ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್‌: ಸಚಿವರ ಜತೆ ಮಾತುಕತೆಗೆ ಯತ್ನ!

By Suvarna News  |  First Published Feb 10, 2021, 1:22 PM IST

ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್‌| ಮಾಹಿತಿ ತಂತ್ರಜ್ಞಾನ ಸಚಿವರ ಜತೆ ಮಾತುಕತೆಗೆ ಯತ್ನ| ಅಕೌಂಟ್‌ ಬ್ಲಾಕ್‌ ಮಾಡದಿದ್ದರೆ ಶಾಸ್ತಿ ಎಂದಿದ್ದ ಸರ್ಕಾರ| ರೈತರ ಪ್ರತಿಭಟನೆ ಕುರಿತು ತಪ್ಪು ಮಾಹಿತಿ ಪಸರಿಸಿದ ಕೇಸ್‌


ನವದೆಹಲಿ(ಫೆ.10): ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಕುರಿತು ತಪ್ಪು ಮಾಹಿತಿ ಪಸರಿಸಿದ ಪಾಕಿಸ್ತಾನ ಹಾಗೂ ಖಲಿಸ್ತಾನಿ ಬೆಂಬಲಿಗರ 1178 ಖಾತೆಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದ ಬೆನ್ನಲ್ಲೇ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ ಮೆತ್ತಗಾಗಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ಮಾತುಕತೆಗೆ ಆ ಸಂಸ್ಥೆ ಪ್ರಯತ್ನ ಆರಂಭಿಸಿದೆ.

ತಂಗಿಯ ಬದುಕಿನ ಮೇಲೆ ಸಿನಿಮಾ ಮಾಡಿ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ನಿರ್ದೇಶಕ

Latest Videos

undefined

ಕೇಂದ್ರ ಸರ್ಕಾರದ ನೋಟಿಸ್‌ಗೆ ಸ್ವೀಕೃತಿಯನ್ನು ನೀಡಿದ್ದೇವೆ. ಕೇಂದ್ರ ಸರ್ಕಾರದ ಜತೆ ಮಾತುಕತೆ ಮುಂದುವರಿಸುತ್ತೇವೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್‌, ಮಾಹಿತಿ ಮತ್ತು ತಂತ್ರಜ್ಞಾನ ಸಚಿವರನ್ನು ಸಂಪರ್ಕಿಸಿದ್ದೇವೆ ಎಂದು ಟ್ವೀಟರ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಜ.31ರಂದು 257 ಖಾತೆಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿತ್ತು. ಆದರೆ ಒಂದಷ್ಟುಖಾತೆಗಳನ್ನು ಬ್ಲಾಕ್‌ ಮಾಡಿದ್ದ ಟ್ವೀಟರ್‌, ಕೆಲವೇ ತಾಸಿನಲ್ಲಿ ತನ್ನ ನಿರ್ಧಾರ ಹಿಂಪಡೆದಿತ್ತು. ಜತೆಗೆ ರೈತ ಹೋರಾಟ ಬೆಂಬಲಿಸಿ ಜಾಗತಿಕ ಗಣ್ಯರು ಮಾಡಿದ್ದ ಟ್ವೀಟ್‌ಗೆ ಟ್ವೀಟರ್‌ ಸಿಇಒ ಜಾಕ್‌ ಡೋರ್ಸಿ ಅವರು ಲೈಕ್‌ ಒತ್ತಿದ್ದರು. ಇದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ, 1178 ಖಾತೆಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಸರ್ಕಾರ ಫೆ.4ರಂದು ನೋಟಿಸ್‌ ನೀಡಿತ್ತು.

ಬೈಡೆನ್‌ ಜತೆ ಮೋದಿ ಫೋನ್‌ ಸಂಭಾಷಣೆ: ಸಹಕಾರಕ್ಕೆ ಬದ್ಧತೆ

ಒಂದು ವೇಳೆ, ತನ್ನ ಸೂಚನೆ ಪಾಲಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವ ಕಾಯ್ದೆಗಳನ್ನು ಸರ್ಕಾರ ಪ್ರಸ್ತಾಪಿಸಿತ್ತು. ಈ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸದೆ ಉಪೇಕ್ಷೆಯಿಂದ ನಡೆದುಕೊಂಡಿದ್ದ ಟ್ವೀಟರ್‌ ಇದೀಗ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ.

click me!