'ಫುಟ್ಪಾತ್‌ ಒತ್ತುವರಿ ಸರ್ಕಾರಕ್ಕೆ ಕಾಣಲ್ಲವೇ?' ಪೇಜಾವರ ಶ್ರೀ ಪ್ರಶ್ನೆ

Published : Sep 26, 2021, 09:37 PM IST
'ಫುಟ್ಪಾತ್‌ ಒತ್ತುವರಿ ಸರ್ಕಾರಕ್ಕೆ ಕಾಣಲ್ಲವೇ?' ಪೇಜಾವರ ಶ್ರೀ ಪ್ರಶ್ನೆ

ಸಾರಾಂಶ

*ಕರ್ನಾಟಕದಲ್ಲಿ ದೇವಾಲಯ ಧ್ವಂಸ ಪ್ರಕರಣ * ಹಿಂದುಗಳ ಮೇಲೆ ದಬ್ಬಾಳಿಕೆ‌ ನಡೆಯುತ್ತಿದೆ ಎಂದ ಸ್ವಾಮೀಜಿ * ರಸ್ತೆ ಕಾರಣಕ್ಕೆ ದೇವಾಲಯ ತೆರವು ಮಾಡುವುದು ಸರಿ ಅಲ್ಲ

ಉಡುಪಿ(ಸೆ. 26) ಮುಖ್ಯ ಕಾರ್ಯದರ್ಶಿ ಆದೇಶದ ಅನ್ವಯ ಕರ್ನಾಟಕದಲ್ಲಿ ದೇವಾಲಯ ಧ್ವಂಸ  ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನಂತರ ಸರ್ಕಾರ ಇದಕ್ಕೆ ಬ್ರೇಕ್ ಹಾಕಿತ್ತು.

ಹುಚ್ಚಗಣಿ ಮಹದೇವಮ್ಮ ದೇವಾಲಯ ಮರು ನಿರ್ಮಾಣಕ್ಕೆ  ಪೇಜಾವರ ಮಠದ ಕಡೆಯಿಂದ ಒಂದು ಲಕ್ಷ ರೂ ದೇಣಿಗೆ  ನೀಡಲಾಗಿದೆ. ದೇವಾಲಯ ಮರು ನಿರ್ಮಾಣವಾಗಲಿ ಎಂದು ಶ್ರೀಗಳು ಆಶಿಸಿದ್ದಾರೆ ಸ್ವತಂತ್ರ ದೇಶದಲ್ಲಿ ಪಕ್ಷಪಾತ ಏಕೆ ನಡೆಯುತ್ತಿದೆ? ಹಿಂದುಗಳ ಮೇಲೆ ದಬ್ಬಾಳಿಕೆ‌ನಡೆಯುತ್ತಿದೆ ಪುಟ್ಪಾತ್  ಆಕ್ರಮಿಸಿಕೊಂಡು ಪ್ರಾರ್ಥನ ಮಂದಿರ  ಮತ್ತೊಂದು  ನಿರ್ಮಾಣ ಮಾಡಿಕೊಳ್ಳಲಾಗಿದೆ. ದ್ರೆ ಅದನ್ನು ಮುಟ್ಟಲು ಸರ್ಕಾರ ಹಿಂದೆ ಮುಂದೆ‌ ನೋಡುತ್ತದೆ ಎಂದಿದ್ದಾರೆ.

ದೇವಾಲಯ ಧ್ವಂಸಕ್ಕೂ ಮುನ್ನ ಆಗಿದ್ದು ಏನು?

ಆದರೆ ಹಿಂದೂಗಳ ಮೇಲೆ ದಬ್ಬಾಳಿಕೆಯಾಗುತ್ತಿದೆ. ಈ ಮೋಸ ವಂಚನೆ ಕಣ್ಣಿಗೆ ಕಾಣುತ್ತಿದೆ. ಇದಕ್ಕೆ ಸರಿಯಾಗಿ ಕಾನೂನು ರೂಪಿಸಬೇಕು. ದೇವಾಲಯದ ಜಾಗ ದೇವರಿಗೆ ಸಲ್ಲುವಂತದ್ದು ಎಂದು ಮಹದೇವಮ್ಮ ದೇವಲಾಯದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ‌ ನೀಡಿದ್ದಾರೆ.

ಕಿಡಿಗೇಡಿತನದಿಂದ  ದೇವಾಲಯವನ್ನು ಕೆಡವುವ ಕೆಲಸವಾಗಿದೆ. ಹಿಂದುಗಳು ಶಾಂತಿ ಪ್ರಿಯರು. ಅನ್ಯಧರ್ಮದ ಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿದ್ರೆ ವಿಶ್ವವೆ ಹೊತ್ತಿ ಉರಿಯುತಿತ್ತು. ನಾವು ಹಿಂದುಗಳು ಅಂತಹ ಕಾರ್ಯಕ್ಕೆ ಮುಂದಾಗುವುದಿಲ್ಲ. ಹಾಗಂತ ಇದನ್ನು ನಮ್ಮ ದೌರ್ಬಲ್ಯ ಎಂದು ಯಾರು ಪರಿಗಣಿಸಬಾರದು. ಸಮಾಜ ಮಲಗಿದ್ದರೆ ಏನಾಗುತ್ತೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ನಾವು ಜಾಗೃತರಾಗಬೇಕು. ನಾವು ನಮ್ಮದೆ ಭೂಮಿ ಎಂದು ಸುಮ್ಮನಿದ್ದೇವೆ.
ದೇವಾಲಯದ ಸ್ಥಳಗಳು ಗುರುತಿಸಿ ಖಾತೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸಹಸ್ರಾರು ವರ್ಷಗಳ ಕಾಲದ ದೇವಾಲಯದ ಮುಂದೆ ಇರುವ ರಸ್ತೆಗಳನ್ನು ದೂರಮಾಡಬೇಕು. ರಸ್ತೆಗಾಗಿ ದೇವಾಲಯಗಳನ್ನ ದೂರಮಾಡುವುದಲ್ಲ. ದೇವಸ್ಥಾನದ ಪಕ್ಕ ರಸ್ತೆ ಇದೆ ಅಂತ ಹೇಳಿ ನಂಜುಂಡೇಶ್ವರ ದೇವಾಲಯವನ್ನು ತೆಗೆಯುತ್ತಾರೆ. ನಾಳೆ ಒಬ್ಬ ಅವಿವೇಕಿ ಅಧಿಕಾರಿ ಬಂದ್ರೆ ಈ ರೀತಿ ಮಾಡುತ್ತಾನೆ. ನಂಜುಂಡೇಶ್ವರ ದೇವಾಲಯಕ್ಕೂ ಕೈ ಹಾಕುತ್ತಾನೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಾರವಾಗಿಯೇ ನುಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ