ಚಿರಂಜೀವಿ ಹನುಮನ ವೇಷ ತೊಟ್ಟ ಕಲಾವಿದ ವೇದಿಕೆಯಲ್ಲೇ ಚಿರನಿದ್ರೆಗೆ ಜಾರಿದ

By Anusha KbFirst Published Sep 4, 2022, 5:51 PM IST
Highlights

ಗಣೇಶೋತ್ಸವದಲ್ಲಿ ಕಲಾವಿದರೊಬ್ಬರು ಹನುಮನ ವೇಷ ಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಗಣೇಶೋತ್ಸವದಲ್ಲಿ ಕಲಾವಿದರೊಬ್ಬರು ಹನುಮನ ವೇಷ ಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಕಲಾವಿದನನ್ನು ರವಿ ಶರ್ಮಾ(Ravi Sharma) ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಮಣಿಪುರದ (Manipura) ಕೊತ್ವಾಲಿ ಪ್ರದೇಶದಲ್ಲಿ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಇವರು ಹನುಮನ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. 35 ವರ್ಷದ ಶರ್ಮಾ ಅವರು ಹನುಮನ ವೇಷ ಧರಿಸಿ ಕುಣಿಯುತ್ತಿದ್ದವರು ದಿಢೀರ್ ಕುಸಿದು ಬಿದ್ದಿದ್ದಾರೆ. ಆದರೆ ಜನ ಹಾಗೂ ಸಂಘಟಕರು ಇದು ನೃತ್ಯದ ಒಂದು ಭಾಗವೆಂದು ಭಾವಿಸಿದ್ದಾರೆಂದು ಕಾಣುತ್ತದೆ. ಕೆಲ ನಿಮಿಷ ಅವರು ಬಿದ್ದುಕೊಂಡೇ ಇದ್ದರು ಯಾರೂ ಅವರನ್ನು ಗಮನಿಸಿಲ್ಲ. 

ಆದರೆ ನಿಮಿಷಗಳು ಕಳೆದರು ಅವರು ಮೇಲೆಳದೇ ಇದ್ದಾಗ ಅಲ್ಲಿ ಸೇರಿದ ಜನರಿಗೆ ಏನೋ ಅವಘಡವಾಗಿರುವುದು ಗಮನಕ್ಕೆ ಬಂದಿದೆ. ನಂತರ ಓಡಿ ಬಂದ ಅನೇಕರು ಅವರನ್ನು ಮೇಲೆಳಿಸುವ ಪ್ರಯತ್ನ ಮಾಡಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಆಸ್ಪತ್ರೆಗೆ ಕರೆತರುತ್ತಿದ್ದಾಗಲೇ ಅವರ ಪ್ರಾಣ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೃದಯಾಘಾತದಿಂದ ರವಿ ಶರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 

मैनपुरी: गणेश पंडाल में युवक नाचते समय बेहोश होकर गिरा…जिला अस्पताल में डॉक्टरों ने मृत घोषित किया

-कुछ देर तक युवक जमीन पर पड़ा रहा, लोगों ने समझा वह रोल कर रहा है…

-हनुमान का रोल करते हुए डांस रहा था युवक रवी शर्मा pic.twitter.com/2VJihq2dHY

— Astha Kaushik (@ASTHAKAUSHIIK)

ಮಣಿಪುರದ ಕೊತ್ವಾಲಿ ಪ್ರದೇಶದ ಶಿವ ದೇಗುಲದಲ್ಲಿ ಗಣೇಶೋತ್ಸವವನ್ನು ಆಯೋಜಿಸಲಾಗಿತ್ತು. ಈ ಗಣೇಶೋತ್ಸವಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರ ಭಾಗವಾಗಿ ರವಿ ಶರ್ಮಾ ಎಂಬ ಕಲಾವಿದರು ಹನುಮನ ವೇಷ ಧರಿಸಿ ನರ್ತಿಸುತ್ತಿದ್ದರು. ಈ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಅವರು ಸಾವನ್ನಪ್ಪಿದ್ದಾರೆ. ಅವರು ಕುಸಿದು ಬಿದ್ದ ಹಾಗೂ ನಂತರ ಕೆಲ ಕ್ಷಣಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. 

ಗಣೇಶೋತ್ಸವವನ್ನು ದೇಶಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶನನ್ನು ಪೂಜಿಸಲು ಕೂರಿಸುವ ಜನ ನಂತರ ಗಣೇಶನಿಗೆ ಕೆಲವೆಡೆ ವಾರ ಕೆಲವೆಡೆ ತಿಂಗಳು ಕೆಲವೆಡೆ ಎರಡು ಮೂರು ದಿನ ಹೀಗೆ ಒಂದೊಂದು ಕಡೆ ಒಂದೊಂದು ಅವಧಿಯವರೆಗೆ ಪೂಜಿಸಿ ನಂತರ ನೀರಿನಲ್ಲಿ ಬಿಟ್ಟು ಬಿಡುತ್ತಾರೆ. ಅದೇ ರೀತಿ ಇಲ್ಲಿಯೂ ಗಣೇಶನನ್ನು ಕೂರಿಸಲಾಗಿತ್ತು. ಗಣೇಶನನ್ನು ಕೂರಿಸಿದ್ದಲ್ಲಿಂದ ಬಿಡುವವರೆಗೂ ಅಲ್ಲಿ ಪ್ರತಿದಿನವೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ನೂರಾರು ಜನ ದೈವಿಭಕ್ತರು ಗಣೇಶನನ್ನು ನೋಡಲು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಇಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಚಿರಂಜೀವಿ ಹನುಮನ ವೇಷ ಧರಿಸಿದ ವ್ಯಕ್ತಿ ವೇದಿಕೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ.

ಇದೇ ರೀತಿಯ ಪ್ರಕರಣವೊಂದರಲ್ಲಿ ಉತ್ತರಪ್ರದೇಶದ ಬರೇಲಿಯಲ್ಲಿ (Bareilly) 48 ವರ್ಷದ ವ್ಯಕ್ತಿಯೊಬ್ಬರು, ಹೋಟೇಲೊಂದರಲ್ಲಿ ಆಯೋಜಿಸಿದ್ದ ಸ್ನೇಹಿತರ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದವರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅವರು ಜನಪ್ರಿಯ ಹಿಂದಿ ಸಿನಿಮಾದ ಹಾಡೊಂದಕ್ಕೆ (popular Hindi song )ನರ್ತಿಸುತ್ತಲೇ ನೆಲದ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಮೃತರನ್ನು ಪ್ರಭಾತ್ ಎಂದು ಗುರುತಿಸಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಪ್ರಾಣ ಬಿಟ್ಟಿದ್ದರು. 

click me!