ಸಚಿನ್ ಪೈಲಟ್ ಬಣದಿಂದ ಫೋನ್ ಟ್ಯಾಪ್ ಅಸ್ತ್ರ ಪ್ರಯೋಗ; ಇಕ್ಕಟ್ಟಿಗೆ ಸಿಲುಕಿದ ರಾಜಸ್ಥಾನ ಸಿಎಂ!

By Suvarna NewsFirst Published Jun 13, 2021, 7:32 PM IST
Highlights
  • ರಾಜಸ್ಥಾನ ಕಾಂಗ್ರೆಸ್ ಸರ್ಕಾರದೊಳಗೆ ಕಿತ್ತಾಟ
  • ಸಿಎಂ ಅಶೋಕ್ ಗೆಹ್ಲೋಟ್‌ಗೆ ಮತ್ತೆ ಫೋನ್ ಟ್ಯಾಪ್ ಸಂಕಷ್ಟ
  • ಸಚಿನ್ ಪೈಲಟ್ ಬಣ ಆರೋಪದಿಂದ ಭುಗಿಲೆದ್ದ ಅಸಮಾಧಾನ

ಜೈಪುರ(ಜೂ.13): ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಬಹಿರಂಗವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಹಾಗೂ ಬಂಡಾಯ ಸಚಿನ್ ಪೈಲಟ್ ಬಣ ಮತ್ತೊಮ್ಮೆ ಬಹಿರಂಗವಾಗಿ ಕಿತ್ತಾಟ ಆರಂಭಿಸಿದೆ. ಮತ್ತೆ ಅಶೋಕ್ ಗೆಹ್ಲೋಟ್ ಮೇಲೆ ಫೋನ್ ಟ್ಯಾಪಿಂಗ್ ಆರೋಪದ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದೆ. ಈ ಮೂಲಕ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

ಕಾಂಗ್ರೆಸ್‌ಗೆ ರೆಡ್‌ ಅಲರ್ಟ್: ದೆಹಲಿಗೆ ಹಾರಿದ ಪೈಲಟ್!.

ಸಿಎಂ ಅಶೋಕ್ ಗೆಹ್ಲೋಟ್ ಬಣದ ವಿರುದ್ಧ ಕತ್ತಿ ಮಸೆಯುತ್ತಿರುವ ಸಚಿನ್ ಪೈಲಟ್ ಬಣದ ಶಾಸಕ ವೇದ ಪ್ರಕಾಶ್ ಸೋಲಂಕಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೆಲ ಶಾಸಕರು, ನಾಯಕರ ಫೋನ್ ಟ್ಯಾಪ್ ಆಗಿದೆ. ಇದೀಗ ಶಾಸಕರಿಗೆ ತಾವು ಯಾವುದಾರು ಎಜೆನ್ಸಿ ಬಲೆಗೆ ಬೀಳುವ ಅಪಾಯವಿದೆ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆಯಾ ಅನ್ನೋದು ತಿಳಿದಿಲ್ಲ. ಆದರೆ ಕೆಲ ಶಾಸಕರು ತಮ್ಮ ತಮ್ಮ ಫೋನ್ ಟ್ಯಾಪ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಸೋಲಂಕಿ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಇದರಲ್ಲಿ ಸರ್ಕಾರ ಭಾಗಿಯಾಗಿದಯಾ ಅನ್ನೋದು ತಿಳಿದಿಲ್ಲ. ಆದರೆ ನಾಯಕರ ಫೋನ್ ಟ್ಯಾಪ್ ಆಗಿರುವುದು ಸತ್ಯ. ಈಗಾಗಲೇ ಕೆಲ ಸಚಿವರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ ಎಂದು ಸೋಲಂಕಿ ಹೇಳಿದ್ದಾರೆ. ಮೊದಲೇ ಎರಡು ಬಣಗಳಿಂದ ಹೈರಾಣಾಗಿರುವ ರಾಜಸ್ಥಾನ ಕಾಂಗ್ರೆಸ್ ಇದೀಗ ಫೋನ್ ಟ್ಯಾಪ್ ಆರೋಪದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ದೇಶಕ್ಕೆ ಆದ್ಯತೆ ನೀಡೋರಿಗೆ ಸ್ವಾಗತ: ಪೈಲಟ್‌ಗಾಗಿ ಬಾಗಿಲು ತೆರೆದ ಬಿಜೆಪಿ!.

ಗೆಹ್ಲೋಟ್ ವಿರುದ್ಧ ಮುನಿಸಿಕೊಂಡಿರುವ ಸಚಿನ್ ಪೈಲಟ್ ಹಾಗೂ ಬಣ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕಳೆದ ಬಾರಿ ಪ್ರಿಯಾಂಕಾ ಗಾಂಧಿ ಸಚಿನ್ ಪೈಲಟ್ ಮನಒಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಇದೀಗ ಮತ್ತೆ ದೆಹಲಿಗೆ ಹಾರಿರುವ ಸಚಿನ್ ಪೈಲಟ್ , ರಾಜಸ್ಥಾನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಬಿಜೆಪಿ ರಾಜ್ಯಧ್ಯಕ್ಷ ಸತೀಶ್ ಪೂನಿಯಾ, ಮಂತ್ರಿಗಳ ಹೆಸರು ಬಹಿರಂಗ ಪಡಿಸಿ ಎಂದಿದ್ದಾರೆ. ಫೋನ್ ಟ್ಯಾಪಿಂಗ್ ಗಂಭೀರ ಪ್ರಕರಣ, ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಕುರಿತು ದಾಖಲೆ ಬಿಡುಗಡೆ ಮಾಡಿ ಎಂದು ಪೂನಿಯಾ ಸೂಚಿಸಿದ್ದಾರೆ.

click me!