಪ್ರಾಧಿಕಾರ ಕಾರ್ಯದರ್ಶಿ ರಾಮನಾಥ್ ಸೋನಾವನೆ, ನಟ ಹಾಗೂ ನರ್ದೇಶಕ ಪ್ರವೀಣ್ ದಾಬಸ್, ನಿರ್ಮಾಪಕಿ ಪ್ರೀತಿ ಜಿಂಗಾನಿಯಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಏಷ್ಯಾನೆಟ್ ನ್ಯೂಸ್.ಕಾಂ ದೇಶದ ಪ್ರಮುಖ ಡಿಜಿಟಲ್ ಸುದ್ದಿ ಮಾಧ್ಯಮವಾಗಿ ಬೆಳೆದು ನಿಂತಿದೆ. ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ 80 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದೀಗ ಮರಾಠಿ ನ್ಯೂಸ್ ಸೇರಿಕೊಳ್ಳುವ ಮೂಲಕ ದೇಶಾದ್ಯಂತ ಹಾಗೂ ಪ್ರಪಂಚದಾದ್ಯಂತ ಹೆಜ್ಜೆಗುರುತು ವಿಸ್ತರಿಸಲು ಸಜ್ಜಾಗಿದೆ.  ANN ಗ್ರೂಪ್( ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್) ಸುವರ್ಣ ಟಿವಿ ಚಾನೆಲ್( ಏಷ್ಯಾನೆಟ್ ಸುವರ್ಣನ ನ್ಯೂಸ್ ಕನ್ನಡ ಹಾಗೂ ಏಷ್ಯಾನೆಟ್ ನ್ಯೂಸ್ ಮಲೆಯಾಳಂ), ಕನ್ನಡ ಪ್ರಭ ದಿನಪತ್ರಿಕೆ, ಇಂಡಿಗೋ ಮ್ಯೂಸಿಕ್ ರೇಡಿಯಾ ಚಾನೆಲ್ ಹಾಗೂ 8 ಭಾಷೆಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಹರಡಿಕೊಂಡಿದೆ. 

click me!