
ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ತಲೆಬುರುಡೆಯೇ ಜಖಂ:
ಚಿತ್ತೂರ್: ಶಾಲೆಯಲ್ಲಿ ಮಕ್ಕಳಿಗೆ ಥಳಿಸಬಾರದು ಸೂಕ್ಷ್ಮವಾಗಿ ಸಮಾಧಾನವಾಗಿ ಹೇಳಿಕೊಡಬೇಕು ಎಂದು ಸರ್ಕಾರದ ಕಾನೂನುಗಳಿವೆ. ಇದಕ್ಕಾಗಿಯೇ ಸರಕಾರಿ ಶಾಲೆಯಲ್ಲಿ ನಲಿಕಲಿ ಎಂಬಾತಹ ಯೋಜನೆಗಳಿವೆ. ಆದರೆ ಖಾಸಗಿ ಶಾಲೆಗಳಿಗೆ ಇದು ಅನ್ವಯವಾಗುವುದಿಲ್ಲ, ಮಕ್ಕಳು ತಪ್ಪು ಮಾಡಿದರೆ ಬೆನ್ನು ಹುಡಿಯಾಗುವಂತೆ ಬಾರಿಸಿ ಬಿಡುತ್ತಾರೆ. ಮಕ್ಕಳನ್ನು ತಿದ್ದುವ ವೇಳೆ ಕೆಲವೊಮ್ಮೆ ಶಿಕ್ಷೆ ಅನಿವಾರ್ಯವಾಗುತ್ತದೆ. ಆದರೆ ಜೀವಕ್ಕೆ ಅಪಾಯವಾಗುವಂತೆ ಥಳಿಸಿದರೆ ಹೇಗೆ? ಇಲ್ಲೊಂದು ಕಡೆ ಶಿಕ್ಷಕರು ಥಳಿಸಿದ ಏಟಿನ ರಭಸಕ್ಕೆ ಮಗುವಿನ ತಲೆ ಬುರುಡೆಯೇ ಜಖಂ ಆಗಿದೆ. ಆಂಧ್ರ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಈ ಅವಘಡ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಆಂಧ್ರ ಪ್ರದೇಶದ ಶಾಲೆಯಲ್ಲಿ ಭಯಾನಕ ಘಟನೆ
ಚಿತ್ತೂರ್ ಜಿಲ್ಲೆಯ ಪುಂಗನೂರ್‌ನಲ್ಲಿ ಈ ಘಟನೆ ನಡೆದಿದೆ. 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳಿಗೆ ಶಿಕ್ಷಕಿ ಸ್ಟೀಲ್ ಟಿಫನ್ ಬಾಕ್ಸ್ ಇದ್ದ ಚೀಲದಲ್ಲಿ ತಲೆಗೆ ಥಳಿಸಿದ್ದು, ಇದರಿಂದ ಬಾಲಕಿಯ ತಲೆಬುರುಡೆಗೆ ಹಾನಿಯಾಗಿದೆ. ತಲೆಬುರುಡೆಯೂ, ಕೈಯಿಂದ ಕೈಯಿಂದ ಕೆಳಗೆ ಬಿದ್ದ ಚೆಂಬಿನಂತೆ ಒಂದುಬದಿಯಲ್ಲಿ ಜಗ್ಗಿರುವುದು ಸಿಟಿಸ್ಕ್ಯಾನ್ ಮಾಡಿದಾಗ ಕಂಡು ಬಂದಿದೆ. ಹೀಗೆ ಶಿಕ್ಷಕಿಯ ಥಳಿತದಿಂದ ಅಸ್ವಸ್ಥಳಾದ ಬಾಲಕಿಯನ್ನು ಸಾತ್ವಿಕಾ ನಾಗಶ್ರೀ ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುವ ಸಲೀಮಾ ಭಾಷಾ ಸ್ಟೀಲ್ ಬುತ್ತಿ ಇದ್ದ ಬ್ಯಾಗ್‌ನಿಂದ ಬಾಲಕಿಯ ತಲೆಗೆ ಹೊಡೆದಿದ್ದಾರೆ.
ಸಿಟಿಸ್ಕ್ಯಾನ್ ಮಾಡಿದಾಗ ಆಘಾತಕಾರಿ ವಿಚಾರ ಬಯಲಿಗೆ..
ಪೊಲೀಸರ ಪ್ರಕಾರ, ತರಗತಿಯಲ್ಲಿ ಬಾಲಕಿ ಕೀಟಲೆ ಮಾಡಿದ್ದು, ಇದರಿಂದ ಕೋಪ ತಾಳಲಾಗದೇ ಆಕೆಗೆ ಹೊಡೆದಿದ್ದಾಗಿ ಶಿಕ್ಷಕಿ ಸಲೀಮಾ ಭಾಷಾ ಪೊಲೀಸರ ಮುಂದೆ ಹೇಳಿದ್ದಾಳೆ. ಈ ಬಾಲಕಿ ಸಾತ್ವಿಕಾಳ ತಾಯಿಯೂ ಇದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಅವರಿಗೆ, ಶಿಕ್ಷಕಿ ಥಳಿಸಿದ್ದರಿಂದ ತಮ್ಮ ಮಗಳಿಗೆ ಆದ ಹಾನಿಯ ಗಂಭೀರತೆಯ ಬಗ್ಗೆ ಆರಂಭದಲ್ಲಿ ಅರಿವಿರಲಿಲ್ಲ, ಏನೋ ತುಂಟಾಟವಾಡಿದ್ದಾಳೆ ಏಟು ಕೊಟ್ಟಿದ್ದಾರೆ ಎಂದು ಅವರು ಭಾವಿಸಿದ್ದಾರೆ. ದರೆ ನಂತರದಲ್ಲಿ ಬಾಲಕಿ ತೀವ್ರವಾದ ತಲೆನೋವು ಹಾಗೂ ತಲೆತಿರುಗುವುದರ ಬಗ್ಗೆ ಹೇಳಿಕೊಂಡಿದ್ದಾಳೆ. ಇದಾದ ನಂತರ ಬಾಲಕಿಯನ್ನು ಕರೆದುಕೊಡು ಆಕೆಯ ತಾಯಿ ಹಲವು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಸಿಟಿಸ್ಕ್ಯಾನ್ ಮಾಡಿದಾಗ ಬಾಲಕಿಯ ತಲೆಬುರುಡೆಗೆ ಹಾನಿಯಾಗಿರುವುದು ಪತ್ತೆಯಾಗಿದೆ. ನಂತರ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಪೊಷಕರು ಶಾಲೆಯ ಶಿಕ್ಷಕಿ ಹಾಗೂ ಪ್ರಾಂಶುಪಾಲರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪುಂಗನೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.
ಸಮಾಧಾನವಾಗಿ ತಿಳಿ ಹೇಳುವ ಪ್ರಯತ್ನ ಮಾಡಿ...
ಅದೇನೇ ಇರಲಿ ಪುಟ್ಟ ಮಕ್ಕಳ ಮೇಲೆ ಹೀಗೆ ಕ್ರೂರವಾಗಿ ಹಲ್ಲೆ ಮಾಡುವುದು ಸರಿಯಲ್ಲ. ಮೊದಲೆಲ್ಲಾ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬುದ್ಧಿ ಕಲಿಸಲು ಸರಿಯಾಗಿ ಬಾರಿಸುತ್ತಿದ್ದರು. ತಪ್ಪು ಮಾಡಿದಾಗಲೆಲ್ಲಾ, ಬೆನ್ನಲ್ಲಿ ಬಾಸುಂಡೆ ಬರುತ್ತಿದ್ದವು. ಆದರೆ ಬೆತ್ತವೇ ಹುಡಿಯಾಗುತ್ತಿತ್ತೇ ಹೊರತು ಮಕ್ಕಳಿಗೇನು ಆಗುತ್ತಿರಲಿಲ್ಲ. ಅಲ್ಲದೇ ಮಕ್ಕಳು ಹೋಗಿ ಮನೆಯಲ್ಲಿ ದೂರು ಹೇಳುತ್ತಿರಲಿಲ್ಲ, ಒಂದು ವೇಳೆ ಪೋಷಕರಿಗೆ ಹೇಳಿದರೂ ಪೋಷಕರು ಇನ್ನೆರಡು ಬಾರಿಸುವಂತೆ ಶಿಕ್ಷಕರಿಗೆ ಅವರಾಗಿಯೇ ಹೇಳುತ್ತಿದ್ದರು. ಇದರಿಂದ ಮಕ್ಕಳು ಏಟು ತಿಂದು ಸ್ಟ್ರಾಂಗ್ ಆಗುತ್ತಿದ್ದರು. ಆದರೆ ಇತ್ತೀಚಿನ ತಲೆಮಾರಿನ ಮಕ್ಕಳು ಬಹಳ ಸೂಕ್ಷ್ಮ. ಬಹಳ ಬೇಗನೆ ಮಕ್ಕಳಿಗೆ ಮೂಳೆ ಮುರಿದು ಬಿಡುತ್ತದೆ. ಕೈ ಕಾಲುಗಳಿಗೆ ಹಾನಿಯಾಗುತ್ತದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೇರೆ ರೀತಿಯಲ್ಲಿ ಉಪಾಯವಾಗಿ ತಿಳಿ ಹೇಳಿ ತಿದ್ದಿ ಬುದ್ಧಿ ಹೇಳುವ ಪ್ರಯತ್ನ ಮಾಡಬೇಕೆ ಹೊರತು ಥಳಿಸಬಾರದು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಕೆಲ ದಿನಗಳ ಹಿಂದೆ ಕೋಲಾರದ ಮಾಲೂರಿನಲ್ಲಿ ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನಿಸಿದ ಶಿಕ್ಷಕಿಗೆ ಬಾಲಕನ ತಂದೆಯೇ ಮುಖ ಮೂತಿ ನೋಡದೇ ಹೊಡೆದ ಪರಿಣಾಮ ಆ ಶಿಕ್ಷಕಿ ಆಸ್ಪತ್ರೆ ಸೇರುವಂತಾದ ಆಘಾತಕಾರಿ ಘಟನೆ ನಡೆದಿತ್ತು.
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸರಿಂದಲೇ ಭಾರತೀಯ ಯುವಕನಿಗೆ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ನನ್ನ ಪತ್ನಿ ಮಹಿಳೆ ಹೆಣ್ಣು ಹೆಣ್ಣು ಹೆಣ್ಣು.. ಫ್ರಾನ್ಸ್ ಅಧ್ಯಕ್ಷ : ಮ್ಯಾಕ್ರಾನ್‌ಗೆ ಇಂಥಾ ಸ್ಥಿತಿ ಬಂದಿದ್ದೇಕೆ?
ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ
ಇದನ್ನೂ ಓದಿ: ವೃದ್ಧಾಪ್ಯದಲ್ಲಿ NRIಗಳ ಲವ್ ಅಫೇರ್: 75ರ ಅಜ್ಜನ ಮದ್ವೆಯಾಗಲು ಭಾರತಕ್ಕೆ ಬಂದು ಶವವಾದ 71ರ ಅಜ್ಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ