ಶ್ರೀರಾಮಜನ್ಮಭೂಮಿ ಟ್ರಸ್ಟ್ ಆಹ್ವಾನದ ಮೇರೆಗೆ ಕರ್ನಾಟಕದ ಮತ್ತೊಬ್ಬ ಶಿಲ್ಪಿ ಇಡಗುಂಜಿ ಗಣೇಶ ಭಟ್ ಕೆತ್ತಿದ್ದ ರಾಮನ ಮೂರ್ತಿಯ ಫೋಟೋ ಬಿಡುಗಡೆ ಆಗಿದೆ. ಇದರೊಂದಿಗೆ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದ ಮೂರೂ ಶಿಲ್ಪಿಗಳ ವಿಗ್ರಹಗಳು ಅನಾವರಣಗೊಂಡಂತೆ ಆಗಿದೆ.
ಅಯೋಧ್ಯೆ: ಶ್ರೀರಾಮಜನ್ಮಭೂಮಿ ಟ್ರಸ್ಟ್ ಆಹ್ವಾನದ ಮೇರೆಗೆ ಕರ್ನಾಟಕದ ಮತ್ತೊಬ್ಬ ಶಿಲ್ಪಿ ಇಡಗುಂಜಿ ಗಣೇಶ ಭಟ್ ಕೆತ್ತಿದ್ದ ರಾಮನ ಮೂರ್ತಿಯ ಫೋಟೋ ಬಿಡುಗಡೆ ಆಗಿದೆ. ಇದರೊಂದಿಗೆ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದ ಮೂರೂ ಶಿಲ್ಪಿಗಳ ವಿಗ್ರಹಗಳು ಅನಾವರಣಗೊಂಡಂತೆ ಆಗಿದೆ.
ಗಣೇಶ್ ಭಟ್ ಹೆಗ್ಗಡದೇವನಕೋಟೆ ಬಳಿಯ ಹೊಲವೊಂದರಲ್ಲಿ ಲಭ್ಯವಾಗಿದ್ದ ಕೃಷ್ಣ ಶಿಲೆಯನ್ನು ಬಳಸಿ ಗಣೇಶ್ ಭಟ್ ಅವರ ಸುಂದರ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದಾರೆ. ಈ ಮೂರ್ತಿ ಕೂಡಾ, ಈಗಾಗಲೇ ಗರ್ಭ ಗೃಹದಲ್ಲಿ ಇರಿಸಿರುವ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿಯಂತೆ ಇದೆ. ದಶಾವತಾರ, ಕಮಲ, ಕಿರೀಟ, ಮುಖದಲ್ಲಿ ಮಗುವಿನ ಮುಗ್ಧ ಕಳೆ ಹೊಂದಿದೆ. ಮಂಗಳವಾರವಷ್ಟೇ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ನಿರ್ಮಿಸಿದ್ದ ಬಾಲರಾಮನ ಚಿತ್ರ ಬಿಡುಗಡೆ ಆಗಿತ್ತು.
undefined
ಇನ್ನೋರ್ವ ಶಿಲ್ಪಿ ರಾಜಸ್ಥಾನದ ಜೈಪುರ ಮೂಲದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಅಮೃತ ಶಿಲೆಯಿಂದ ರಾಮನ ಮೂರ್ತಿಯನ್ನು ಕೆತ್ತಿದ್ದರು. ಹನುಮಂತನ ಭಕ್ತರಾಗಿರುವ 65 ವರ್ಷದ ಸತ್ಯನಾರಾಯಣ ಪಾಂಡೆ ಅವರ ಇಡೀ ಕುಟುಂಬ ಶಿಲ್ಪಿಗಳೇ ಆಗಿದ್ದಾರೆ. ಬಹುಶಃ ನಮ್ಮ ಕುಟುಂಬಕ್ಕೆ ಶಿಲ್ಪಕಲೆಗಳ ಸಂಬಂಧ ಯೋಚನೆ ಮಾಡುವುದಾದರೆ, 12 ಯುಗದ ಹಿಂದೆ ಹೋಗಬೇಕು. ನಾನು ಈ ಕಲೆಯನ್ನು ಕಲಿತಿದ್ದು ನನ್ನ ತಂದೆಯಿಂದ ಎಂದು ರಾಜಸ್ಥಾನದ ಜೈಪುರ ಮೂಲದ ಶಿಲ್ಪಿ ಸತ್ಯನಾರಾಯಣ ಪಾಂಡೆ ಹೇಳಿದ್ದಾರೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ, ರಾಮ ಪರಿವಾರದ 13 ದೇವಸ್ಥಾನಕ್ಕೆ ಅಯೋಧ್ಯೆ ಸಿದ್ಧತೆ!
ಮೂರ್ತಿ ಕೆತ್ತುವ ಸಮಯದಲ್ಲಿ ಏನಾದರೂ ಸಮಸ್ಯೆಗಳು ಎದುರಾದಲ್ಲಿ ನಾನು ಹನಮುಂತನನ್ನೆ ನೆನಪಿಸಿಕೊಂಡು ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದೆ. ಇಡೀ ಮೂರ್ತಿ ಕೆತ್ತು ಪ್ರಕ್ರಿಯೆಯಲ್ಲಿ ಹನುಮಂತ ಕೂಡ ನನ್ನೊಂದಿಗೆ ಇದ್ದ ಎಂದು ಹೇಳಿದ್ದಾರೆ. ಪಾಂಡೆ ಅವರಿಗೆ ಈ ಕೆಲಸದಲ್ಲಿ ಅವರ 42 ವರ್ಷದ ಪುತ್ರ ಪ್ರಶಾಂತ್ ಕೂಡ ಸಹಾಯ ಮಾಡಿದ್ದಾರೆ. ತಮ್ಮ ಮೂರ್ತಿ ಆಯ್ಕೆಯಾಗದೇ ಇದ್ದಿದ್ದಕ್ಕೆ ಬೇಸರವಿದೆಯೇ ಎನ್ನುವ ಪ್ರಶ್ನೆಗೆ, ನಿಜವಾದ ಭಕ್ತನಿಗೆ ಯಾವುದೇ ನಿರಾಸೆಯಾಗೋದಿಲ್ಲ. 500 ವರ್ಷದ ಹೋರಾಟ ಅಂತ್ಯವಾಗಿದೆ ಅನ್ನೋದಷ್ಟೇ ಖುಷಿ. ಅಂದು ಅವರು ಮಾಡಿದ ತ್ಯಾಗದಿಂದ ಇದು ಸಾಧ್ಯವಾಗಿದೆ. ಈ ಮೂರ್ತಿ ಕೂಡ ಅಯೋಧ್ಯೆಯಲ್ಲಿ ಸ್ಥಾನ ಪಡೆಯಲಿದೆ ಎಂದು ಹೇಳಿದ್ದಾರೆ.
ರಾಮನೂರಿನಲ್ಲಿ ಲಕ್ಷಾಂತರ ಭಕ್ತರು, ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿದೆ?