ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್

By Anusha Kb  |  First Published Dec 30, 2022, 10:17 PM IST

ತೀವ್ರವಾದ ಹಿಮಪಾತದಿಂದಾಗಿ ಜಿಂಕೆಯೊಂದರ ಕಣ್ಣು ಮತ್ತು ಕಿವಿಗಳು ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅದೃಷ್ಟವಶಾತ್, ಇಬ್ಬರು ಹೈಕರ್‌ಗಳು(ಚಾರಣಿಗರು) ಅದರ ರಕ್ಷಣೆ ಮಾಡಿದ್ದಾರೆ.


ನ್ಯೂಯಾರ್ಕ್‌: ಅಮೆರಿಕಾದಲ್ಲಿ ಕಾಣಿಸಿಕೊಂಡ ಈ ಶತಮಾನದ ಅತ್ಯಂತ ತೀವ್ರವಾದ ಹಿಮ ಚಂಡಮಾರುತದಿಂದ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.  ಉತ್ತರ ಅಮೆರಿಕಾದಾದ್ಯಂತ ಈ ಹಿಮಪಾತದ ಈ ಚಂಡಮಾರುತ ಎಡೆಬಿಡದೇ ಬಾಧಿಸುತ್ತಿರುವುದರಿಂದ ಅಮೆರಿಕಾ ಹಾಗೂ ಕೆನಡಾದ ಮಿಲಿಯನ್‌ಗೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ. ಪ್ರಕೃತಿಯ ಈ ಕ್ರೋಧಕ್ಕೆ ಮನುಷ್ಯರಷ್ಟೇ ಅಲ್ಲದೇ, ಪ್ರಾಣಿಗಳೂ ಸಹ ನರಳುತ್ತಿವೆ. ಇತ್ತೀಚೆಗೆ ಪ್ರಾಣಿಯೊಂದು ಹಿಮಪಾತಕ್ಕೆ ಸಿಲುಕಿ ನರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೀವ್ರವಾದ ಹಿಮಪಾತದಿಂದಾಗಿ ಜಿಂಕೆಯೊಂದರ ಕಣ್ಣು ಮತ್ತು ಕಿವಿಗಳು ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅದೃಷ್ಟವಶಾತ್, ಇಬ್ಬರು ಹೈಕರ್‌ಗಳು(ಚಾರಣಿಗರು) ಅದರ ರಕ್ಷಣೆ ಮಾಡಿದ್ದಾರೆ. ಆದರೆ ಈ ವಿಡಿಯೋ ಯಾವ ಪ್ರದೇಶದ್ದು ಎಂಬ ಉಲ್ಲೇಖವಿಲ್ಲ. 

ರೆಡಿಟ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, Humans being bros ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ತೀವ್ರವಾದ ಶೀತ ಹವೆಗೆ ಜಿಂಕೆಯೊಂದು (deer) ತತ್ತರಿಸಿದೆ. ಅದರ ಮುಖವು ಸಂಪೂರ್ಣವಾಗಿ ಹೆಪ್ಪುಗಟ್ಟಿದ್ದು, ಜಿಂಕೆ ತನ್ನ ತಲೆಗೆ ಹಾಗೂ ಮುಖವನ್ನು ಸ್ತಬ್ಧಗೊಳಿಸಿದ ಹಿಮವನ್ನು ತೆಗೆಯಲು ಪ್ರಯತ್ನಿಸುತ್ತಿದೆ ಆದರೆ ಸಾಧ್ಯವಾಗುತ್ತಿಲ್ಲ. ಇತ್ತ ಇದನ್ನು ನೋಡಿದ ಚಾರಣಿಗರು (Hikers)ಜಿಂಕೆಯ ಹತ್ತಿರ ಅದರ ರಕ್ಷಣೆಗಾಗಿ ಬಂದಾಗ ಹೆದರಿದ ಅದು ಓಡಿ ಹೋಗಿದೆ. ಇದಾಗಿ ಸ್ವಲ್ಪ ಸಮಯದ ನಂತರ ಇದು ಈ ಹಿಮದಲ್ಲಿ ಚಾರಣ ಹೊರಟವರ ಕೈಗೆ ಸಿಕ್ಕಿದ್ದು, ಇಬ್ಬರು ಸೇರಿ ಈ ಪ್ರಾಣಿಯ ರಕ್ಷಣೆ (rescue) ಮಾಡಿದ್ದಾರೆ. ಅದರ ಬಾಯಿ ಮುಖ ಕಿವಿಗೆ ಅಂಟಿದ್ದ ಹಿಮವನ್ನು ಕಿತ್ತು ತೆಗೆದಿದ್ದಾರೆ. ಇದಾದ ಬಳಿಕ ಜಿಂಕೆ ಓಡಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Tap to resize

Latest Videos

ಹಿಮ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಮೂವರು NRIಗಳು ಸಾವು

ವಿಡಿಯೋ ನೋಡಿದ ರೆಡ್ಡಿಟ್ ಬಳಕೆದಾರರು ಜಿಂಕೆಗಳ ಜೀವ ಉಳಿಸಿದ್ದಕ್ಕೆ ಯಾತ್ರಾರ್ಥಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇತರ ಪ್ರಾಣಿಗಳಿಗೆ ಸಹಾಯ ಮಾಡಲು ಸಾಧ್ಯವಾಗುವ ಏಕೈಕ ಜಾತಿ ಮನುಷ್ಯ ಜಾತಿಯಾಗಿದ್ದು, ಆ ಪ್ರಾಣಿಯ ಜೀವ ಉಳಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬರು ಇದು ಮಾನವೀಯತೆಯ ಸುಂದರ ಭಾಗ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜಿಂಕೆಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು ಚಳಿಗಾಲವೂ ಪ್ರಾಣಿಗಳಿಗೆ ಬಹಳ ಕಷ್ಟಕರವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೆ ಕೆಲವರು ಇದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮತ್ತೆ ಕೆಲವರು ವಿವರಣೆ ನೀಡಿದ್ದು, ಸಾಮಾನ್ಯವಾಗಿ ಸಹಜ ಹವಾಮಾನದೊಂದಿಗೆ ಸಾಕಷ್ಟು ಬಾರಿ ಆದ್ರವಾದ ಹಿಮವಿದ್ದು, ಆಹಾರಕ್ಕಾಗಿ ಈ ಹಿಮವನ್ನು ಬಾಯಲ್ಲಿ ಅಗೆಯುವ ವೇಳೆ ಅದು ಅದರ ದೇಹಕ್ಕೆ ಮಂಜು ಆವರಿಸಿಕೊಂಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಹಿಮಪಾತದಲ್ಲಿ ಸಿಲುಕಿಕೊಂಡಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. 

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್   

ಅಮೆರಿಕಾ ಹಿಂದೆಂದೂ ಕಂಡು ಕೇಳರಿಯದ ಬಾಂಬ್ ಹಿಮಪಾತದಿಂದ ಈ ಬಾರಿ ನಲುಗಿದ್ದು, ಡಿಸೆಂಬರ್ 25 ರ ಕ್ರಿಸ್‌ಮಸ್ ದಿನದಂದು ದೇಶವನ್ನಪ್ಪಳಿಸಿದ ಹಿಮಪಾತಕ್ಕೆ ಸಿಲುಕಿ ಅಮೆರಿಕಾದಲ್ಲಿ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗಾರ ಜಾಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಯಾಗಾರ ಪಾಲ್ಸ್‌ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಿಮಪಾತದಿಂದಾಗಿ ಜಲಾಶಯವೂ ಈಗ ಚಳಿಗಾಲದ ವಂಡರ್‌ಲ್ಯಾಂಡ್‌ನಂತೆ ಕಾಣಿಸುತ್ತಿದೆ. ಮೈನಸ್‌ ಶೂನ್ಯ ತಾಪಮಾನದಿಂದಾಗಿ ನಯಾಗರಾ ಜಲಪಾತವು ಭಾಗಶಃ ಹೆಪ್ಪುಗಟ್ಟಿದ್ದು, ಚಳಿಗಾಲದ ಅದ್ಭುತ ಲೋಕದಂತೆ ಕಾಣಿಸುತ್ತಿದೆ. 
 

click me!