ಆಕ್ಸಿಜನ್ ಕೊರತೆ: ಡಾಕ್ಟರ್ ಸೇರಿ 8 ಜನ ಕೊರೋನಾ ಸೋಂಕಿತರು ಸಾವು

By Suvarna NewsFirst Published May 1, 2021, 4:44 PM IST
Highlights

ಆಕ್ಸಿಜನ್ ಸ್ಟಾಕ್ ಖಾಲಿಯಾಗೋದರ ಬಗ್ಗೆ ಮೊದಲೇ ಹೇಳಿದ್ದ ವೈದ್ಯರು | ಆದ್ರೂ ಸಿಗಲಿಲ್ಲ ಜೀವವಾಯು | ವೈದ್ಯರು ಸೇರಿ 8 ಜನ ಸಾವು

ದೆಹಲಿ(ಮೇ.01): ಮೆಹ್ರೌಲಿಯ ಬಾತ್ರಾ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾದ ಎಂಟು ಕೊರೋನಾ ರೋಗಿಗಳು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಆಕ್ಸಿಜನ್ ಕೊರತೆಯಿಂದ ಕೊರೋನಾ ರೋಗಿಗಳು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮೃತರಲ್ಲಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರೈಟಿಸ್ ಮುಖ್ಯಸ್ಥ ಡಾ. ಆರ್ ಕೆ ಹಿಮ್ಥಾನಿ (62) ಕೂಡ ಒಬ್ಬರಾಗಿದ್ದಾರೆ.

ಐಸಿಯುನಲ್ಲಿ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ಸಾವುಗಳು ಸಂಭವಿಸಿದೆಯೇ ಎಂದು ಕೇಳಿದಾಗ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ, ಆಸ್ಪತ್ರೆಯು ಅರ್ಧ ಘಂಟೆಯವರೆಗೆ ಆಮ್ಲಜನಕವಿಲ್ಲದೆ ಓಡುತ್ತಿತ್ತು. ಎಂಟು ಕೋವಿಡ್ ರೋಗಿಗಳು ಇಲ್ಲಿಯವರೆಗೆ ಸತ್ತರೆಂದು ಘೋಷಿಸಲಾಗಿದೆ. ಇನ್ನೂ ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ಒಂದೇ ದಿನ 4 ಲಕ್ಷ ಕೊರೋನಾ ಕೇಸ್; ವಿಶ್ವದಲ್ಲೇ ಗರಿಷ್ಠ ಪ್ರಕರಣ!

ಆಸ್ಪತ್ರೆಯಲ್ಲಿ 327 ರೋಗಿಗಳಿದ್ದು, ಅದರಲ್ಲಿ 48 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಆಮ್ಲಜನಕದ ಪೂರೈಕೆಯ ಮಟ್ಟ ಕುಸಿಯುತ್ತಿರುವ ಬಗ್ಗೆ ಶನಿವಾರ ಮಧ್ಯಾಹ್ನದಿಂದ ಎಚ್ಚರಿಕೆ ನೀಡಲಾಗಿತ್ತು. ಮಧ್ಯಾಹ್ನ 12.30 ರ ಸುಮಾರಿಗೆ ಆಸ್ಪತ್ರೆಯಲ್ಲಿ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆ ಕಡಿಮೆಯಾಗಿದೆ ಎನ್ನಲಾಗಿತ್ತು. ಮಧ್ಯಾಹ್ನ 1.35 ರ ಸುಮಾರಿಗೆ ಆಮ್ಲಜನಕ ಟ್ಯಾಂಕರ್ ಆಸ್ಪತ್ರೆ ತಲುಪಿತು.

ಈ ತಿಂಗಳ ಆರಂಭದಲ್ಲಿ, ರೋಹಿಣಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ದಾಖಲಾದ 20 ಜನರು ಆಮ್ಲಜನಕದ ಮಟ್ಟ ಕುಸಿದಾಗ ಸಾವನ್ನಪ್ಪಿದ್ದರು. ಆಸ್ಪತ್ರೆಗೆ ಆಕ್ಸಿಜನ್ ತಲುಪಲು ವಿಳಂಬವಾಗಿದೆ ಎಂದು ಆಸ್ಪತ್ರೆ ದೆಹಲಿ ಸರ್ಕಾರವನ್ನು ದೂಷಿಸಿತ್ತು.

click me!