
ಚಮೋಲಿ(ಫೆ.10): ಉತ್ತರಾಖಂಡದಲ್ಲಿ ಸಂಭವಿಸಿದ ಭಾರೀ ಅನಾಹುತಕ್ಕೆ ತಾತ್ಕಾಲಿಕ ಸರೋವರ ಒಡೆದಿದ್ದು ಅಥವಾ ಭಾರೀ ಪ್ರಮಾಣದ ಹಿಮಕುಸಿತ ಕಾರಣವಿರಬಹುದು ಎಂದು ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೂ ಮುನ್ನ ಮತ್ತು ಘಟನೆ ಬಳಿಕ ಉಪಗ್ರಹ ಚಿತ್ರ ಆಧರಿಸಿ ವಿಜ್ಞಾನಿಗಳು ಇಂಥದ್ದೊಂದು ಪ್ರಾಥಮಿಕ ಊಹೆ ಮಾಡಿದ್ದಾರೆ.
"
ಕನ್ನಡತಿ, IPS ಅಪರ್ಣಾ ಕುಮಾರ್ ನೇತೃತ್ವದಲ್ಲಿ ಉತ್ತರಾಖಂಡ್ ರಕ್ಷಣಾ ಕಾರ್ಯಾಚರಣೆ!
ಡೆಹ್ರಾಡೂನ್‌ನಲ್ಲಿರುವ ಹಿಮನದಿ ವಿಜ್ಞಾನ ವಿಭಾಗದ ಮುಖ್ಯಸ್ಥ ಸಂತೋಷ್ ರೈ ಅವರ ಪ್ರಕಾರ, ‘ಫೆ.2ರ ಉಪಗ್ರಹ ಚಿತ್ರದ ಪ್ರಕಾರ ಯಾವುದೇ ಹಿಮ ಇರಲಿಲ್ಲ. ಆದರೆ ಫೆ.5 ಮತ್ತು 6ಕ್ಕೆ ಭಾರೀ ಭಾರೀ ಹಿಮಪಾತವಾಗಿತ್ತು. ಹೀಗೆ ಬಿದ್ದ ಭಾರೀ ಹಿಮ ಫೆ.7ರ ವೇಳೆಗೆ ಕರಗಲು ಆರಂಭವಾಗಿ, ಯಾವುದೋ ಕಣಿವೆ ಪ್ರದೇಶದಲ್ಲಿ ಸರೋವರದ ರೀತಿಯಲ್ಲಿ ಸಂಗ್ರಹವಾಗಿದೆ. ಬಳಿಕ ಆ ಸರೋವರ ಏಕಾಏಕಿ ಒಡೆದು ಭಾರೀ ರಭಸದಲ್ಲಿ ನೀರು ಕೆಳಗೆ ಹರಿದುಬಂದು, ತನ್ನೊಂದಿಗೆ ಕಲ್ಲು ಮಣ್ಣನ್ನೂ ಹೊತ್ತ ತಂದ ಕಾರಣ ಅನಾಹುತ ಸಂಭವಿಸಿರಬಹುದು.
ವಿಕಿರಣಯುಕ್ತ ಉಪಕರಣದಿಂದ ಉತ್ತರಾಖಂಡ ಹಿಮಸುನಾಮಿ?
ಹೀಗೆ ಸಂಗ್ರಹವಾದ ನೀರಿನ ಪ್ರಮಾಣ 30-40 ದಶಲಕ್ಷ ಕ್ಯುಬಿಕ್ ಮೀಟರ್‌ನಷ್ಟಿರಬಹುದು. ಹೀಗಾಗಿ ಬಹುಶಃ ಇದು ನೀರ್ಗಲ್ಲು ಸ್ಫೋಟದಿಂದ ಸಂಭವಿಸಿದ ಘಟನೆಯಲ್ಲ. ಈ ಬಗ್ಗೆ ಇನ್ನಷ್ಟುತನಿಖೆ ನಡೆಸುವ ಅಗತ್ಯವಿದ್ದು, ಎರಡು ತಂಡಗಳನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ