Army Helicopter Crash ನಾಪತ್ತೆಯಾಗಿದ್ದ 5ನೇ ಯೋಧನ ಶವ ಪತ್ತೆ!

By Suvarna NewsFirst Published Oct 22, 2022, 4:44 PM IST
Highlights

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಪೈಲೈಟ್ ಸೇರಿದಂತೆ ನಾಲ್ವರ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಆದರೆ ಐದನೇ ಯೋಧನ ಕುರಿತು ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಪತ್ತೆ ಕಾರ್ಯಾಚರಣೆಯಲ್ಲಿ 5ನೇ ಯೋಧನ ಮೃತದೇಹ ಪತ್ತೆಯಾಗಿದೆ.

ಸಿಯಾಂಗ್(ಅ.22) ಭಾರತದಲ್ಲಿ ಇತ್ತೀಚೆಗೆ ಸೇನಾ ಹೆಲಿಕಾಪ್ಟರ್ ಪತನ ಹೆಚ್ಚಾಗುತ್ತಿದೆ. ಸಿಡಿಎಸ್ ಬಿಪಿನ್ ರಾವತ್ ಸೇನಾ ಹೆಲಿಕಾಪ್ಟರ್ ಪತನದ ಬಳಿಕ ಸುರಕ್ಷತಾ ನಿಯದಲ್ಲಿ ಹಲವು ಬದಲಾವಣೆ ಹಾಗೂ ಕಠಿಣತೆ ತರಲಾಗಿದೆ. ಆದರೂ ಇದೇ ತಿಂಗಳಲ್ಲಿ ಎರಡು ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ನಿನ್ನೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನ ಹಲವು ಅನುಮಾನಗಳಿಗೂ ಕಾರಣವಾಗಿದೆ. ಐವರು ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್ ದಟ್ಟ ಕಾಡಿನಲ್ಲಿ ಪತನಗೊಂಡಿತ್ತು. ತಕ್ಷಣವೇ ಕಾರ್ಯಪ್ರವೃವತ್ತಗೊಂಡ ಸೇನೆ ಪತ್ತೆ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಸ್ಥಳದಿಂದ ನಾಲ್ವರು ಮೃತದೇಹ ಪತ್ತೆ ಮಾಡಿ ಹೊರಕ್ಕೆ ತೆಗೆದಿತ್ತು. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಐದನೇ ಯೋಧ ನಾಪತ್ತೆಯಾಗಿದ್ದರು. ಘಟನೆ ನಡೆದ ಸ್ಥಳ ಸೇರಿದಂತೆ ಸುಮಾರು 35 ಕಿಲೋಮೀಟರ್‌ಗೂ ಹೆಚ್ಚು ದೂರ ಕಾಡಿನಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಸಿದ ಸೇನೆ ನಾಪತ್ತೆಯಾಗಿದ್ದ ಯೋಧನ ಶವ ಪತ್ತೆ ಹಚ್ಚಿದೆ. 

ಘಟನೆ ನಡೆದ ಸ್ಥಳ ಚೀನಾ ಗಡಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಹವಾಮಾನ ವೈಪರಿತ್ಯ ಸಮಸ್ಯೆ ಇರಲಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆ ಅಪಘಾತಕ್ಕೆ ಕಾರಣವಾಗಿರಬುಹುದು ಎಂದು ಸೇನೆ ಹೇಳಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. 

ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ: ರಕ್ಷಣಾ ಕಾರ್ಯಾಚರಣೆ ಆರಂಭ

ತನ್ನ ದೈನಂದಿನ ಹಾರಾಟದ ನಡೆಸುತ್ತಿದ್ದ ವೇಳೆ ಕಾಪ್ಟರ್‌ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಸೇನೆ ಹೆಲಿಕಾಪ್ಟರ್‌ನಲ್ಲಿ 5 ಜನ ಪ್ರಾಯಾಣಿಸುತ್ತಿದ್ದರು. ಪತನದ ಬಳಿಕ ಕಾರ್ಯಚರಣೆ ಮೂಲಕ 5 ಜನರ ದೇಹವನ್ನು ಹೊರತೆಗೆಯಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಪತನಗೊಂಡ 2ನೇ ಸೇನಾ ಹೆಲಿಕಾಪ್ಟರ್‌ ಇದಾಗಿದೆ. ಈ ಮೊದಲು ಅ.5ರಂದು ಚೀತಾ ಹೆಲಿಕಾಪ್ಟರ್‌ ತವಾಂಗ್‌ ಪ್ರದೇಶದಲ್ಲಿ ಪತನಗೊಂಡಿದ್ದು, 2 ಮೃತಪಟ್ಟಿದ್ದರು. ಮಾಚ್‌ರ್‍ನಲ್ಲಿ ಇನ್ನೊಂದು ಚೀತಾ ಹೆಲಿಕಾಪ್ಟರ್‌ ಪತನಗೊಂಡಿದ್ದು, ಕಾಪ್ಟರ್‌ ಪೈಲಟ್‌ನನ್ನು ಬಲಿಪಡೆದಿತ್ತು.

ತವಾಂಗ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ
ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರೊಂದು ಅರುಣಾಚಲ ಪ್ರದೇಶದ ಚೀನಾ ಗಡಿರೇಖೆಯ ಬಳಿ ಬುಧವಾರ ಮುಂಜಾನೆ ಪತನಗೊಂಡಿದ್ದು, ಓರ್ವ ಪೈಲಟ್‌ ಮೃತಪಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ಗಡಿರೇಖೆಯ ಬಳಿ ಸಂಚಾರ ಮಾಡುತ್ತಿರುವಾಗ ಘಟನೆ ಸಂಭವಿಸಿದೆ. ಗಾಯಗೊಂಡ ಇಬ್ಬರು ಪೈಲಟ್‌ಗಳನ್ನು ತಕ್ಷಣವೇ ಸಮೀಪದ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದ ಓರ್ವ ಸಾವನಪ್ಪಿದ್ದಾನೆ. ಇನ್ನೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ‘ಹೆಲಿಕಾಪ್ಟರ್‌ ಪತನಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದು ಬಂದಿಲ್ಲ’ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

 

ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಆರು ಪ್ರವಾಸಿಗರು ಸಾವು

ಕೇದಾರನಾಥ ಯಾತ್ರಿಕರ ಹೆಲಿಕಾಪ್ಟರ್‌ ಪತನ: 7 ಸಾವು
ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣ ಕೇದಾರನಾಥ ದೇಗುಲದಿಂದ ಗುಪ್ತಕಾಶಿಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಆರು ಯಾತ್ರಿಕರು ಹಾಗೂ ಒಬ್ಬ ಪೈಲಟ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹವಾಮಾನ ವೈಪರೀತ್ಯದಿಂದ ಮುಂದಿನ ದಾರಿ ಕಾಣಿಸದೆ ಹೆಲಿಕಾಪ್ಟರ್‌ ಮಂಗಳವಾರ ಬೆಳಿಗ್ಗೆ 11.45ಕ್ಕೆ ಹಾರಾಟ ಆರಂಭಿಸಿದ 4-5 ಸೆÜಕೆಂಡ್‌ಗಳಲ್ಲೇ ಪರ್ವತಕ್ಕೆ ಅಪ್ಪಳಿಸಿದೆ.

click me!