ಖಲಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ಮತ್ತೊಮ್ಮೆ ಸಾಬೀತು!

By Santosh NaikFirst Published May 1, 2022, 12:56 PM IST
Highlights

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭಯೋತ್ಪಾದಕ ಸಂಘಟನೆ ಖಲಿಸ್ತಾನಕ್ಕೆ ಬೆಂಬಲ ನೀಡಿರುವುದು ಮತ್ತೊಮ್ಮೆ ಸಾಬೀತಾಗಿದೆ. ಖಲಿಸ್ತಾನಿ ಬೆಂಬಲಿಗನಾಗಿರುವ ಹರ್ ಪ್ರೀತ್ ಸಿಂಗ್ ಬೇಡಿಯನ್ನು ಅಪ್ ಹಿಮಾಚಲ ಸೋಷಿಯಲ್ ಮೀಡಿಯಾದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಬೆಂಗಳೂರು (ಮೇ.1): ಆಮ್ ಆದ್ಮಿ ಪಾರ್ಟಿ (Aam Aadmi Party) ಹಾಗೂ ಭಯೋತ್ಪಾದಕ ಸಂಘಟನೆ ಖಲಿಸ್ತಾನ (Khalistan ) ನಡುವಿನ ಸಂಬಂಧದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಪಂಜಾಬ್ ಚುನಾವಣೆಯ ವೇಳೆ ಅರವಿಂದ್ ಕೇಜ್ರಿವಾಲ್ ಖಲಿಸ್ತಾನ ಪರವಾಗಿ ಮಾತನಾಡಿದ್ದರು ಎನ್ನುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ನಡುವೆ ಖಲಿಸ್ತಾನ ಭಯೋತ್ಪಾದಕ ಸಂಘಟನೆಯ ಕುರಿತಾಗಿ ಆಮ್ ಆದ್ಮಿ ಪಾರ್ಟಿ ಮೃದು ಧೋರಣೆ ಹೊಂದಿದೆ ಎನ್ನುವ ಸಂಗತಿ ಮತ್ತೊಮ್ಮೆ ಸಾಬೀತಾಗಿದೆ.

ಖಲಿಸ್ತಾನ ಬೆಂಬಲಿಗನಾಗಿರುವ ಹರ್ ಪ್ರೀತ್ ಸಿಂಗ್ ಬೇಡಿಯನ್ನು (Harpreet Singh Bedi) ಆಮ್ ಆದ್ಮಿ ಪಾರ್ಟಿಯ ಹಿಮಾಚಲ ಪ್ರದೇಶ ಸೋಷಿಯಲ್ ಮೀಡಿಯಾದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್, ತಾವೊಬ್ಬ ಖಲಿಸ್ತಾನಿ ಬೆಂಬಲಿಗ ಎನ್ನುವುದನ್ನೂ ಸೂಚ್ಯವಾಗಿ ತಿಳಿಸಿದ್ದಾರೆ. ಹರ್ ಪ್ರೀತ್ ಸಿಂಗ್ ಬೇಡಿ, ಖಲಿಸ್ತಾನಕ್ಕೆ ಬೆಂಬಲ ನೀಡಿ ಮಾಡಿರುವ ಟ್ವೀಟ್ ಗಳ ಸಾಕ್ಷಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ.

ಹಲವು ವರ್ಷಗಳಿಂದ ಖಲಿಸ್ತಾನಿ ಬೆಂಬಲಿಗನಾಗಿರುವ ಹರ್ ಪ್ರೀತ್ ಸಿಂಗ್ ಬೇಡಿ, "ಖಲಿಸ್ತಾನ ಬೇಡಿಕೆಯನ್ನೂ ಸಿಖ್ಖರ ಸಾಂವಿಧಾನಿಕ ಹಕ್ಕು ಎಂದು ಹರ್ ಪ್ರೀತ್ ಸಿಂಗ್ ಬೇಡಿ ಬರೆದಿದ್ದ ಟ್ವೀಟ್ ಗಳೂ ವೈರಲ್ ಆಗಿವೆ.

Wake Up India 🙏
Kejriwal supports Khalistan

Kejriwal made Harpreet Singh Bedi President of AAP Himanchal Social Media.
Bedi is supporting Khalistani movement for yrs n saying demand for Khalistan is constitutional right
केजरी के चींटू-मिंटू-मिंटी बतायेंगे की ये क्या चल रहा है pic.twitter.com/B0YqslfafI

— Major Surendra Poonia (@MajorPoonia)

Latest Videos


ಇದಕ್ಕೂ ಮುನ್ನ  ಪಂಜಾಬ್‌ನಲ್ಲಿ ( Punjab ) ಆಮ್‌ ಆದ್ಮಿ ಪಕ್ಷ (Aam Admi Party) ಗೆಲ್ಲಲು ಖಲಿಸ್ತಾನ ಪರವಾದ ಮತ ಮತ್ತು ಬಂಡವಾಳ ಕಾರಣ ಎಂದು ಖಲಿಸ್ತಾನಿ (khalistani ) ಪರ ಸಂಘಟನೆ ಸಿಖ್ ಫಾರ್‌ ಜಸ್ಟೀಸ್‌ (sikh for justice) ಗಂಭೀರ ಆರೋಪ ಮಾಡಿತ್ತು.

Patiala Violence: ಮೂವರು ಪಂಜಾಬ್ ಪೊಲೀಸ್‌ ಅಧಿಕಾರಿಗಳ ಎತ್ತಂಗಡಿ

ಈ ಕುರಿತು ಪಂಜಾಬ್‌ನ ನೂತನ ನಿಯೋಜಿತ ಸಿಎಂ ಭಗವಂತ್‌ ಸಿಂಗ್‌ ಮಾನ್‌ಗೆ (Bagwant Mann) ಪತ್ರ ಬರೆದಿದ್ದ ಎಸ್‌ಎಫ್‌ಜೆ ಪ್ರಧಾನ ಕಾರ್ಯದರ್ಶಿ ಗುರುಪತ್ವಂತ್‌ ಸಿಂಗ್‌, ‘ಪ್ರತ್ಯೇಕ ಪಂಜಾಬ್‌ ರಾಜ್ಯ ಸ್ಥಾಪನೆಯ ಪರವಾಗಿರುವ ಮತದಾರರನ್ನು ಬೇಡಿಕೊಳ್ಳುವ ಮೂಲಕ ಅತಿ ಹೆಚ್ಚು ಮತಗಳನ್ನು ಆಪ್‌ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಅಮೆರಿಕ, ಬ್ರಿಟನ್‌, ಕೆನಡಾ, ಆಸ್ಪ್ರೇಲಿಯಾ ಮತ್ತು ಯುರೋಪಿನ ರಾಷ್ಟ್ರಗಳಲ್ಲಿರುವ ಖಲಿಸ್ತಾನ ಪರವಾದ ಸಿಖ್ಖರಿಂದ ದೊಡ್ಡಮಟ್ಟದ ಹಣಕಾಸಿನ ಸಹಕಾರ ಪಡೆದುಕೊಂಡಿದೆ. ಆಪ್‌ ಗ್ರಾಮೀಣ ಪ್ರದೇಶಗಳಲ್ಲಿ ಶೇ.70ರಷ್ಟುಮತಗಳನ್ನು ಪಡೆದುಕೊಂಡಿದೆ. ಖಲಿಸ್ತಾನ್‌ ಎನ್ನುವುದು ಸಿಖ್‌ ಮತ್ತು ಭಾರತದ ನಡುವಿನ ವಿವಾದ. ಈ ವಿಷಯದಲ್ಲಿ ಆಮ್‌ಆದ್ಮಿ ಪಕ್ಷ ಮಧ್ಯಪ್ರವೇಶ ಮಾಡಬಾರದು. ಖಲಿಸ್ತಾನ ಪರ ಪಂಜಾಬ್‌ನಲ್ಲಿ ಜನಮತಗಣನೆಗೆ ಅವಕಾಶ ನೀಡಿ. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ ಹಿಂದಿನ ನಾಯಕರ ಕಥೆ ಏನಾಯಿತು ಎಂದು ಮರೆಯಬೇಡಿ’ ಎಂದು ಮಾನ್‌ಗೆ ಎಚ್ಚರಿಕೆ ನೀಡಿತ್ತು.

Hijab Row: ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟ ಖಲಿಸ್ತಾನ್, ಬಯಲಾಯ್ತು ಷಡ್ಯಂತ್ರ!

ಪಂಜಾಬ್ ಚುನಾವಣೆಯ ನಡುವೆ, ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಕೂಡ ಇಂಥದ್ದೇ ಆರೋಪವನ್ನು ಮಾಡಿದ್ದರು.  ‘2017ರ ವಿಧಾನಸಭೆ ಚುನಾವಣೆ ವೇಳೆ ಉಗ್ರ ಸಂಘಟನೆಗಳು, ಖಲಿಸ್ತಾನಿ ಚಳವಳಿಯಿಂದ ಅಂತರ ಕಾಯ್ದುಕೊಳ್ಳುವಂತೆ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಜತೆಗೆ ನಾನು ಪಂಜಾಬ್‌ಗೆ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಖಲಿಸ್ತಾನದ ಮೊದಲ ಪ್ರಧಾನ ಮಂತ್ರಿಯಾಗುತ್ತೇನೆ ಎಂದಿದ್ದರು’ ಎಂದು ಈ ಹಿಂದೆ ಕೇಜ್ರಿವಾಲ್‌ ಅವರ ಅತ್ಯಾಪ್ತರಾಗಿದ್ದ ವಿಶ್ವಾಸ್‌ ಹೇಳಿದ್ದರು.
‘ಬಿಜೆಪಿ, ಕಾಂಗ್ರೆಸ್‌ ನನ್ನ ವಿರುದ್ಧ ಗುಂಪುಕಟ್ಟಿ, ನನಗೆ ಉಗ್ರನ ಪಟ್ಟಕಟ್ಟುತ್ತಿದ್ದಾರೆ. ಇದು ಹಾಸ್ಯಾಸ್ಪದ. ಇದೇ ನಿಜವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಇನ್ನುವರೆಗೆ ನನಗೆ ಯಾಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೇಜ್ರಿ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಆಮ್‌ ಆದ್ಮಿ ಪಕ್ಷ ಹಾಗೂ ನಿಷೇಧಿತ ಸಿಖ್ಖರ ಭಯೋತ್ಪಾದಕ ಸಂಘಟನೆ ನಡುವಿನ ಸಂಬಂಧದ ಬಗ್ಗೆ ತನಿಖೆಗೆ ಚನ್ನಿ ಕೋರಿದ್ದಾರೆ. ಇದನ್ನು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

click me!