ರೈತರ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ, ಕ್ರಮಕ್ಕೆ ಆಗ್ರಹಿಸಿದ ಬಾರ್ ಅಸೋಸಿಯೇಷನ್!

By Suvarna News  |  First Published Feb 13, 2024, 1:15 PM IST

ರೈತ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ದೆಹಲಿ ಆಪ್ ಸರ್ಕಾರ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಇತ್ತ ಸುಪ್ರೀಂ ಕೋರ್ಟ್ ಬಾರ್ ಅಸೋಸೇಯೇಷನ್ ರೈತ ಪ್ರತಿಭಟನೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮುಖ್ಯ ನ್ಯಾಮೂರ್ತಿಗೆ ಅರ್ಜಿ ಸಲ್ಲಿಸಿದ್ದಾರೆ. 


ನವದೆಹಲಿ(ಫೆ.13) ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ನುಗ್ಗಿದ್ದಾರೆ. ಅತೀ ದೊಡ್ಡ ರೈತ ಪ್ರತಿಭಟನೆ ಆರಂಭಗೊಂಡಿದೆ. ದೆಹಲಿಯ ಗಡಿ ಭಾಗಗಳನ್ನು ದೆಹಲಿ ಪೊಲೀಸರು ಮುಚ್ಚಿದ್ದಾರೆ. ಪ್ರತಿಭಟನಾಕಾರರ ಮೇಲೆ ಆಶ್ರುವಾಯು ಸಿಡಿಸಲಾಗಿದೆ. ಇತ್ತಪ್ರತಿಭಟನಾ ನಿರತ ರೈತರು ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳ ಮೂಲಕ ದೆಹಲಿಯತ್ತ ಧಾವಿಸಿದ್ದಾರೆ. ಈ ಪ್ರತಿಭಟನೆ ಜೋರಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಮುಖ್ಯ ನ್ಯಾಯಮೂರ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ರೈತ ಪ್ರತಿಭಟನೆ ನಡೆಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ ಚಲೋ ರೈತ ಪ್ರತಿಭಟನೆ ಹಮ್ಮಿಕೊಂಡವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಮ ಜರುಗಿಸಬೇಕು ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ಗೆ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆದಿಶ್ ಅಗರ್ವಾಲ್ ಅರ್ಜಿ ಸಲ್ಲಿಸಿದ್ದಾರೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರೈತರು ಪ್ರತಿಭಟನೆ ಹೆಸರಿನಲ್ಲಿ ದೆಹಲಿಗೆ ಆಗಮಿಸಿದ್ದಾರೆ. ಇದರಿಂದ ಸಾಮಾನ್ಯರ ಜನಜೀವನ ಅಸ್ತವ್ಯಸ್ಥವಾಗಿದೆ. ತುರ್ತು ಚಿಕಿತ್ಸೆ ಬೇಕಿದ್ದ ರೋಹಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಯೋಜನೆ ರೂಪಿಸುತ್ತಿದೆ. ರೈತರ ಬೇಡಿಕೆ ಕುರಿತು ಚರ್ಚೆಗಳು ಆಗಬೇಕು. ಆದರೆ ನೇರವಾಗಿ ಸಂಘರ್ಷವಲ್ಲ, ಶಾಂತಿಯುತ ಪ್ರತಿಭಟನೆ ಬದಲು ಸಂಘರ್ಷದ ಹಾದಿಯಿಂದ ಹಲವರಿಗೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Tap to resize

Latest Videos

ಇದು ಪ್ರೊಟೆಸ್ಟೋ? ಯುದ್ಧವೋ? ರೈತ ಪ್ರತಿಭಟನೆ ಟೂಲ್ ಕಿಟ್ ಬಯಲು ಮಾಡಿದ ನೆಟಿಜನ್ಸ್!

2021-22ರಲ್ಲಿ ಇದೇ ರೀತಿ ರೈತ ಪ್ರತಿಭಟನೆಯಿಂದ ದೆಹಲಿಯ ಗಡಿ ಭಾಗಗಳನ್ನು ಸುರಕ್ಷತಾ ದೃಷ್ಟಿಯಿಂದ ಮುಚ್ಚಲಾಗಿತ್ತು. ಕೆಲ ತಿಂಗಳುಗಳ ಕಾಲ ಗಡಿ ಮಚ್ಚಲಾಗಿತ್ತು. ಇದರಿಂದ ಹಲವರು ಮೃತಪಟ್ಟಿದ್ದಾರೆ. ರೋಗಿಗಳಿಗೆ ದೆಹಲಿಗೆ ಆಗಮಿಸಲು ಸಾಧ್ಯವಾಗದೆ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಗಳಾಗಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ದೆಹಲಿ ಗಡಿ ಭಾಗ ಬಂದ್ ಮಾಡಿರುವ ಕಾರಣ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ. ದೆಹಲಿ ಒಳ ಪ್ರವೇಶಿಸಲು, ಹೊರಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋರ್ಟ್ ಕಲಾಪಗಳಿಗೆ ಹಾಜರಾಗಲು ವಕೀಲರಿಗೆ ಸಾಧ್ಯವಾಗುತ್ತಿಲ್ಲ. ಸಮಸ್ಯೆಗಳನ್ನೇ ಹೆಚ್ಚಿಸುತ್ತಿರುವ ಈ ರೈತ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಆಗ್ರಹಿಸಿದ್ದಾರೆ.  

6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!
 

click me!