2024 Lok Sabha Polls: ವಿಪಕ್ಷಗಳು ಒಗ್ಗೂಡಿದರೆ ಬಿಜೆಪಿ 50 ಸ್ಥಾನಕ್ಕೆ ಕುಸಿಯಲಿದೆ ಎಂದ ನಿತೀಶ್‌ ಕುಮಾರ್‌

By BK AshwinFirst Published Sep 4, 2022, 2:56 PM IST
Highlights

ನಿತೀಶ್‌ ಕುಮಾರ್‌ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿಸುವ ಯತ್ನ ಕಂಡುಬರುತ್ತಿದೆ. ಈ ನಡುವೆ, ಎಲ್ಲ ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಿದ್ದಾರೆ. 

ಪ್ರಮುಖ ಜೆಡಿ(ಯು)  (Janata Dal United) ಸಮಾವೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ, ಪ್ರತಿಪಕ್ಷಗಳು ಒಗ್ಗೂಡಿದರೆ 2024ರ ಲೋಕಸಭೆ ಚುನಾವಣೆಯಲ್ಲಿ (2024 LokSabha POlls) ಕೇಸರಿ ಪಕ್ಷವನ್ನು ಕೇವಲ 50 ಸ್ಥಾನಗಳಿಗೆ ಇಳಿಸಬಹುದು ಎಂದು ಹೇಳಿದರು. "ಎಲ್ಲ (ವಿರೋಧ) ಪಕ್ಷಗಳು ಒಟ್ಟಾಗಿ ಹೋರಾಡಿದರೆ, ಬಿಜೆಪಿಯು ಸುಮಾರು 50 ಸ್ಥಾನಗಳಿಗೆ ಇಳಿಯುತ್ತದೆ. ನಾನು ಆ ಅಭಿಯಾನಕ್ಕೆ (Campaign) ನನ್ನನ್ನು ಮೀಸಲಿಡುತ್ತಿದ್ದೇನೆ" ಎಂದು ನಿತೀಶ್‌ ಕುಮಾರ್ ಪಾಟ್ನಾದಲ್ಲಿ ನಡೆದ ತಮ್ಮ ಪಕ್ಷದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (JDU National Executive Meet) ಹೇಳಿದರು. ಸೆಪ್ಟೆಂಬರ್ 5 ರಂದು ದೆಹಲಿಗೆ ಎರಡು ದಿನಗಳ ಪ್ರವಾಸಕ್ಕೆ ಹೋಗಲಿರುವ ನಿತೀಶ್‌ ಕುಮಾರ್‌, ಅದಕ್ಕೂ ಮುನ್ನ ಈ ಹೇಳಿಕೆ ನೀಡಿದ್ದಾರೆ. 

ದೆಹಲಿಯಲ್ಲಿ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಹಲವು ಪಕ್ಷಗಳ ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆ. ನಾನೇ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ಎಂಬುದನ್ನು ಹೇಳಿಕೊಳ್ಳದ ಬಿಹಾರ ಸಿಎಂ (Bihar Chief Minister), ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುವುದು ತಮ್ಮ ಏಕೈಕ ಗುರಿಯಾಗಿದೆ ಎಂದು ಪ್ರತಿಪಾದಿಸಿದರು. 

Manipur: ಜೆಡಿಯುಗೆ ಶಾಕ್‌, ಐವರು ಶಾಸಕರು ಬಿಜೆಪಿ ಜೊತೆ ವಿಲೀನ!

ಇನ್ನು, ಮಣಿಪುರದ 6 ಜೆಡಿಯು ಶಾಸಕರ ಪೈಕಿ ಐವರು ಕೇಸರಿ ಪಕ್ಷಕ್ಕೆ ಹೋದ ನಂತರ ನಿತೀಶ್‌ ಕುಮಾರ್ ಬಿಜೆಪಿಯನ್ನು ಕಿಡಿ ಕಾರಿದ್ದಾರೆ. ಹಾಗೂ, ಪಕ್ಷದ ಮುಖ್ಯಸ್ಥ ರಾಜೀವ್ ರಂಜನ್ ಅಕಾ ಲಲನ್ ಸಿಂಗ್ ಅವರು ಮಾಜಿ ಮಿತ್ರ ಪಕ್ಷವು ಇತರ ಪಕ್ಷಗಳ ಶಾಸಕರನ್ನು ಬೇಟೆಯಾಡಲು ಹಣದ ಬಲವನ್ನು ಬಳಸುತ್ತಿದೆ ಎಂದು ಆರೋಪಿಸಿದರು. "ಇದು ಸರಿಯಾಗಿದೆಯೇ? ಇದು ಸಾಂವಿಧಾನಿಕವೇ? ಇದು ಸ್ಥಾಪಿತ ಮಾನದಂಡಗಳಿಗೆ ಅನುಗುಣವಾಗಿದೆಯೇ? ಅವರು ಎಲ್ಲೆಡೆ ಹಾಗೆ ಮಾಡುತ್ತಿದ್ದಾರೆ. ಆದ್ದರಿಂದ ಸಕಾರಾತ್ಮಕ ಜನಾದೇಶಕ್ಕಾಗಿ 2024 ರಲ್ಲಿ ಎಲ್ಲಾ ಪಕ್ಷಗಳು ಒಂದಾಗಬೇಕು" ಎಂದು ನಿತೀಶ್‌ ಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು. ಹಾಗೂ, ನಾವು ಎನ್‌ಡಿಎಯಲ್ಲಿದ್ದಾಗ, ಅವರು (ಬಿಜೆಪಿ) ನಮ್ಮ ಶಾಸಕರಿಗೆ ಏನನ್ನೂ ನೀಡಲಿಲ್ಲ, ಈಗ ಅವರನ್ನು ಒಲಿಸಿಕೊಳ್ಳುತ್ತಿದ್ದಾರೆ ಎಂದು 71 ವರ್ಷದ ಹಿರಿಯ ರಾಜಕಾರಣಿ ಹೇಳಿದರು.

ನಿತೀಶ್‌ ಮುಂದಿನ ಪ್ರಧಾನಿ ಅಭ್ಯರ್ಥಿ..!
ಮತ್ತೊಂದೆಡೆ, 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಎದುರಿಸಲು ನಿತೀಶ್ ಕುಮಾರ್ ಅವರು ಪ್ರಧಾನಿಯಾಗುತ್ತಾರೆ ಎಂದು ಸೂಚಿಸಲು ಜೆಡಿಯು ಹರಸಾಹಸ ಪಡುತ್ತಿದೆ. ಜೆಡಿ(ಯು) ಪ್ರಧಾನ ಕಚೇರಿ ಸೇರಿದಂತೆ ಪಾಟ್ನಾದಾದ್ಯಂತ ಈಗಾಗಲೇ ಹಲವಾರು ಪೋಸ್ಟರ್‌ಗಳು ಮತ್ತು ಜಾಹೀರಾತು ಫಲಕಗಳನ್ನು ಹಾಕಲಾಗಿದ್ದು, ಪಕ್ಷವು ತನ್ನ ವಾಸ್ತವಿಕ ನಾಯಕ "ರಾಷ್ಟ್ರೀಯ ಪಾತ್ರ" ವಹಿಸಬೇಕೆಂದು ನಿರೀಕ್ಷಿಸುತ್ತದೆ ಎಂಬ ಸಂದೇಶವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ರವಾನಿಸಲಾಗಿದೆ. ನಿತೀಶ್ ಕುಮಾರ್ ಅವರ ಅದ್ವಿತೀಯ ಚಿತ್ರದೊಂದಿಗೆ ಮತ್ತು "ಬಿಹಾರ್ ಮೇ ದಿಖಾ, ಭಾರತ್ ಮೇ ದೀಖೇಗಾ" ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು ಬೃಹತ್ ಹೋರ್ಡಿಂಗ್ ಅನ್ನು ರಾಜ್ಯ ರಾಜಧಾನಿಯ ತಾರಾಮಂಡಲ್ ಕ್ರಾಸಿಂಗ್‌ನಲ್ಲಿ ಹಾಕಲಾಗಿದೆ. ಇದು ಜೆಡಿಯು 2024 ರಲ್ಲಿ ನಿತೀಶ್‌ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುತ್ತಿದೆ ಎಂದು ಸೂಚಿಸುತ್ತದೆ.

ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಘ್ನ, ಇಂಟರ್ನೆಟ್ ಬಂದ್, ನಿಷೇಧಾಜ್ಞೆ ಜಾರಿ!

ಬಿಜೆಪಿ ವಿರುದ್ಧ ತಿರುಗಿಬಿದ್ದ ಜೆಡಿಯು
ಮೈತ್ರಿ ಧರ್ಮವನ್ನು ಪಾಲಿಸಿಲ್ಲ ಎಂದು ನಿತೀಶ್‌ ಕುಮಾರ್ ಬಿಜೆಪಿ ವಿರುದ್ಧ ಆರೋಪಿಸಿದರೆ, "ದೇಶವು ಬಿಕ್ಕಟ್ಟಿನ ಮೂಲಕ ಹಾದುಹೋಗುತ್ತಿದೆ. ಕೇಂದ್ರವು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಮಾನದಂಡಗಳನ್ನು ಉಲ್ಲಂಘಿಸಿದೆ ಮತ್ತು ಸರ್ವಾಧಿಕಾರದತ್ತ ಸಾಗುತ್ತಿದೆ. ಇದು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ" ಎಂದು ಜೆಡಿಯು ಹೇಳಿದೆ. ಬಿಜೆಪಿಯು ದೇಶದಲ್ಲಿ "ಅಘೋಷಿತ ತುರ್ತುಪರಿಸ್ಥಿತಿ"ಯನ್ನು ಹೇರುತ್ತಿದೆ, ವಿರೋಧದ ಧ್ವನಿಗಳನ್ನು ಮೌನಗೊಳಿಸಲು ತನಿಖಾ ಸಂಸ್ಥೆಗಳನ್ನು "ದುರುಪಯೋಗಪಡಿಸಿಕೊಳ್ಳುತ್ತಿದೆ" ಮತ್ತು ದೇಶದಲ್ಲಿ "ಕೋಮು ಉನ್ಮಾದವನ್ನು" ಪ್ರಚೋದಿಸುತ್ತಿದೆ ಎಂದು ಪಕ್ಷವು ಆರೋಪಿಸಿದೆ.

click me!