
ನವದೆಹಲಿ(ಏ.19) ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮದುವೆ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಬಹುಕಾಲದ ಗೆಳೆಯ ಸಂಭವ್ ಜೈನ್ ಜೊತೆ ಹರ್ಷಿಕಾ ಕೇಜ್ರಿವಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇಜ್ರಿವಾಲ್ ಆಪ್ತರು, ಕುಟಂಬಸ್ಥರು, ಆಮ್ ಆದ್ಮಿ ಪಾರ್ಟಿ ಪ್ರಮುಖರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದರ ಜೊತೆಗೆ ಪಂಜಾಬ್ ಸಿಂಹ್ ಭಗವಂತ್ ಸಿಂಗ್ ಮಾನ್ ಕೂಡ ಡ್ಯಾನ್ಸ್ ಮಾಡಿದ್ದರೆ. ಇವರ ಡ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದೆ.
ಸಾಮಿ ಸಾಮಿ ಹಾಡಿಗೆ ಅರವಿಂದ್ ಕೇಜ್ರಿವಾಲ್, ಸುನೀತಾ ಕೇಜ್ರಿವಾಲ್ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಪುಷ್ಪಾ2 ಸಿನಿಮಾದ ಸಾಮಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಆಪ್ತರು, ಕುಟುಂಬಸ್ಥರು ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದ್ದಾರೆ. ಮಗಳ ಮದುವೆಯಲ್ಲಿ ಪೋಷಕರು ಅಷ್ಟೇ ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಇದೀಗ ಭಾರಿ ವೈರಲ್ ಆಗಿದೆ.
ದೆಹಲಿ ಚುನಾವಣೆಯಲ್ಲಿ ಸೋಲು: ಪಂಜಾಬ್‌ನಿಂದ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಗೆ ಪ್ರವೇಶ?
ಪಂಜಾಬಿ ಶೈಲಿಯಲ್ಲಿ ಸಿಎಂ ಭಗವಂತ್ ಮಾನ್ ಡ್ಯಾನ್ಸ್
ಇತ್ತ ಅರವಿಂದ್ ಕೇಜ್ರಿವಾಲ್ ಹಾಗೂ ಸುನೀತಾ ಕೇಜ್ರಿವಾಲ್ ಸಾಮಿ ಸಾಮಿ ಹಾಡಿನ ಬಳಿಕ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ದಂಪತಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪಂಜಾಬಿಯ ಬಾಂಗ್ರಾ ಶೈಲಿಯಲ್ಲಿ ಭಗವಂತ್ ಸಿಂಗ್ ಮಾನ್ ಹೆಜ್ಜೆ ಹಾಕಿದ್ದಾರೆ. ಮುಖ್ಯಮಂತ್ರಿ ಪತ್ನಿ ಕೂಡ ಅಷ್ಟೇ ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಇವರ ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏಪ್ರಿಲ್ 17ಕ್ಕೆ ನಿಶ್ಚಿತಾರ್ಥ, 18ಕ್ಕೆ ಮದುವೆ
ಏಪ್ರಿಲ್ 18 ರಂದು ದೆಹಲಿಯ ಶ್ಯಾಂಗ್ರಿಲಾ ಹೊಟೆಲ್‌ನಲ್ಲಿ ಹರ್ಷಿತಾ ಕೇಜ್ರಿವಾಲ್ ಹಾಗೂ ಸಂಭವ್ ಜೈನ್ ನಿಶ್ಛಿತಾರ್ಥ ನಡೆದಿದೆ. ಏಪ್ರಿಲ್ 18 ರಂದು ದೆಹಲಿಯ ಕಪುರ್ತಲಾ ಮಹಜಾರಾಜ ಅರಮನೆಯಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿದೆ.
ಹರ್ಷಿತಾ ಕೇಜ್ರಿವಾಲ್ ಕೈಹಿಡಿದ ಸಂಭವ್ ಜೈನ್ ಯಾರು?
ಕೇಜ್ರಿವಾಲ್ ಇಬ್ಬರು ಮಕ್ಕಳ ಪೈಕಿ ಹರ್ಷಿತಾ ಕೇಜ್ರಿವಾಲ್ ಕಿರಿಯ ಪುತ್ರಿ. ಈಕೆ 2018ರಲ್ಲಿ ದೆಹಲಿ ಐಟಿಟಿಯಿಂದ ಕೆಮಿಕಲ್ ಎಂಜಿನಿಯರಿಂದ್ ಪದವಿ ಪಡೆದಿದ್ದಾರೆ. ಸಂಭವ್ ಜೈನ್ ಕೂಡ ಇದೇ ಕಾಲೇಜಿನಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜು ದಿನಗಳಿಂದ ಆತ್ಮೀಯವಾಗಿದ್ದ ಹರ್ಷಿತಾ ಕೇಜ್ರಿವಾಲ್ ಹಾಗೂ ಸಂಭವ್ ಜೈನ್ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಪದವಿ ಬಳಿಕ ಹರ್ಷಿತಾ ಕೇಜ್ರಿವಾಲ್ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇತ್ತ ಸಂಭವ್ ಜೈನ್ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡತ್ತಿದ್ದರು. ಇತ್ತೀಚೆಗೆ ಇವರಿಬ್ಬರು ಜೊತೆಯಾಗಿ ಬಸಿಲ್ ಹೆಲ್ತ್ ಅನ್ನೋ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸಿದ್ದಾರೆ. ಇಬ್ಬರು ಜಂಟಿಯಾಗಿ ಈ ಉದ್ಯಮ ಆರಂಭಿಸಿ ಕೆಲಸ ಮಾಡುತ್ತಿದ್ದಾರೆ.
ಕೇಜ್ರಿ ಸೋಲಿಗೆ 'ಸಪ್ತ' ಕಾರಣ ನೀಡಿದ ಪಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ