ದೆಹಲಿಯಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ!

By Suvarna NewsFirst Published May 1, 2021, 7:58 PM IST
Highlights

ಕೊರೋನಾ ವೈರಸ್ ಸುನಾಮಿಗೆ ದೆಹಲಿ ತತ್ತರಿಸಿದೆ. ಪ್ರತಿ ದಿನ ದಾಖಲಾಗುತ್ತಿರುವ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. 
 

ನವದೆಹಲಿ(ಮೇ.01): ದೆಹಲಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಪರಿಣಾಮ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಅಧೀಕೃತ ಘೋಷಣೆ ಮಾಡಿದ್ದಾರೆ.

ದೆಹಲಿಗೆ 4.5 ಲಕ್ಷ ಡೋಸ್ ಲಸಿಕೆ ಪೂರೈಕೆ; 18 ವರ್ಷ ಮೇಲ್ಪಟ್ಟವರ ವ್ಯಾಕ್ಸಿನೇಶನ್ ದಿನಾಂಕ ಘೋಷಣೆ!

ಕೊರೋನಾ ವೈರಸ್ ಪ್ರಕರಣ ಮೀತಿ ಮೀರುತ್ತಿದ್ದಂತೆ ಏಪ್ರಿಲ್ 19 ರಂದು ದೆಹಲಿಯಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಆದರೆ ಪ್ರತಿ ದಿನ ದೆಹಲಿಯಲ್ಲಿ ಕೊರೋನಾ ಪ್ರಕರಣ 25,000ಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ಅನ್‌ಲಾಕ ಅಪಾಯ ಎಂದು ತಜ್ಞರು ಸೂಚಿಸಿದ್ದರು. ಹೀಗಾಗಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ವಾರಕ್ಕೆ ಲಾಕ್‌ಡೌನ್ ವಿಸ್ತರಿಸಿದ್ದಾರೆ.

ಬೆಡ್‌ ಇಲ್ಲ, ಆಕ್ಸಿಜನೂ ಸಿಗ್ತಿಲ್ಲ, ಪ್ಲೀಸ್‌ ಲಾಕ್‌ಡೌನ್‌ ಮುಂದುವರೆಸಿ: 75ಷ್ಟು ಮಂದಿ ಬೇಡಿಕೆ!

ಇದೀಗ ಅರವಿಂದ್ ಕೇಜ್ರಿವಾಲ್ 2ನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕವೂ ಮಾಹಿತಿ ಹಂಚಿಕೊಂಡಿದ್ದಾರೆ.

 

Lockdown in Delhi is being extended by one week

— Arvind Kejriwal (@ArvindKejriwal)

ಸದ್ಯ ದೆಹೆಲಿಯಲ್ಲಿ ಕೊರೋನಾ ಸಕ್ರೀಯ ಪ್ರಕರಣ ಸಂಖ್ಯೆ 1 ಲಕ್ಷ ದಾಟಿದೆ. ಶುಕ್ರವಾರ ದೆಹಲಿಯಲ್ಲಿ 27,000 ಹೊಸ ಪ್ರಕರಣಗಳ ದಾಖಲಾಗಿದೆ. ಇನ್ನು 375 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.  

click me!