
ಸಿಂಗಾಪುರ: ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ. ಇದು ಸರ್ಕಾರ ಸಾಧಿಸಿದ ಮಹತ್ವದ ಮೈಲಿಗಲ್ಲು ಎಂದು ಹಣಕಾಸು ಕಾರ್ಯಪಡೆ (ಎಫ್‌ಎಟಿಎಸ್) ಪ್ರಶಂಸೆ ವ್ಯಕ್ತಪಡಿಸಿದೆ. ಎಫ್‌ಎಟಿಎಸ್ 2023-24ನೇ ಸಾಲಿನ ಪರಸ್ಪರ ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮೆಚ್ಚುಗೆಯ ಮಾತುಗಳನ್ನು ಆಡಿದೆ.
ಭ್ರಷ್ಟಾಚಾರ, ವಂಚನೆ ಮತ್ತು ಸಂಘಟಿತ ಅಪರಾಧಗಳಂತಹ ಅಕ್ರಮಗಳನ್ನು ತಡೆಯಲು ಭಾರತ ಕೈಗೊಂಡ ಕ್ರಮಗಳು ಗಮನಾರ್ಹ ಎಂದಿರುವ ಎಫ್‌ಎಟಿಎಫ್, ನಗದು ವ್ಯವಹಾರಗಳಿಂದ ಡಿಜಿಟಲ್ ವ್ಯವಹಾರಕ್ಕೆ ಪರಿವರ್ತನೆ, ಜನ್‌ಧನ್, ಆಧಾರ್ ಅನುಷ್ಠಾನಗಳಂತಹ ಕ್ರಮಗಳಿಂದ ಆರ್ಥಿಕ ಒಳಗೊಳ್ಳುಕೆ ಹಾಗೂ ಡಿಜಿಟಲ್ ಪಾವತಿಗಳು ಸಾಧ್ಯವಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ದ ಚಪ್ಪಲಿ 6 ವರ್ಷಗಳ ಬಳಿಕ ಬಂತು; ಗ್ರಾಹಕ ಫುಲ್ ಶಾಕ್!
ಈ ಕ್ರಮಗಳಿಂದ ವ್ಯವಹಾರಗಳ ಮೇಲೆ ನಿಗಾ ಇಟ್ಟು ಅಕ್ರಮಗಳನ್ನು ಮಟ್ಟಹಾಕಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದೆ. ಇದು ಭಾರತಕ್ಕೂ ಅನೇಕ ವಿಧಗಳಲ್ಲಿ ಲಾಭದಾಯಕವಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗುವುದರೊಂದಿಗೆ ಹೂಡಿಕೆದಾರರ ವಿಶ್ವಾಸ ಗಳಿಸುವುದರಲ್ಲೂ ಸಹಕಾರಿ. ಜೊತೆಗೆ ಯುಪಿಐನ ಜಾಗತಿಕ ವಿಸ್ತರಣೆಗೂ ಅನುಕೂಲ.
ಬೆಂಗಳೂರು: ಪದೆ ಪದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡೋ ಈ ಕ್ಯಾಬ್ ಡ್ರೈವರ್ಸ್ ಗಳಿಕೆ ನೋಡಿ ನೆಟ್ಟಿಗರು ದಂಗು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ