ಒವೈಸಿ ಭೇಟಿಗೆ ಗಲಾಟೆ: ಔರಂಗಜೇಬ್ ಸಮಾಧಿ 5 ದಿನಗಳ ಕಾಲ ಬಂದ್

Published : May 19, 2022, 01:21 PM IST
ಒವೈಸಿ ಭೇಟಿಗೆ ಗಲಾಟೆ: ಔರಂಗಜೇಬ್ ಸಮಾಧಿ 5 ದಿನಗಳ ಕಾಲ ಬಂದ್

ಸಾರಾಂಶ

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿ ಸಮಾಧಿಗೆ ಭೇಟಿ ನೀಡಿದ ಒವೈಸಿ ಸಹೋದರ ವಿವಾದದ ಬಳಿಕ ಸಮಾಧಿ ಸ್ಥಳ ಮುಚ್ಚಿದ ಪುರಾತತ್ವ ಇಲಾಖೆ

ಮುಂಬೈ: ಭಾರತೀಯ ಪುರಾತತ್ವ ಇಲಾಖೆಯೂ ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ಇರುವ ಸ್ಥಳವನ್ನು ಐದು ದಿನಗಳ ಕಾಲ ಮುಚ್ಚಿದೆ. ಮೇ.12 ರಂದು ಅಕ್ಬರುದ್ದೀನ್‌ ಓವೈಸಿ ಈ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು. ಇದು ಈ ಭೇಟಿಯೂ ಒವೈಸಿ ಅವರ ಎಐಎಂಐಎಂ ಪಕ್ಷ ಹಾಗೂ  ರಾಜ್ಯದ ಇತರ ರಾಜಕೀಯ ಪಕ್ಷಗಳ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.ಹೀಗಾಗಿ ಈ ಸ್ಮಾರಕವನ್ನು ರಕ್ಷಿಸುವ ದೃಷ್ಟಿಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗುರುವಾರ ಸ್ಮಾರಕವನ್ನು ಐದು ದಿನಗಳವರೆಗೆ ಮುಚ್ಚಲಾಗಿದೆ ಎಂದು ಘೋಷಿಸಿದೆ. 

ಇದಕ್ಕೂ ಮುನ್ನ ಮಸೀದಿ ಸಮಿತಿಯವರು (mosque committee) ಆ ಸ್ಥಳಕ್ಕೆ ಬೀಗ ಹಾಕಲು ಯತ್ನಿಸಿದರಾದರೂ ನಾವೇ ಅದನ್ನು ತೆರೆದೆವು. ಬುಧವಾರ, ನಾವು ಮುಂದಿನ ಐದು ದಿನಗಳವರೆಗೆ ಸಮಾಧಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಮತ್ತು ನಂತರ ಅದನ್ನು ತೆರೆಯಲು ಅಥವಾ ಅದನ್ನು ಇನ್ನೂ ಐದು ದಿನಗಳವರೆಗೆ ಮುಚ್ಚಲು ನಿರ್ಧರಿಸುತ್ತೇವೆ  ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಔರಂಗಾಬಾದ್ ವೃತ್ತದ ಅಧೀಕ್ಷಕ (Aurangabad circle superintendent) ಮಿಲನ್ ಪ್ರಸಾದ್ ಚೌಲೆ (Milan Prasad Chauley) ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮೊಘಲ್ ಚಕ್ರವರ್ತಿ ಔರಂಗಜೇಬ್ (Mughal emperor Aurangzeb) ಸಮಾಧಿಯನ್ನು ಐದು ದಿನಗಳ ಕಾಲ ಮುಚ್ಚಲಾಗುವುದು ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ (deputy CM Ajit Pawar) ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ಕೂಡ ವರದಿ ಮಾಡಿದೆ. ಈ ಮಧ್ಯೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ನಾಯಕ ಗಜಾನನ್ ಕಾಳೆ (Gajanan Kale) ಅವರು ಸಮಾಧಿಯ ಅಸ್ತಿತ್ವದ ಅಗತ್ಯವನ್ನು ಪ್ರಶ್ನಿಸಿದ ನಂತರ ಔರಂಗಾಬಾದ್‌ನ (Aurangabad) ಖುಲ್ತಾಬಾದ್‌ನಲ್ಲಿರುವ (Khultabad) ಮಸೀದಿ ಸಮಿತಿಯು ಅದಕ್ಕೆ ಬೀಗ ಹಾಕಲು ಪ್ರಯತ್ನಿಸಿದ ನಂತರ ಭಾರತೀಯ ಸರ್ವೇಕ್ಷಣಾ ಇಲಾಖೆ ಈ ಕ್ರಮ ಕೈಗೊಂಡಿದೆ.

"ಇನ್ನೊಂದು ಮಸೀದಿ ಕಳೆದುಕೊಳ್ಳಲ್ಲ" ಓವೈಸಿ ಎಚ್ಚರಿಕೆ: ಭಯದ ನಡುವೆಯೇ ಕಾಶಿ ಜ್ಞಾನ​ವಾಪಿ ಸಮೀಕ್ಷೆ!

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಸಹೋದರನೂ ಆಗಿರುವ ಅಕ್ಬರುದ್ದೀನ್ ಓವೈಸಿಯವರು (Akbaruddin Owaisi) ಮೇ 12 ರಂದು ಔರಂಗಜೇಬ್‌ನ ಮಸೀದಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಆದರೆ ನಿರಂಕುಶವಾದಿಗೆ ಗೌರವ ಸಲ್ಲಿಸಿದ್ದಕ್ಕೆ ಮಹಾರಾಷ್ಟ್ರದಲ್ಲಿ ಬಿಜೆಪಿ, ಎಂಎನ್‌ಎಸ್ ನಾಯಕರು ಅಕ್ಬರುದ್ದೀನ್ ಓವೈಸಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. 

Hubli Riots: ಗಲಭೆಕೋರರಿಗೆ ಇಫ್ತಿಯಾರ್‌ ಕೂಟ ನೀಡಲು ಮುಂದಾದ AIMIM ಮುಖಂಡರು

ನನ್ನ ಮಾತನ್ನು ಕೇಳಿ ಓವೈಸಿಯವರೆ ಔರಂಗಜೇಬ್ ಸಮಾಧಿ ಗುರುತಿಸಿ ನಾಯಿ ಕೂಡ  ಮೂತ್ರ ವಿಸರ್ಜಿಸುವುದಿಲ್ಲ ಎಂದು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಕಳೆದ ಭಾನುವಾರ ಸಾರ್ವಜನಿಕ ಸಮಾವೇಶವೊಂದರಲ್ಲಿ ಹೇಳಿದ್ದರು. ಈ ನಡುವೆ ಉತ್ತರ ಪ್ರದೇಶದ ಆಗ್ರಾದ (Agra) ಮೇಯರ್ ಮೊಘಲ್ ದೊರೆಗಳ (Mughal ruler) ಹೆಸರನ್ನು ಹೊಂದಿರುವ ಎಲ್ಲಾ ಫಲಕಗಳನ್ನು ತೆಗೆದುಹಾಕಲು ಕರೆ ನೀಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!