ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬಿಜೆಪಿ ಕೌನ್ಸಿಲರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಗ್ರರು ಗುಂಡಿಕ್ಕಿ ಕೌನ್ಸಿಲರ್‌ನ್ನು ಸಾಯಿಸಿದ್ದು ಮಹಿಳೆ ಗಾಯಗೊಂಡಿದ್ದಾರೆ.
ಟ್ರಾಲ್ ಮುನ್ಸಿಪಲ್ ಕಮಿಟಿಯ ಅಧ್ಯಕ್ಷರಾಗಿದ್ದ ರಾಕೇಶ್ ಪಂಡಿತಾ ಅವರು ಉಗ್ರರ ಬೆದರಿಕೆಯಿಂದಾಗಿ ಶ್ರೀನಗರದಲ್ಲಿ ಭದ್ರತೆಯಡಿಯಲ್ಲಿರುವ ಸರ್ಕಾರಿ ವಸತಿಗೃಹದಲ್ಲಿದ್ದರು. ಅವರ ರಕ್ಷಣೆಗೆ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್‌ಒ) ನಿಯೋಜಿಸಲಾಗಿತ್ತು. ಉಗ್ರಗಾಮಿ ಭದ್ರಕೋಟೆಯಾದ ಟ್ರಾಲ್‌ಗೆ ಭೇಟಿ ನೀಡಿದಾಗ ಪಂಡಿತಾ ತನ್ನ ಭದ್ರತಾ ಅಧಿಕಾರಿಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ತಮಿಳ್ನಾಡಲ್ಲಿ ಶಂಕಿತ ಐಸಿಸ್ ಉಗ್ರ ಮಹಮ್ಮದ್ ಬಂಧನ!
ಮೂವರು ಅಪರಿಚಿತ ಭಯೋತ್ಪಾದಕರು ಪಂಡಿತಾಗೆ ಗುಂಡು ಹಾರಿಸಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮಹಿಳೆ ಕೌನ್ಸಿಲರ್ ಭೇಟಿ ಮಾಡಲು ಹೋಗಿದ್ದ ಸ್ನೇಹಿತನ ಮಗಳಾಗಿದ್ದಳು. "ಕೌನ್ಸಿಲರ್ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಈ ವರ್ಷ ಕಾಶ್ಮೀರದಲ್ಲಿ ನಡೆದ ಕೌನ್ಸಿಲರ್ ಮೂರನೇ ಹತ್ಯೆಯಾಗಿದೆ. ಮಾರ್ಚ್ 30 ರಂದು ಉಗ್ರರು ಸೊಪೋರ್ ಮುನ್ಸಿಪಲ್ ಕೌನ್ಸಿಲ್ ಕಚೇರಿಗೆ ನುಗ್ಗಿ ಬಿಜೆಪಿಗೆ ಸೇರಿದ ಇಬ್ಬರು ಕೌನ್ಸಿಲರ್ ಮತ್ತು ಒಬ್ಬ ಪೊಲೀಸರನ್ನು ಕೊಂದಿದ್ದರು.
CBSE 12thನೇ ತರಗತಿ ಪರೀಕ್ಷೆ ರದ್ದು: ಪೋಷಕರು, ಶಿಕ್ಷಕರಿಗೆ ಮೋದಿ ರಿಪ್ಲೈ!
ಪೊಲೀಸರು, ಸೇನೆ ಮತ್ತು ಅರೆಸೈನಿಕ ಪಡೆಗಳು ಈ ಪ್ರದೇಶವನ್ನು ಸುತ್ತುವರೆದು ದಾಳಿಕೋರರಿಗಾಗಿ ಶೋಧ ನಡೆಸುತ್ತಿವೆ. ಮೃತ ಕೌನ್ಸಿಲರ್, ಕಾಶ್ಮೀರಿ ಪಂಡಿತ್, ಟ್ರಾಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂದು ಬಿಜೆಪಿ ಹೇಳಿದೆ.