ಕೂಲಿ ಕಾರ್ಮಿಕನ ಮಗ ಸೇನಾಧಿಕಾರಿಯಾಗಿ ನೇಮಕ; ದಶಕದ ಹಿಂದಿನ ಕಣ್ಣೀರ ಕತೆ ನೆನೆದ ತಂದೆ!

By Suvarna News  |  First Published Jun 13, 2021, 6:54 PM IST
  • ಬಡ ಕುಟುಂಬದ ಸುಜೀತ್ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕ
  • ಸ್ಯಾನಿಟೈಸರ್ ಕೆಲಸಗಾರನ ಶ್ರಮವನ್ನು ಹಾಸ್ಯ ಮಾಡಿದ್ದ ಗ್ರಾಮದ ಜನ
  • 10 ವರ್ಷದ ಹಿಂದಿನ ಕಣ್ಣೀರ ಕತೆ ತೆರೆದಿಟ್ಟ ತಂದೆ

ಡೆಹ್ರಡೂನ್(ಜೂ.13): ಸಾಧಿಸುವ ಛಲವಿದ್ದರೆ ಬಡತನ, ಅಡ್ಡಿ ಆತಂಕಗಳು ಯಾವುದೂ ಪರಿಗಣನೆಗೆ ಬರುವುದಿಲ್ಲ. ಇದಕ್ಕೆ ಹಲವು ಊದಾಹರಣೆಗಳಿವೆ. ಇದೀಗ ಈ ಸಾಲಿಗೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಬಸಿಲಾ ಗ್ರಾಮದ ನಿವಾಸಿಯಾಗಿರುವ ಬಿಜೇಂದ್ರ ಕುಮಾರ್ ಪುತ್ರ ಸುಜೀತ್ ಕುಮಾರ್ ಸೇರಿಕೊಂಡಿದ್ದಾನೆ. ಎಲ್ಲಾ ಕಷ್ಟಗಳನ್ನು ಬದಿಗೊತ್ತಿ ಇದೀಗ ಭಾರತೀಯ ಸೇನೆಯಲ್ಲಿ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾನೆ.

ದಿನಗೂಲಿಯಿಂದ ಆರ್ಮಿ ಆಫಿಸರ್‌ವರೆಗೆ....ಹಾದಿ ಸುಲಭವಾಗಿರಲಿಲ್ಲ!...

ಸುಜೀತ್ ಕುಮಾರ್ ಸೇನಾಧಿಕಾರಿಯಾದ ಹಿಂದೆ ಪರಿಶ್ರಮ, ಅಪಹಾಸ್ಯ ಸೇರಿದಂತೆ ಹಲವು ಕಣ್ಣೀರ ಕತೆ ಇದೆ. ಕಾರಣ ಬಿಜೇಂದ್ರ ಕುಮಾರ್ ಸ್ಯಾನಿಟೈಸರ್ ಕಂಪನಿಯಲ್ಲಿ ಗುಡಿಸುವ, ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದರು. ಸದ್ಯ ಸ್ಯಾನಿಟೈಸರ್‌ಗೆ ಇರುವ ಬೇಡಿಕೆ ಒಂದು ವರ್ಷದ ಹಿಂದೆ ಇರಲಿಲ್ಲ. ಇನ್ನು 10 ವರ್ಷದ ಹಿಂದಿನ ಮಾತು ಕೇಳಬೇಕೆ? ಹೀಗಾಗಿ ಸಣ್ಣ ಆದಾಯದಲ್ಲೇ ಬಿಜೇಂದ್ರ ಕುಮಾರ್ ಜೀವನ ನಿರ್ವಹಣೆ ಮಾಡಬೇಕಿತ್ತು.

Tap to resize

Latest Videos

undefined

ಚಂದೌಲಿ ಜಿಲ್ಲೆಯ ಬಸಿಲಾ ಕುಗ್ರಾಮದಲ್ಲಿ ವಾಸಿಸುತ್ತಿದ್ದ ಬಿಜೇಂದ್ ಕುಮಾರ್ ತನ್ನ ಪುತ್ರ ಸುಜೀತ್ ಕುಮಾರ್‌ನನ್ನು ಆತನ ಬಯಕೆಯಂತೆ ರಾಜಸ್ಥಾನದಲ್ಲಿ ಶಾಲೆಗೆ ಸೇರಿಸಿದರು. ಈ ವೇಳೆ ಬರೋ ಆದಾಯದಲ್ಲಿ ಮೂರು ಹೊತ್ತಿನ ಊಟವೇ ಕಷ್ಟ, ಹೀಗಿರುವಾಗ ಪುತ್ರನನ್ನು ರಾಜಸ್ಥಾನಕ್ಕೆ ಕಳುಹಿಸುವ ಅಗತ್ಯವಿತ್ತೆ? ಸ್ಯಾನಿಟೈಸರ್ ಕೆಲಸಾಗರ ಆಸೆ ಬೆಟ್ಟಕ್ಕಿಂತ ದೊಡ್ಡದು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂದು ಗ್ರಾಮದ ಬಹುತೇಕರು ಅಪಹಾಸ್ಯ ಮಾಡಿದ್ದರು.

ಪ್ರತಿ ದಿನ ಬಸಿಲಾ ಗ್ರಾಮದಲ್ಲಿ ಇದೇ ಮಾತು. ಕಾರಣ ಈ ಕುಗ್ರಾಮದಲ್ಲಿ ಶಾಲೆಯ ಮೆಟ್ಟಿಲು ಕಂಡವರು ಬೆರಳೆಣಿಕೆ ಮಂದಿ. ಇನ್ನು ಹೈಸ್ಕೂಲ್, ಕಾಲೇಜು ದೂರದ ಮಾತು. ಆದರೆ ಬಿಜೇಂದ್ರ ಕುಮಾರ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೈಸ್ಕೂಲ್ ಪೂರೈಸಿದ ಸುಜೀತ್ ಡೆಹ್ರಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಆಕಾಡೆಮಿಯಲ್ಲಿ ಪದವಿ ಪಡೆದರು. 

ಇದೇ ಮೊದಲ ಬಾರಿಗೆ ಪೋಷಕರಿಲ್ಲದೆ 333 ಸೈನ್ಯಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್!..

ಇದೀಗ ಸೇನಾಧಿಕಾರಿಯಾಗಿ ಸುಜೀತ್ ನೇಮಕಗೊಂಡಿದ್ದಾರೆ. ಸೇನಾಧಿಕಾರಿ ಸ್ವೀಕಾರ ಸಮಾರಂಭ ಡೆಹ್ರಡೂನ್‌ನಲ್ಲಿ ನಡೆದಿದೆ. ಕೋವಿಡ್ ಕಾರಣ ಪೋಷಕರಿಗೂ ನೋ ಎಂಟ್ರಿ ಹೀಗಾಗಿ ಸೇನಾ ಲೈವ್ ಕಾರ್ಯಕ್ರಮ ವೀಕ್ಷಿಸಿ ಪೋಷಕರು ಪುತ್ರನ ಸಾಧನೆಯನ್ನು ಕಣ್ತುಂಬಿಕೊಂಡಿದ್ದಾರೆ.

ಈ ವೇಳೆ ಬಿಜೇಂದ್ರ ಕುಮಾರ್ ಭಾವುಕರಾಗಿದ್ದಾರೆ. ನಾನು ಕೈಯಲ್ಲಿ ಪೊರಕೆ ಹಿಡಿದು ಶುಚಿತ್ವ ಕೆಲಸ ಮಾಡುತ್ತಿದ್ದೆ, ನನ್ನ ಪುತ್ರ ಗನ್ ಹಿಡಿದು ದೇಶ ಕಾಯುವ ಸೇವೆ ಮಾಡಲಿದ್ದಾನೆ ಎಂದಿದ್ದಾರೆ. 10 ವರ್ಷದ ಹಿಂದೆ ನನ್ನ ನಿರ್ಧಾರ, ಕುಟುಂಬವನ್ನು, ಪುತ್ರವನ್ನು ಅಪಹಾಸ್ಯ ಮಾಡಿದ್ದರು. ಇದೀಗ ಬಸಿಲಾ ಗ್ರಾಮದಿಂದ ಸೇನಾಧಿಕಾರಿಯಾಗಿ ಆಯ್ಕೆಯಾದ ಮೊದಲಿಗ ಅನ್ನೋ ಹೆಗ್ಗಳಿಕೆಗೆ ನನ್ನ ಪುತ್ರ ಪಾತ್ರರಾಗಿದ್ದಾನೆ ಎಂದು ಬಿಜೇಂದ್ರ ಕುಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ

click me!