ಬೆಂಗಳೂರಿನಿಂದ ಮತ್ತೊಂದು ನಗರಕ್ಕೆ ವಂದೇ ಭಾರತ್ ರೈಲು ನಾಳೆ ಆರಂಭ, ಇದು ನಗರದ 8ನೇ ಟ್ರೈನ್!

By Chethan Kumar  |  First Published Aug 30, 2024, 12:20 PM IST

ಬೆಂಗಳೂರಿನ 8ನೇ ವಂದೇ ಭಾರತ್ ರೈಲಿಗೆ ನಾಳೆ(ಆ.30) ಚಾಲನೆ ಸಿಗುತ್ತಿದೆ. ಬೆಂಗಳೂರು-ಮಧುರೈ ನಡುವಿನ ಈ ರೈಲು ಕೇವಲ 8 ಗಂಟೆಯಲ್ಲಿ  ತಲುಪಲಿದೆ. 


ಬೆಂಗಳೂರು(ಆ.30) ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ಸೇರ್ಪಡೆಯಾಗುತ್ತಿದೆ. ನಾಳೆ(ಆ.30) ಬೆಂಗಳೂರು-ಮಧುರೈ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗುತ್ತದೆ. 430 ಕಿಲೋಮೀಟರ್ ದೂರವನ್ನು 8 ಗಂಟೆಯಲ್ಲಿ ತಲುಪಲಿದೆ. ಸದ್ಯ ಇರುವ ಎಕ್ಸ್‌ಪ್ರೆಸ್ ರೈಲುಗಳು 9 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣದಿಂದ ಮಧ್ಯಾಹ್ನ 1.30ಕ್ಕೆ ವಂದೇ ಭಾರತ್ ರೈಲು ಹೊರಡಲಿದ್ದು, ರಾತ್ರಿ 9.45ಕ್ಕೆ ಮಧುರೈ ತಲುಪಲಿದೆ.

ಬೆಂಗಳೂರು-ಮಧುರೈ ವಂದೇ ಭಾರತ್ 20671 ರೈಲು ಕೆಲವೇ ಕೆಲವು ನಿಲ್ದಾಣದಲ್ಲಿ ನಿಲುಗಡೆ ಮಾಡಲಿದೆ. ಕಂಟೊನ್ಮೆಂಟ್ ರೈಲು ನಿಲ್ದಾಣದಿಂದ ಹೊರಟ ಬಳಿಕ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಬಳಿಕ ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಲ್ಲಿ ಹಾಗೂ ದಿಂಡುಗಲ್ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗಲಿದೆ. ಇನ್ನು ಮುಧುರೈ ನಿಲ್ದಾಣದಿಂದ ಬೆಳಗ್ಗೆ 5.15ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ.

Tap to resize

Latest Videos

ಕ್ರೆಡಿಟ್‌ ಪಡೆಯಲು ಕಾಂಗ್ರೆಸ್‌ ಸಂಸದರು, ಬಿಜೆಪಿ ಮಂತ್ರಿಗಳ ಜಿದ್ದು,ಕಲಬುರಗಿ- ಬೆಂಗಳೂರು ವಂದೇ ಭಾರತ್ ರದ್ದು!

ವಾರದ 7 ದಿನದಲ್ಲಿ 6 ದಿನ ಬೆಂಗಳೂರು-ಮಧುರೈ ವಂದೇ ಭಾರತ್ ರೈಲು ಸಂಚರಿಸಲಿದೆ. ಆದರೆ ಮಂಗಳವಾರ ಈ ರೈಲು ಸೇವೆ ಲಭ್ಯವಿರುವುದಿಲ್ಲ. 8 ಬೋಗಿಗಳ ರೈಲು ಇದಾಗಿದ್ದು, ಒಂದು ಎಕ್ಸ್‌ಕ್ಯೂಟೀವ್ ಕ್ಲಾಸ್ ಬೋಗಿ ಹೊಂದಿದೆ. ಆಗಸ್ಟ್ 31ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೂತನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ರೈಲ್ವೇ ರಾಜ್ಯ ಖಾತೆ ಸಚಿವ ವಿ ಸೋವಣ್ಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದು ಬೆಂಗಳೂರಿನ 8ನೇ ವಂದೇ ಭಾರತ್ ರೈಲು ಆಗಿದೆ. ಮೈಸೂರು ಚೆನ್ನೈ ನಡುವೆ ಎರಡು ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಇನ್ನು ಬೆಂಗಳೂರಿನಿಂದ ಧಾರವಾಡ, ಬೆಂಗಳೂರಿನಿಂದ ಕಲಬುರಗಿ, ಬೆಂಗಳೂರಿನಿಂದ ಹೈದರಾಬಾದ್, ಬೆಂಗಳೂರಿನಿಂದ ಕೊಯಂಬತ್ತರು ಹಾಗೂ ಬೆಂಗಳೂರು - ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದೆ.

ಈಗಾಲೇ ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ ಹಾಗೂ ಮಂಗಳೂರಿಗೆ ವಂದೇ ಭಾರತ್ ರೈಲಿಗೆ ಬೇಡಿಕೆ ಇಡಲಾಗಿದೆ. ರಾಜ್ಯದ ವಿ ಸೋವಣ್ಣ ರೈಲ್ವೇ ಸಚಿವರಾಗಿರುವ ಕಾರಣ ಈ ಭಾಗಗಳಿಗೂ ರೈಲು ಸೇವೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ಬೆಂಗಳೂರು ಧಾರವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲಿಗೆ ತುಮಕೂರಿನಲ್ಲಿ ನಿಲಗಡೆಗೆ ಅವಕಾಶ ಮಾಡಲಾಗಿದೆ.

ಹುಬ್ಬಳ್ಳಿ, ಗದಗ ರೈಲುಗಳಿಗೆ ಬೈಪಾಸ್ ವ್ಯವಸ್ಥೆ ಮಾಡಿ, ವಿಜಯಪುರಕ್ಕೆ ಪ್ರಯಾಣದ ಅವಧಿ ತಗ್ಗಿಸಿ: ಎಂ.ಬಿ. ಪಾಟೀಲ!
 

click me!