ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು

Published : Mar 31, 2026, 03:13 PM IST
Ashok kharat scandal case

ಸಾರಾಂಶ

ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು, ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಚೇರಿಯಲ್ಲೇ ಬಳಸಿಕೊಂಡ ಪ್ರಕರಣದಲ್ಲಿ ಇದೀಗ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದೆ. 

ನಾಸಿಕ್ (ಮಾ.31) ಆಧ್ಯಾತ್ಮ ಗುರೂಜಿ, ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖಾರಟ್ ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಅಶೋಕ್ ಖಾರಟ್ ಬಂಧಿಸಿದ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಅಶೋಕ ಖಾರಟ್ ಕಚೇರಿಯಿಂದ ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಕ್ಲೌಡ್ ಸ್ಟೋರೇಜ್ ಸೇರಿದಂತೆ ಹಲವು ಮೂಲಗಳಿಂದ ರಾಸಲೀಲೆ ವಿಡಿಯೋ ವಶಪಡಿಸಿಕೊಳ್ಳಲಾಗಿದೆ. 150ಕ್ಕೂ ಹೆಚ್ಚು ಮಹಿಳಯನ್ನು ಪೂಜೆ ಹೆಸರಿನಲ್ಲಿ ಬಳಸಿಕೊಂಡಿದ್ದಾನೆ. ಈ ಪೈಕಿ ಹಲವು ಮಹಿಳೆಯರ ಗಂಡಂದಿರನ್ನು ಹೊರಗೆ ಕಳುಹಿಸಿ ಮಂಚದಾಟ ಆಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದೀಗ ಪ್ರಕರಣ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಶ್ರೀಮಂತ ಉದ್ಯಮಗಳ ಪತ್ನಿಯರನ್ನಈತ ಬಳಸಿಕೊಂಡಿರುವುದು ಬಯಲಾಗಿದ್ದು ಮಾತ್ರವಲ್ಲ, ಈ ಪ್ರಕರಣದಲ್ಲಿ ಪತ್ನಿಯರನ್ನು ಬದಿಸುವ ಅಪರಾಧ ಕೃತ್ಯವೂ ನಡೆಯುತ್ತಿತ್ತು ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಗಂಭೀರ ಆರೋಪ

ಅಶೋಕ್ ಖಾರಟ್ ಪ್ರಕರಣದ ತನಿಖೆ ನಡುವೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅಶೋಕ ಖಾರಟ್ ಬಳಿಕ ಮಹಾರಾಷ್ಟ್ರ ಸರ್ಕಾರದ ಹಲವು ನಾಯಕರು, ಅಧಿಕಾರಿಗಳು ಸಂಪರ್ಕದಲ್ಲಿದ್ದರು. ಶ್ರೀಮಂತ ಉದ್ಯಮಿಗಳು, ಪ್ರಮುಖರು ಅಶೋಕ ಖಾರಟ್ ಕಚೇರಿ ಬಳಿ ಕಾಯುತ್ತಿದ್ದರೆ, ಅವರ ಪತ್ನಿಯರನ್ನು ಈ ಕಳ್ಳ ಗುರೂಜಿ ಬಳಸಿಕೊಳ್ಳುತ್ತಿದ್ದ. ಈ ಪ್ರಕರಣದಲ್ಲಿ ಹಲವರು ಶ್ರೀಮಂತರುು ಪತ್ನಿಯರನ್ನು ಸ್ವಾಪಿಂಗ್ (ಬದಲಿಸುವ) ಪದ್ಧತಿ ಇಟ್ಟುಕೊಂಡಿದ್ದರು. ಒಂದು ರಾತ್ರಿಗೆ ಪತ್ನಿಯರ ಸ್ವಾಪಿಂಗ್ ಮಾಡುವ ಪ್ರಕ್ರಿಯೆಯ ಕೂಡ ಅಶೋಕ್ ಖಾರಟ್ ನೇತೃತ್ವದಲ್ಲಿ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿದೆ.

ಶಿವಸೇನೆ ನಾಯಕ ಹಾಗಾ ಮಹಾರಾಷ್ಟ್ರ ಸಚಿವ ದಿಲೀಪ್ ಕೇಸರ್ಕರ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ದಿಲೀಪ್ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಇವರ ಮೂಲಕ ಹಲವು ಅಧಿಕಾರಿಗಳು ಅಶೋಕ್ ಖಾರಟ್ ಭೇಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ದಿಲೀಪ್, ಗುರೂಜಿ ಅನ್ನೋ ಕಾರಣದಿಂದ ಸಂಪರ್ಕದಲ್ಲಿದ್ದೆ, ಗೌರವ ನೀಡುತ್ತಿದ್ದೆ. ಇದನ್ನು ಹೊರತುಪಡಿಸಿ ಯಾವುದೇ ವ್ಯವಹಾರವಿಲ್ಲ ಎಂದಿದ್ದಾರೆ.

ಎಸ್‌ಐಟಿ ತಂಡದಿಂದ ತನಿಖೆ

ಅಶೋಕ್ ಖಾರಟ್ ಪ್ರಕರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ. ಹಿಂದೂಗಳು ಅತ್ಯಂತ ಗೌರವದಿಂದ ಕಾಣುವ ಆಧ್ಯಾತ್ಮ ಗುರೂಜಿಯ ಮುಖವಾಡ ಧರಿಸಿಕೊಂಡ ಅಶೋಕ್ ಖಾರಟ್, ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದ. ತಮ್ಮ ಸಂಕಷ್ಟ ಪರಿಹಾರಕ್ಕಾಗಿ ಗುರೂಜಿ ಬಳಿ ಬಂದರೆ ಅವರಿಗೆ ಪ್ರಸಾದ ರೂಪದಲ್ಲಿ ವಯಾಗ್ರ ನೀಡುತ್ತಿದ್ದ. ಬಳಿಕ ಪೂಜೆ ಹೆಸರಿನಲ್ಲಿ ಬಳಸಿಕೊಳ್ಳುತ್ತಿದ್ದ. ಈತನ ಹಲವು ವಿಡಿಯೋಗಳು ಹೊರಬಂದಿದೆ. ಅಶೋಕ ಖಾರಟ್ ಕಚೇರಿ, ಫಾರ್ಮ್ ಹೌಸ್ ಸೇರಿದಂತೆ ಹಲವು ಆಸ್ತಿಗಳನ್ನು ಸೀಲ್ ಮಾಡಲಾಗಿದೆ. ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. 1000 ಕೋಟಿ ರೂಪಾಯಿಗೂ ಅಧಿಕ ಆದಾಯಗಳಿಸುರುವುದು ಪತ್ತೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಸ್ಥಾನಕ್ಕೆ ಪಂಜಾಬ್‌ನಿಂದ 'ವಾಟರ್ ಶಾಕ್': 6 ದಶಕಗಳ ಬಾಕಿ ₹1.44 ಲಕ್ಷ ಕೋಟಿ ಪಾವತಿಗೆ ಭಗವಂತ್ ಮಾನ್ ಪಟ್ಟು!
ಜೈಶ್ ಸಂಘಟನೆಯ ಮತ್ತೊಬ್ಬ ಉಗ್ರನ ನಿಗೂಢ ಸಾವು! ಪಾಕಿಸ್ತಾನದಲ್ಲಿ ನಡೆದದ್ದೇನು? ಯಾರೀ ಭಯೋತ್ಪಾದಕ