ಕರಣಿ ಸೇನಾ ನಾಯಕನ ಹತ್ಯೆ ಹೊಣೆ ಹೊತ್ತ ಗೋಲ್ಡಿ ಬ್ರಾರ್ ಗ್ಯಾಂಗ್, ಸಿಸಿಟಿ ದೃಶ್ಯ ಬಹಿರಂಗ!

By Suvarna News  |  First Published Dec 5, 2023, 8:37 PM IST

ಬಲಪಂಥೀಯ ಸಂಘಟನೆ ಕರಣಿ ಸೇನಾ ನಾಯಕ ಸುಖದೇವ್ ಮೇಲೆ ಭೀಕರ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಸಿಸಿಟಿ ದೃಶ್ಯ ಬಹಿರಂಗವಾಗಿದೆ. ದಾಳಿ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. 


ಜೈಪುರ(ಡಿ.05) ಕರಣಿ ಸೇನಾ ಸಂಘಟನೆ ನಾಯಕ ಸುಖದೇವ್ ಸಿಂಗ್ ಗೊಗೆಮಡಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ವಗೃಹದಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಭೇಟಿ ನೆಪ ಹೇಳಿ ಸುಖದೇವ್ ಮನೆಗೆ ಆಗಮಿಸಿದ ಮೂವರು ಅಪರಿಚಿತರು, ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇತ್ತ ಸುಖದೇವ್ ಪಕ್ಕದಲ್ಲಿದ್ದವರ ಮೇಲೂ ಗುಂಡಿನ ದಾಳಿಯಾಗಿದೆ. ಸುಖದೇವ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಹೊತ್ತುಕೊಂಡಿದೆ.

ಸುಖದೇವ್ ಹತ್ಯೆ ಸಿಸಿಟಿವಿ ವಿಡಿಯೋ ಬಹಿರಂಗವಾಗಿದೆ. ಬಲಪಂಥೀಯ ಸಂಘಟನೆ ನಾಯಕ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದಲೂ ಬೆದರಿಕೆ ಎದುರಿಸಿದ್ದಾರೆ. ಇದೀಗ ಗೋಲ್ಡಿ ಬ್ರಾರ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ. 

Tap to resize

Latest Videos

ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ Sukhdev Singh Gogamedi ಮರ್ಡರ್‌!

ಮನೆಯಲ್ಲಿದ್ದ ಕುಳಿತಿದ್ದ ಸುಖದೇವ್ ಭೇಟಿಯಾಗಲು ಮೂವರು ಆಗಮಿಸಿದ್ದಾರೆ. ಮಾತುಕತೆ ನಡೆಸುತ್ತಿದ್ದ ನಡುವೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಮನೆ ಹೊರಗಡೆ ಭದ್ರತಾ ಸಿಬ್ಬಂದಿ ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ಮನೆಯತ್ತ ಧಾವಿಸಿದ್ದಾರೆ. ಈ ವೇಳೆ ಆಗಂತುಕರು ಭದ್ರತಾ ಸಿಬ್ಬಂದಿ ಮೇಲೂ ದಾಳಿ ನಡೆಸಿದ್ದಾರೆ. ಸುಖದೇವ್ ಜೊತೆಗಿದ್ದ ಇಬ್ಬರ ಮೇಲೂ ಗುಂಡಿನ ದಾಳಿಯಾಗಿದೆ. ಓರ್ವ ದಾಳಿಕೋರ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದಾನೆ. ಇತರರ ಪರಾರಿಯಾಗಿದ್ದಾರೆ. 

 

VIDEO | CCTV footage shows two men firing multiple shots at Rashtriya Rajput Karni Sena president Sukhdev Singh Gogamedi and another man standing at the door.

Gogamedi died, while one of his security personnel and another person were injured in the firing.

(Disclaimer: PTI… pic.twitter.com/2W4TQely7C

— Press Trust of India (@PTI_News)

 

ಕಳೆದ ವರ್ಷ ಇದೇ ಕರಣಿ ಸೇನಾ ಸಂಘಟನೆ ಸದಸ್ಯ ರೋಹಿತ್‌ ಸಿಂಗ್‌ ರಜಪೂತ್‌ (28) ಅವರನ್ನು ಸಾರ್ವಜನಿಕವಾಗಿ ಮೂವರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.  ಇಟಾರ್ಸಿ ಪಟ್ಟಣದ ಕರ್ಣಿಸೇನಾ ಕಾರ್ಯದರ್ಶಿಯಾಗಿದ್ದ ರೋಹಿತ್‌ನನ್ನು ಪಟ್ಟಣಪಂಚಾಯತ್‌ ಕಚೇರಿಯ ಎದುರಿನಲ್ಲೇ ಕೊಲೆ ಮಾಡಲಾಗಿತ್ತು. ಕೊಲೆಯನ್ನು ತಡೆಯಲು ಬಂದ ರೋಹಿತ್‌ ಸ್ನೇಹಿತ ಸಚಿನ್‌ ಪಟೇಲ್‌ಗೂ ಚಾಕುವಿನಿಂದ ಇರಿಯಲಾಗಿತ್ತು. ಮಾರುಕಟ್ಟೆಯ ಟೀ ಅಂಗಡಿಯ ಬಳಿ ನಿಂತದ್ದ ರೋಹಿತ್‌ ಮತ್ತು ಆತನ ಸ್ನೇಹಿತನ ಮೇಲೆ ಬೈಕಿನಲ್ಲಿ ಬಂದ ಮೂವರು ದಾಳಿ ಮಾಡಿದ್ದಾರೆ. ಈ ಗಲಾಟೆಯ ಸಮಯಲ್ಲಿ ಓರ್ವ ಚಾಕುವನ್ನು ಹೊರತೆಗೆದು ರೋಹಿತ್‌ ಹಲವು ಬಾರಿ ಚುಚ್ಚಿದ್ದ.

ಜೋಧಾ ಅಕ್ಬರ್‌, ಪದ್ಮಾವತ್‌ ಚಿತ್ರಗಳ ನಿರ್ಮಾಪಕರಿಗೆ ನಿದ್ರೆಗೆಡಿಸಿದ್ದ 'ಕರ್ಣಿ ಸೇನಾ' ಸಂಸ್ಥಾಪಕ ವಿಧಿವಶ!
 

click me!