ಶೈಲಜಾ ಟೀಚರ್ ವೀಡಿಯೋ ಯಾರ್ ಮಾಡ್ತಾರೆ, ಮಂಜು ವಾರಿಯರ್‌ದಾದ್ರೆ ನಂಬಬಹುದು ಎಂದ ಯುಡಿಪಿ ನಾಯಕ

Published : May 13, 2024, 02:33 PM ISTUpdated : May 13, 2024, 02:37 PM IST
ಶೈಲಜಾ ಟೀಚರ್ ವೀಡಿಯೋ ಯಾರ್ ಮಾಡ್ತಾರೆ, ಮಂಜು ವಾರಿಯರ್‌ದಾದ್ರೆ ನಂಬಬಹುದು ಎಂದ ಯುಡಿಪಿ ನಾಯಕ

ಸಾರಾಂಶ

ಕೇರಳದ ವಡಕ್ಕರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕೆ.ಕೆ.ಶೈಲಜಾ ಅವರ ತಿರುಚಿದ ಅಶ್ಲೀಲ ವಿಡಿಯೋ ಸುಳ್ಳೆಂದು ಹೇಳುವ ಭರದಲ್ಲಿ ಯುಡಿಪಿ ನಾಯಕ ಹರಿಹರನ್ ನೀಡಿದ ಹೇಳಿಕೆ ಯೊಂದು ಭಾರೀ ವಿವಾದ ಸೃಷ್ಟಿಸಿದೆ. 

ತಿರುವನಂತಪುರ: ಕೇರಳದ ವಡಕ್ಕರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕೆ.ಕೆ.ಶೈಲಜಾ ಅವರ ತಿರುಚಿದ ಅಶ್ಲೀಲ ವಿಡಿಯೋ ಸುಳ್ಳೆಂದು ಹೇಳುವ ಭರದಲ್ಲಿ ಯುಡಿಪಿ ನಾಯಕ ಹರಿಹರನ್ ನೀಡಿದ ಹೇಳಿಕೆ ಯೊಂದು ಭಾರೀ ವಿವಾದ ಸೃಷ್ಟಿಸಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರಿಹರನ್ ಅವರು, 'ಯಾರಾದರೂ ಶಿಕ್ಷಕಿ (ಕೇರಳದ ಮಾಜಿ ಸಚಿವೆ ಕೆ.ಕೆ.ಶೈಲಜಾ)ಯವರ ಆಶ್ಲೀಲ ವಿಡಿಯೋವನ್ನು ಮಾಡು ತಾರೆಯೇ? ನಟಿ ಮಂಜು ವಾರಿಯರ್ ಅಂತವರ ಆಶ್ಲೀಲ ವಿಡಿಯೋ ಮಾಡಿದ್ದಾರೆ ಎಂದರೆ ಒಪ್ಪಬಹುದು.

ಎಡಪಂಥೀಯರು ಮತದಾರರನ್ನು ಸೆಳೆಯಲು ಮತ್ತು ಅವರಿಂದ ಸಹಾನೂಭೂತಿ ಗಿಟ್ಟಿಸಿಕೊಳ್ಳಲು ಈ ತರ ನಕಲಿ ವಿಡಿಯೋಗಳನ್ನು ತಾವೇ ಸೃಷ್ಟಿ ಮಾಡಿ ಪ್ರಸಾರ ಮಾಡುತ್ತಾರೆ' ಎಂದು ಯುಡಿಪಿ ನಾಯಕ ಹರಿಹರನ್ ಹೇಳಿದ್ದು, ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಹರಿಹರನ್ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ. 

ಆದರೆ ಹೀಗೆ ಕಾಮೆಂಟ್ ಮಾಡಿದ ಅಸಭ್ಯವಾಗಿ ಕಾಮೆಂಟ್ ಮಾಡಿ ಮಹಿಳೆಯರ ಘನತೆಗೆ ಕುಂದು ತಂದ ಯುಡಿಪಿ ನಾಯಕನ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ನೀಡಿದ ದೂರಿನ ನಂತರ ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ಹಾಗೂ 153ರ ಅಡಿ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರೆವಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿಯ ಸದಸ್ಯನಾಗಿದ್ದು, ಕೆಲ ಮಾಹಿತಿ ಪ್ರಕಾರ ಈ ಹೇಳಿಕೆಯ ನಂತರ ಹರಿಹರನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇವರ ಮನೆ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ವರದಿ ಆಗಿದೆ.  ಈ ಹಿನ್ನೆಲೆಯಲ್ಲಿ ಹರಿಹರನ್ ಅವರ ಮನೆಗೆ ಬಾಂಬ್ ಸ್ಕ್ಯಾಡ್ ಭೇಟಿ ನೀಡಿ ಮಾದರಿ ಸಂಗ್ರಹಿಸಿದೆ.  ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅದು ತೀವ್ರತರವಾದ ಸ್ಫೋಟಕ ಅಲ್ಲ ಎಂಬುದು ತಿಳಿದು ಬಂದಿದೆ. 

ಶೈಲಜಾ ಟೀಚರ್‌ಗೆ ಮಂತ್ರಿಗಿರಿ ತಪ್ಪಲು ಇದೇ ದೊಡ್ಡ ಕಾರಣ!

ಆಹಾರ ಪದಾರ್ಥಗಳ ಮೇಲಿನ ಮಾಹಿತಿ ಬಗ್ಗೆ ಎಚ್ಚರ!

ನವದೆಹಲಿ: ಆಹಾರ ಪದಾರ್ಥ ಪೊಟ್ಟಣಗಳ ಮೇಲೆ ಜನರನ್ನು ಆಕರ್ಷಿಸುವ ಸಲುವಾಗಿ ತಯಾರಕರು ಕೆಲವು ಮಾಹಿತಿಯನ್ನು ಮುಚ್ಚಿಡುವ ಸಾಧ್ಯತೆಯಿದ್ದು, ಜನತೆ ಎಚ್ಚರದಿಂದ ಅವುಗಳನ್ನು ಖರೀದಿಸಬೇಕು ಎಂಬುದಾಗಿ ಐಸಿಎಂಆರ್‌ ಅಂಗಸಂಸ್ಥೆ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ತಿಳಿಸಿದೆ.

ಈ ಕುರಿತು ಸಂಸ್ಥೆಯ ಹಿರಿಯ ನಿರ್ದೇಶಕರಾದ ಡಾ. ಹೇಮಲತಾ ಕೆಲವು ನಿರ್ದೇಶನಗಳನ್ನು ಸಿದ್ಧಪಡಿಸಿದ್ದು, ಜನತೆಗೆ ಉದಾಹರಣೆ ಸಮೇತ ಕೆಲವು ಆಹಾರ ತಯಾರಕರು ನೀಡುತ್ತಿರುವ ಅಪೂರ್ಣ ಮಾಹಿತಿಯ ಕುರಿತು ಎಚ್ಚರದಿಂದಿರುವಂತೆ ತಿಳಿಸಲಾಗಿದೆ.

ಉದಾಹರಣೆಗೆ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ ಎಂಬುದನ್ನು ಆಹಾರ ಪದಾರ್ಥಗಳಲ್ಲಿ 1-2 ನೈಸರ್ಗಿಕ ಪದಾರ್ಥ ಬಳಕೆಯಾಗಿದ್ದರೂ ಸಾರ್ವತ್ರಿಕವಾಗಿ ಬಳಸಲಾಗುತ್ತದೆ. ಇದೇ ರೀತಿ ಹಣ್ಣಿನ ರಸ ಎಂಬುದಾಗಿ ಪರಿಗಣಿಸಲು ಆಹಾರ ಪದಾರ್ಥದಲ್ಲಿ ಕನಿಷ್ಠ ಶೇ.10ರಷ್ಟು ಹಣ್ಣಿನ ರಸ ಬಳಸಿರಬೇಕು ಎಂಬ ನಿಯಮವಿದೆ. 

ಆದರೆ ಅಷ್ಟು ಪ್ರಮಾಣದ ಹಣ್ಣಿನ ರಸ ಬಳಸುವ ಜೊತೆಗೆ ಸಕ್ಕರೆ ಸೇರಿದಂತೆ ಇತರ ಪದಾರ್ಥಗಳನ್ನೂ ಬಳಸಿರುವ ಸಾಧ್ಯತೆಯಿದ್ದು, ರೋಗಿಗಳಿಗೆ ಇದು ಹಾನಿಕಾರಕವಾಗುವ ಸಂಭವವಿದೆ.ಹಾಗೆಯೇ ಸಾವಯವ ಪದಾರ್ಥ ಎಂದು ಉಲ್ಲೇಖಿಸಲು ಪದಾರ್ಥಕ್ಕೆ ಯಾವುದೇ ರೀತಿಯ ಕೃತಕ ಲೇಪನ ಮಾಡಿರಬಾರದು ಮತ್ತು ಬೆಳೆಯುವಾಗ ಕೀಟನಾಶಕಗಳನ್ನು ಬಳಸಿರಬಾರದು. ಆಗ ಮಾತ್ರ ಜೈವಿಕ್‌ ಭಾರತ್‌ ಲೋಗೋ ಹಾಕಿಕೊಳ್ಳಲು ಅವಕಾಶವಿದೆ.

ಕೆಲವೊಮ್ಮೆ ಆಹಾರ ಪೊಟ್ಟಣದಲ್ಲಿ ಪದಾರ್ಥಗಳ ಪ್ರಮಾಣವನ್ನು ಉಲ್ಲೇಖಿಸಿರುವುದೇ ಇಲ್ಲ. ಕಡಿಮೆ ಸಕ್ಕರೆ, ಕಡಿಮೆ ಕ್ಯಾಲೋರಿ ಎಂದು ಮಾತ್ರ ಬಳಸಲಾಗುತ್ತದೆ. ಬದಲಾಗಿ ಅಂಕಿಗಳಲ್ಲಿ ನಿರ್ದಿಷ್ಟ ಪ್ರಮಾಣವನ್ನು ಉಲ್ಲೇಖಿಸಬೇಕು. ಜೊತೆಗೆ ಕೆಲವೊಮ್ಮೆ ಪ್ರಮಾಣವನ್ನು 100 ಗ್ರಾಂ/ಎಂಎಲ್‌ಗೆ ಸೂಚಿಸಿ ಪೊಟ್ಟಣದಲ್ಲಿ ಆಹಾರ ಪದಾರ್ಥ ಅಧಿಕ ಪ್ರಮಾಣದ್ದಾಗಿದ್ದಾಗ ಅದಕ್ಕೆ ಹಾಕಿರುವ ಪೌಷ್ಟಿಕಾಂಶಗಳೂ ಬದಲಾಗುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು