ಕಾಂಗ್ರೆಸ್ ಪ್ರಬಲ ನಾಯಕ, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಶೋಕ್ ಚವಾಣ್ ಬಿಜೆಪಿ ಸೇರಿಕೊಂಡಿದ್ದಾರೆ. ನಾಳೆ ಅಶೋಕ್ ಚವಾಣ್ ಬಿಜೆಪಿಯಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಡಬಲ್ ಶಾಕ್ ನೀಡಿದೆ.
ಮುಂಬೈ(ಫೆ.13) ಕಾಂಗ್ರೆಸ್ ಪಕ್ಷ ತೊರೆದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅಶೋಕ್ ಚವಾಣ್ ಬಿಜೆಪಿ ಸೇರಿದ್ದಾರೆ. ಫೆಬ್ರವರಿ 14 ರಂದು ಅಶೋಕ್ ಚವಾಣ್ ಬಿಜೆಪಿಯಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ದೇಶದ ವಿಕಾಸ, ದೇಶದ ಅಭಿವೃದ್ಧಿಗಾಗಿ ಬಿಜೆಪಿ ಜೊತೆ ಸೇರಿ ಕೆಲಸ ಮಾಡುವುದಾಗಿ ಅಶೋಕ್ ಚವಾಣ್ ಹೇಳಿದ್ದಾರೆ.
ಹೊಸ ರಾಜಕೀಯ ಜೀವನ ಆರಂಭಿಸುತ್ತಿದ್ದೇನೆ ಎಂದು ಅಶೋಕ್ ಚವಾಣ್ ಹೇಳಿದ್ದಾರೆ. ಬಿಜೆಪಿ ಸೇರಿಕೊಂಡಿರುವ ಅಶೋಕ್ ಚವಾಣ್ ನಾಳೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 15 ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅಂತಿಮ ಎರಡು ದಿನಗಳಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ಬಿದ್ದಿದ್ದರೆ, ಬಿಜೆಪಿ ಹಿರಿ ಹಿರಿ ಹಿಗ್ಗಿದೆ.
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ!
ಅಶೋಕ್ ಚವಾಣ್ ಪಕ್ಷ ತೊರೆದಿರುವ ಕಾರಣ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ಒಂದೆಡೆ ರಾಜ್ಯಸಭಾ ಚುನಾವಣೆ ಸಂಕಷ್ಟವಾಗಿದ್ದರೆ, ಮತ್ತೊಂದೆಡೆ ಅಶೋಕ್ ಚವಾಣ್ ಬೆಂಬಲಿಗರು ಇದೀಗ ಬಿಜೆಪಿಯತ್ತ ವಾಲುತ್ತಿದ್ದಾರೆ. ಅಶೋಕ್ ಚವಾಣ್ ಬೆನ್ನಲ್ಲೇ ಕೆಲ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
LIVE |📍 मुंबई | माध्यमांशी संवाद (13-02-2024) https://t.co/bm7AlBmeHe
— भाजपा महाराष्ट्र (@BJP4Maharashtra)
ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ(ಫೆ.12) ರಾಜೀನಾಮೆ ನೀಡಿದ ಅಶೋಕ್ ಚವಾಣ್ ಮಂಗಳವಾರ ಬಿಜೆಪಿ ಸೇರಿಕೊಂಡಿದ್ದಾರೆ. ಸೋಮವಾರ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಭೇಟಿಯಾದ ಅಶೋಕ್ ಚವಾಣ್ ತಮ್ಮ ರಾಜೀನಾಮೆ ಪತ್ರ ನೀಡಿದ್ದರು. ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ.
ಬಾಬಾ ಸಿದ್ದಿಕಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆ ನಡೆದ ಕೆಲವೇ ದಿನಗಳಲ್ಲಿ ಇದೀಗ ಕಾಂಗ್ರೆಸ್ ಪ್ರಬಲ ನಾಯಕ ಅಶೋಕ್ ಚವಾಣ್ ಬಿಜೆಪಿ ಸೇರಿಕೊಂಡಿದ್ದಾರೆ. ಬಾಬಾ ಸಿದ್ದಿಕಿ ಬರೋಬ್ಬರಿ 48 ವರ್ಷಗಳಿಂದ ಕಾಂಗ್ರೆಸ್ ಜೊತೆ ಕೆಲಸ ಮಾಡಿದ್ದರು. ಕಾಂಗ್ರೆಸ್‌ನಿಂದ ಪ್ರಮುಖ ನಾಯಕರು ದೂರ ಸರಿಯುತ್ತಿದ್ದಾರೆ.
ಕಾಂಗ್ರೆಸ್‌ನ ನಡೆ-ನುಡಿ ಒಂದೇ, ಬಿಜೆಪಿ ಸುಳ್ಳಿನ ಫ್ಯಾಕ್ಟ್ರಿ: ಸಚಿವ ಎಂ.ಬಿ.ಪಾಟೀಲ್