ಅ.1 ರಿಂದ 31ರ ವರೆಗೆ ಕ್ಲೀನ್ ಇಂಡಿಯಾ ಅಭಿಯಾನ ಘೋಷಿಸಿದ ಅನುರಾಗ್ ಠಾಕೂರ್

By Suvarna NewsFirst Published Sep 26, 2021, 9:58 PM IST
Highlights
  • ಪ್ರಧಾನಿ ಮೋದಿ ಸ್ವಚ್ಚ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ
  • 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಕ್ಲೀನ್ ಇಂಡಿಯಾ ಅಭಿಯಾನ
  • ಅಕ್ಟೋಬರ್ ತಿಂಗಳಲ್ಲಿ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಭಾರತ

ನವದೆಹಲಿ(ಸೆ.26):  ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನದಿಂದ ಭಾರತ ನಿಧಾನವಾಗಿ ಸ್ವಚ್ಚಗೊಳ್ಳುತ್ತಿದೆ. ಈ ಸ್ವಚ್ಚ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಇದೀಗ ಅಕ್ಟೋಬರ್ ಒಂದು ತಿಂಗಳು ಕ್ಲೀನ್ ಇಂಡಿಯಾ ಅಭಿಯಾನ ಆರಂಭಗೊಳ್ಳುತ್ತಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಮಹತ್ವದ ಅಭಿಯಾನ ಘೋಷಿಸಿದ್ದಾರೆ. 

 

Cleanliness is next to Godliness! "As we celebrate of 75 years of Indepependence, I urge everybody to join Clean India Drive from 1st-31st October to realize dream of plastic free India", Shri https://t.co/hgilS0oCiB

— PIBYAS (@pibyas)

ಮೋದಿ ಶೈಲಿ ಅನುಸರಿಸಿದ ತಾಲಿಬಾನ್: ಸ್ವಚ್ಛ ಅಪ್ಘಾನಿಸ್ತಾನ ಮಿಷನ್‌ ಆರಂಭ!

ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ದೇಶದಲ್ಲಿ 2021ರ ಅಕ್ಟೋಬರ್ 1 ರಿಂದ 31ರ ವರೆಗೆ ಕ್ಲೀನ್ ಇಂಡಿಯಾ ಅಭಿಯಾನವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ.  75ನೇ ಸ್ವಾತಂತ್ರ್ಯದ ವರ್ಷವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಕಸಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.  

ಬೈಕ್ ಜಾಥಾ ಮೂಲಕ ಲೆಕ್ಕ ಪರಿಶೋಧಕರಿಂದ ಸ್ವಚ್ಛ ಭಾರತ ಅಭಿಯಾನ!

ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣ ಹಾಗೂ ಪ್ರಧಾನಿ ನರೇಂದ್ರ ಮೋದಿ  ಆದ್ಯತೆಯಾದ ಸ್ವಚ್ಛ ಭಾರತದ ದೃಷ್ಟಿಕೋನದ ಸಾಕಾರಕ್ಕಾಗಿ  ನಮ್ಮ ಸಂಕಲ್ಪ ಎಂದು ಠಾಕೂರ್ ಹೇಳಿದ್ದಾರೆ.  

 

A message given by honorable Minister Anurag Singh Thakur on campaign that 75 lakh kg plastic to be collected and disposed. Starting from 1st Oct to 31st Oct. Register Now:👇🏻https://t.co/rO9FixsHVy pic.twitter.com/5ngWAmUXSE

— NYKS India (@Nyksindia)

ದು ವಿಶ್ವದ ಅತಿ ದೊಡ್ಡ ಸ್ವಚ್ಛತಾ ಅಭಿಯಾನವಾಗಿದೆ ಎಂದು ತಿಳಿಸಿರುವ ಶ್ರೀ ಅನುರಾಗ್ ಠಾಕೂರ್, ಇದರಲ್ಲಿ ದೇಶದ ವಿವಿಧ ಭಾಗಳಿಂದ  75 ಲಕ್ಷ ಟನ್ ತ್ಯಾಜ್ಯ ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮಾಡಿ, ತ್ಯಾಜ್ಯದಿಂದ ಸಂಪತ್ತು ಮಾದರಿಯಲ್ಲಿ ಸಂಸ್ಕರಿಸಲಾಗುವುದು ಎಂದೂ ತಿಳಿಸಿದ್ದಾರೆ. ಈ ಅಭಿಯಾನವು  “ಸ್ವಚ್ಛ ಭಾರತ: ಸುರಕ್ಷಿತ ಭಾರತ” ಮಂತ್ರದ ಪ್ರಚಾರ ಮಾಡಲಿದೆ ಎಂದರು.

ಕಸಮುಕ್ತ ನಗರ: ಮತ್ತೆ ಟಾಪಾಗಿಬಂದ ಮೈಸೂರು! ಕರ್ನಾಟಕದ ಹಿರಿಮೆ

ಇದೇ ವೇಳೆ ಸಂಕಲ್ಪದಿಂದ ಸಿದ್ಧಿ ಗುರಿಯೊಂದಿಗೆ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗುರಿಸಾಧಿಸಲು ನೆರವಾಗಬೇಕು ಎಂದು ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.
 

click me!