ಕರ್ನಲ್ ಖುರೇಶಿ, ವ್ಯೋಮಿಕಾ ಸುದ್ದಿಗೋಷ್ಠಿ ‘ಬೂಟಾಟಿಕೆ’ ಎಂದ ಪ್ರೊಫೆಸರ್‌ ಅರೆಸ್ಟ್‌

Published : May 19, 2025, 06:06 AM ISTUpdated : May 19, 2025, 08:37 AM IST
 ಕರ್ನಲ್ ಖುರೇಶಿ, ವ್ಯೋಮಿಕಾ ಸುದ್ದಿಗೋಷ್ಠಿ ‘ಬೂಟಾಟಿಕೆ’ ಎಂದ ಪ್ರೊಫೆಸರ್‌ ಅರೆಸ್ಟ್‌

ಸಾರಾಂಶ

ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ನ ಬಗ್ಗೆ ಸರಣಿ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಲ್‌ ಸೋಫಿಯಾ ಖುರೇಶಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ. 

ಚಂಡೀಗಢ (ಮೇ.19): ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ನ ಬಗ್ಗೆ ಸರಣಿ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಲ್‌ ಸೋಫಿಯಾ ಖುರೇಶಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ. 

ಬಂಧಿತ ಪ್ರಾಧ್ಯಾಪಕ ಅಲಿ ಖಾನ್‌ ಮಹ್ಮುದಾಬಾದ್‌ ಅವರು ಚಂಡೀಗಢದಲ್ಲಿನ ಅಶೋಕಾ ವಿವಿಯಲ್ಲಿ ರಾಜಕೀಯ ಶಾಸ್ತ್ರದ ಮುಖ್ಯಸ್ಥರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಪತ್ರಿಕಾಗೋಷ್ಠಿ ಕೇವಲ ಬೂಟಾಟಿಕೆ. ಹೇಳುವುದೆಲ್ಲವೂ ಜಾರಿಯಾಗಬೇಕು’ ಎಂದು ಪೋಸ್ಟ್‌ ಹಾಕಿದ್ದರು. ಇದರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಹರ್ಯಾಣ ಮಹಿಳಾ ಆಯೋಗ ಸಹ ಅಲಿ ಖಾನ್‌ಗೆ ಸಮನ್ಸ್‌ ನೀಡಿದೆ.

ಇದನ್ನೂ ಓದಿ: ಭಾರತದ್ದೇ ‘ರೀಲ್ಸ್‌ ಸ್ಸಾರ್‌’ಗಳ ಬಳಸಿ ಭಾರತ ವಿರುದ್ಧವೇ ಪಾಕ್‌ ಸಂಚು! ಜ್ಯೋತಿ ಕೊಟ್ಟ ಮಾಹಿತಿಯಿಂದಲೇ ಪಹಲ್ಗಾಂ ದಾಳಿ!? 

ಯೋಗೇಶ್ ಜಥೇರಿ ಅವರು ಬಿಎನ್‌ಎಸ್‌ನ ಸೆಕ್ಷನ್ 196, 197, 152 ಮತ್ತು 299 ರ ಅಡಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು ಬಿಎನ್‌ಎಸ್‌ನ ಸೆಕ್ಷನ್ 353, 79, 152, 169 (1) ರ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆಗಾಗಿ ಪೊಲೀಸರು ಅವರ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ನೆರವಾದ ಬಾಲಕನಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2026
ಭಾರತದಲ್ಲಿ ಮೊಳಗಿದ ಬಾಯ್ಕಾಟ್ ಥಾಯ್ಲೆಂಡ್ ಕೂಗು, ವಿಷ್ಣಮೂರ್ತಿ ಧ್ವಂಸಕ್ಕೆ ಆಕ್ರೋಶ