ಅಮಿತ್ ಶಾ ಕೊರೋನಾ ವೈರಸ್ ಟೆಸ್ಟ್ ನೆಗೆಟಿವ್| ಟ್ವೀಟ್ ಮಾಡಿ ಮಾಹಿತಿ ನೀಡಿದ ಸಂಸದ ಮನೋಜ್ ತಿವಾರಿ| ಶೀಘ್ರದಲ್ಲೇ ಅಮಿತ್ ಶಾ ಡಿಸ್ಚಾರ್ಜ್ ಆಗುವ ಸಾಧ್ಯತೆ
ನವದೆಹಲಿ(ಆ.09): ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ವರದಿ ನೆಗೆಟಿವ್ ಬಂದಿದ್ದು, ಅವರು ಮಹಾಮಾರಿಯಿಂದ ಮುಕ್ತಿ ಪಡೆದಿದ್ದಾರೆ. ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವೀಟಟ್ ಮಾಡಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಆಗಸ್ಟ್ 2ರಂದು ಅಮಿತ್ ಶಾರವರ ಕೊರೋನಾ ವೈರಸ್ ವರದಿ ಪಾಸಿಟಿವ್ ಎಂದು ಬಂದಿತ್ತು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ರಾಮಮಂದಿರ ಶಿಲಾನ್ಯಾಸದ ನಂತರ ಅಮಿತ್ ಶಾ ಹೇಳಿದ 'ಸುವರ್ಣ' ಮಾತು!
test of Home Minister Amit Shah has not been conducted so far: Ministry of Home Affairs (MHA) Official https://t.co/8UaeUtNgBp
— ANI (@ANI)ಇನ್ನು ಅಮಿತ್ ಶಾ ಆರೋಗ್ಯ ಸ್ಥಿರವಿತ್ತು. ಆದರೆ ಕೊರೋನಾ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ಟೆಸ್ಟ್ ಮಾಡಿದ್ದರು. ಈ ಟೆಸ್ಟ್‌ನಲ್ಲಿ ಪಾಸಿಟಿವ್ ಎಂದು ಬಂದಿತ್ತು. ವೈದ್ಯರ ಸಲಹೆ ಮೇರೆಗೆ ಅವರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿತ್ತು. ಈ ಮಾಹಿತಿಯನ್ನು ಖುದ್ದು ಅಮಿತ್ ಶಾ ಟ್ವೀಟ್ ಮಾಡಿ ತಿಳಿಸಿದ್ದರು. ಅಲ್ಲದೇ ತಮ್ಮನ್ನು ಸಂಪರ್ಕಿಸಿದವರಿಗೆ ಕ್ವಾರಂಟೈನ್ ಆಗಿ ಕೊರೋನಾ ಟೆಸ್ಟ್ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡಾ ಸ್ವಯಂ ಕ್ವಾರಂಟೈನ್ ಆಗಿದ್ದರು. ಕೊನೆಯ ಬಾರಿ ಅಮಿತ್ ಶಾ ಪಿಎಂ ಮೋದಿ ನಡೆಸಿದ ಕ್ಯಾಬಿನೆಟ್ ಸಭೆಯಲ್ಲಿ ಕಾಣಿಸಿಕೊಂಡಿದ್ದರು ಆದರೆ ಈ ವೇಳೆ ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಲಾಗಿತ್ತು
ಅಮಿತ್ ಶಾರನ್ನು ಕೊರೋನಾ ಪರೀಕ್ಷೆಗೊಳಪಡಿಸಿಲ್ಲ
ಆದರೆ ಮನೋಜ್ ತಿವಾರಿ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯ ಅಮಿತ್ ಶಾರನ್ನು ಎರಡನೇ ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಿಲ್ಲವೆಂದು ಸ್ಪಷ್ಟಪಡಿಸಿದೆ.
‘ಅತಿ ಬುದ್ಧಿವಂತಿಕೆ’: ರೋಗ ಇಲ್ಲದಿದ್ದರೂ ಶ್ರೀಮಂತರಿಂದ ಆಸ್ಪತ್ರೆ ಬೆಡ್ ಬುಕ್!
ಅನೇಕ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಕೊರೋನಾ
ಕೇಂದ್ರ ಸಚಿವ ಅರ್ಜುನ್‌ರಾಮ್ ಮೇಘವಾಲ್ ಹಾಗೂ ಕೈಲಾಶ್ ಚೌಧರಿ ಕೂಡಾ ಕೊರೋನಾ ಪಾಸಿಟಿವ್ ಆಗಿದ್ದಾರೆ. ಇವರನ್ನು ಹೊರತುಪಡಿಸಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಹಾಘೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರವರ ವರದಿಯೂ ಕೊರೋನಾ ಪಾಸಿಟಿವ್ ಬಂದಿತ್ತು.