Latest Videos

ಮತದಾರನ ಕೆನ್ನೆಗೆ ಬಾರಿಸಿದ ಶಾಸಕ: ತಿರುಗಿಸಿ ಕೊಟ್ಟ ವೋಟರ್‌ ಮೇಲೆ ಮುಗಿಬಿದ್ದ YSR ಶಾಸಕನ ಬೆಂಬಲಿಗರು

By Anusha KbFirst Published May 13, 2024, 3:35 PM IST
Highlights

ಮತ ಹಾಕಲು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಶಾಸಕನೋರ್ವ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಸುಮ್ಮನಿರದ ಮತದಾರ ಕೂಡ ತಿರುಗಿಸಿ ಬಾರಿಸಿದ್ದರೇ ಆದರೆ ಈ ವೇಳೆ ಶಾಸಕನ ಜೊತೆಗಿದ್ದವರೆಲ್ಲಾ ಬೆಂಬಲಿಗರೆಲ್ಲಾ ಸೇರಿಕೊಂಡು ಸಾಮಾನ್ಯ ಮತದಾರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌: ದೇಶದ ಹಲವೆಡೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದರೆ, ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ನಡೆಯುತ್ತಿದೆ. ಈ ವೇಳೆ ಅಚಾತುರ್ಯವೊಂದು ನಡೆದಿದ್ದು, ಮತ ಹಾಕಲು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಶಾಸಕನೋರ್ವ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಸುಮ್ಮನಿರದ ಮತದಾರ ಕೂಡ ತಿರುಗಿಸಿ ಬಾರಿಸಿದ್ದರೇ ಆದರೆ ಈ ವೇಳೆ ಶಾಸಕನ ಜೊತೆಗಿದ್ದವರೆಲ್ಲಾ ಬೆಂಬಲಿಗರೆಲ್ಲಾ ಸೇರಿಕೊಂಡು ಸಾಮಾನ್ಯ ಮತದಾರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತದಾನದ ದಿನವೇ ಶಾಸಕನ ಈ ಉದ್ಧಟನತದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇದರ ಜೊತೆಗೆ ಇಂತವರೆಲ್ಲಾ ಜನ ಪ್ರತಿನಿಧಿಗಳಾಗಿ ಗೆದ್ದು ಬಂದರೆ ಸಾಮಾನ್ಯ ಜನರ ಕತೆ ಏನು ಎಂಬ ಪ್ರಶ್ನೆ ಮೂಡಿದೆ.

ಹಾಗಾದರೆ ಆಗಿದ್ದೇನು? 

ಆಂಧ್ರ ಪ್ರದೇಶದ ಗುಂಟೂರು ವಿಧಾನಸಭಾ ಕ್ಷೇತ್ರ ಪೋಲಿಂಗ್ ಬೂತೊಂದರಲ್ಲಿ ಈ ಘಟನೆ ನಡೆದಿದೆ. ಮತದಾರರು ತಮ್ಮ ಕ್ಷೇತ್ರದಲ್ಲಿ ವೋಟು ಹಾಕುವುದಕ್ಕಾಗಿ ಸಾಲಾಗಿ ನಿಂತಿದ್ದ ವೇಳೆ ಅಲ್ಲಿಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಪಕ್ಷದ ಹಾಲಿ ಶಾಸಕ ಎ ಶಿವಕುಮಾರ್ ಬಂದಿದ್ದು, ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮತದಾರನೋರ್ವನ ಕೆನ್ನೆಗೆ ಶಾಸಕ ಎ. ಶಿವಕುಮಾರ್ ಬಾರಿಸಿದ್ದಾನೆ. ಈ ವೇಳೆ ಮತದಾರನೂ ತಿರುಗಿಸಿ ಬಾರಿಸಿದ್ದಾನೆ. ಆದರೆ ಈ ವೇಳೆ ಶಾಸಕ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರೆಲ್ಲರೂ ಪಾಪದ ಮತದಾರನೋರ್ವನ ಮೇಲೆ ತೋಳಗಳಂತೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. 

ಆಂಧ್ರದಲ್ಲಿ ಮೋದಿ, ಚಂದ್ರಬಾಬು ನಾಯ್ಡು, ಪವನ್‌ ಕಲ್ಯಾಣ್‌ ಮೈತ್ರಿಯಿಂದ ಮ್ಯಾಜಿಕ್‌ ನಿರೀಕ್ಷೆ

ಅಲ್ಲದೇ ಈ ವೇಳೆ ಮತದಾರನ ರಕ್ಷಣೆಗೆ ಯಾವ ಭದ್ರತಾ ಸಿಬ್ಬಂದಿಯೂ ಆಗಮಿಸಿಲ್ಲ,  ಇಂದು ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳು ಸೇರಿದಂತೆ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 

Voter who objected to District jumping queue, was slapped by him & voter returned in kind; ugly show of political musclepower as the MLA candidate's henchmen joined attack on voter pic.twitter.com/Z5wK0enrWK

— Uma Sudhir (@umasudhir)

ಲೋಕ ಕದನ: ವೈಎಸ್‌ಆರ್‌ ಕೋಟೆಯಲ್ಲಿ ಸೋದರನಿಗೆ ಸೋದರಿ ಶರ್ಮಿಳಾ ಸವಾಲು

 

click me!