ತಿರುಪತಿ ತಿರುಮಲದ 743 ಸಿಬ್ಬಂದಿಗೆ ಕೊರೋನಾ; ಅರ್ಧಕ್ಕಿಂತ ಹೆಚ್ಚು ಗುಣಮುಖ

Published : Aug 09, 2020, 10:30 PM ISTUpdated : Aug 09, 2020, 10:35 PM IST
ತಿರುಪತಿ ತಿರುಮಲದ 743 ಸಿಬ್ಬಂದಿಗೆ ಕೊರೋನಾ; ಅರ್ಧಕ್ಕಿಂತ ಹೆಚ್ಚು ಗುಣಮುಖ

ಸಾರಾಂಶ

ತಿರುಪತಿ ದೇವಾಲಯದ ಸಿಬ್ಬಂದಿಗೆ 743 ಸಿಬ್ಬಂದಿಗೆ ಕೊರೋನಾ/  ಕೊರೋನಾ ಲಾಕ್ ಡೌನ್ ಕಾರಣಕ್ಕೆ ಬಂದ್ ಆಗಿದ್ದ  ದೇವಾಲಯ/  ಎಲ್ಲ ಸಿಬ್ಬಂದಿಗೂ ಉತ್ತಮ ಚಿಕಿತ್ಸೆ/ ದೇವಾಲಯದಲ್ಲಿಯೂ ಸಕಲ ಮುಂಜಾಗೃತಾ ಕ್ರಮ

ತಿರುಪತಿ(ಆ.  09)  ಕೊರೋನಾ ಕಾರಣಕ್ಕೆ ಎಲ್ಲ ದೇವಾಲಯಗಳಂತೆ ತಿರುಪತಿಯನ್ನು ಬಂದ್ ಮಾಡಲಾಗಿದ್ದು. ಅನ್ ಲಾಕ್ ನಲ್ಲಿ ಅವಕಾಶ ಸಿಕ್ಕ ನಂತರ ಓಪನ್ ಮಾಡಲಾಗಿದೆ. ಆದರೆ ಈಗ ದೇವಾಲಯ ತೆರೆದಿದ್ದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ.  ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಗ್  ಸ್ಪಷ್ಟನೆ ನೀಡಿದ್ದು ಜೂ.11 ರ ಬಳಿಕ ದೇವಾಲಯ ತೆರದ ನಂತರ 743 ಟಿಟಿಡಿ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ ಈ ಪೈಕಿ 402 ಜನರು ಚೇತರಿಸಿಕೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 338 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಜಗನ್ ಆಪ್ತ ಮಠಗಳಿಗೆ ತಿರುಪತಿ ಜಮೀನು?

ಟಿಟಿಡಿಯ ಮೂವರು ಸಿಬ್ಬಂದಿ ಕೊರೋನಾಕ್ಕೆ  ಬಲಿಯಾಗಿದ್ದು , ನಮ್ಮ ಉದ್ಯೋಗಿಗಳಿಗೆ ಕೋವಿಡ್ ಕೇಂದ್ರಗಳಲ್ಲಿ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ದೇವಾಲಯಯಕ್ಕೆ ಭೇಟಿ ನೀಡಿದ ಯಾವೊಬ್ಬ ಭಕ್ತರಿಗೂ ಕೊರೋನಾ ಕಾಣಿಸಿಕೊಂಡಿಲ್ಲ. ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ದೇಶಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ಒಂದೊಂದಾಗಿ ಸಡಿಲ ಮಾಡಿಕೊಂಡು ಬರಲಾಗಿತ್ತು. ಸಿನಿಮಾ ಮಂದಿರ ಮತ್ತು ಶಾಲೆ-ಕಾಲೇಜು ತೆರೆಯಲು ಇನ್ನು ಅವಕಾಶ ನೀಡಲಾಗಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ