ತಮಿಳ್ನಾಡಲ್ಲಿ ಶಂಕಿತ ಐಸಿಸ್‌ ಉಗ್ರ ಮಹಮ್ಮದ್‌ ಬಂಧನ!

By Suvarna News  |  First Published May 29, 2021, 9:35 AM IST

* ಸಿರಿಯಾ ಮೂಲದ ಐಸಿಸ್‌ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರ

* ತಮಿಳ್ನಾಡಲ್ಲಿ ಶಂಕಿತ ಐಸಿಸ್‌ ಉಗ್ರ ಮಹಮ್ಮದ್‌ ಬಂಧನ

* 2018ರಲ್ಲಿ ಕೊಯಮತ್ತೂರಿನಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣ


ಚೆನ್ನೈ(ಮೇ./29): ಸಿರಿಯಾ ಮೂಲದ ಐಸಿಸ್‌ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ರಾತ್ರಿ ತಮಿಳುನಾಡಿನ ಮೈಲಾದುಥುರೈನಲ್ಲಿ ಬಂಧಿಸಿದೆ. ಬಂಧಿತನನ್ನು ಎ.ಮಹಮ್ಮದ್‌ ಆಶಿಕ್‌ (25) ಎಂದು ಗುರುತಿಸಲಾಗಿದೆ.

ಅನ್ಯ ಮತೀಯರನ್ನು ಹತ್ಯೆ ಮಾಡಿ ಕೋಮುದ್ವೇಷ ಹರಡಿಸುವ ನಿಟ್ಟಿನಲ್ಲಿ ತಮಿಳುನಾಡಿನ 8 ಜನರ ತಂಡವೊಂದು ಕೊಯಮತ್ತೂರಿನಲ್ಲಿ ಸಂಚು ರೂಪಿಸಿತ್ತು. ಇದು ಬೆಳಕಿಗೆ ಬಂದು, 2018ರಲ್ಲಿ ಆಶಿಕ್‌ ಸೇರಿ ಎಲ್ಲರನ್ನೂ ಬಂಧಿಸಲಾಗಿತ್ತು. ಆದರೆ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆಶಿಕ್‌ ವಿಚಾರಣೆಗೆ ಹಾಜರಾಗದೇ ಕಣ್ಮರೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಬಲೆ ಬೀಸಲಾಗಿತ್ತು.

Tap to resize

Latest Videos

ಇತ್ತೀಚೆಗೆ ಆತ ಮುಸ್ಲಿಮರೇ ಹೆಚ್ಚಾಗಿರುವ ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸುಳಿವು ಪಡೆದ ಎನ್‌ಐಎ ತಂಡ, ಗುರುವಾರ ರಾತ್ರಿ ದಾಳಿ ನಡೆಸಿ ಆಶಿಕ್‌ನನ್ನು ಬಂಧಿಸಿದೆ.

click me!