ಕೊರೋನಾ ಸೋಂಕಿತೆ ಶವ ಸಂಸ್ಕಾರಕ್ಕೂ ಮುನ್ನ ಸುಸ್ತಾಗಿ ಬಿದ್ದ ಕೊರೋನಾ ವಾರಿಯರ್!

By Suvarna NewsFirst Published Aug 9, 2020, 5:00 PM IST
Highlights

ಮಹಿಳೆಯ ಶವ ಸಂಸ್ಕಾರಕ್ಕೂ ಮುನ್ನ ನೆಲದ ಮೇಲೇ ಮಲಗಿ ದಣಿವಾರಿಸಿಕೊಂಡ ಕೊರೋನಾ ವಾರಿಯರ್| ವೈರಲ್ ಆಗುತ್ತಿದೆ ರಿಯಲ್ ಔಆರಿಯರ್ ಫೋಟೋ\ ಮಾನವೀಯತೆಗೊಂದು ಸಲಾಂ ಎಂದ ನೆಟ್ಟಿಗರು

ನವದೆಹಲಿ(ಆ.09): ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವಾರಿಯರ್ ಒಬ್ಬರ ಪೋಟೋ ಒಂದು ಭಾರೀ ವೈರಲ್ ಆಗಿದೆ. ಫೋಟೋದಲ್ಲಿ ಅವರು ಪಿಪಿಇ ಫಿಟ್ ಧರಿಸಿನೆಪಲದ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಬಹುದಾಗಿದೆ. 

ಲಭ್ಯವಾದ ಮಾಹಿತಿ ಅನ್ವಯ ಈ ಕೊರೋನಾ ವಾರಿಉಯರ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರಕ್ಕೂ ಮುನ್ನ ಸುಸ್ಥಾಗಿದ್ದು, ದಣಿವಾರಿಸಿಕೊಳ್ಳಲು ಅಲ್ಲೇ ಮಲಗಿದ್ದಾರೆ. ಈ ವೇಳೆ ರಾಯ್ಟರ್ಸ್‌ನ ಛಾಯಾಗ್ರಾಹಕ ಅದ್ನಾನ್ ಅಬೀದಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. 

कोरोना से मृत एक महिला के शव को दफ़नाने से पहले थका हुआ एक स्वास्थ्यकर्मी. ‘करोना वॉरीअर’ के योगदान को ना क़ेवल आज बल्कि पूरे इतिहास में याद रखा जाएगा. 🙏🙏
फ़ोटो दिल्ली की है.

फ़ोटो: अदनान अबीदी pic.twitter.com/xcPHejGjSr

— Awanish Sharan (@AwanishSharan)

ಈ ಫೋಟೋವನ್ನು ಐಎಎಸ್ ಅವನೀಶ್ ಶರಣ್ ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ 'ಕೊರೋನಾದಿಂದ ಮೃತಪಟ್ಟ ಮಹಿಳೆಯೊಬ್ಬಳ ಶವ ಸಂಸ್ಕಾರಕ್ಕೂ ಮುನ್ನ ದಣಿದ ಓರ್ವ ಆರೋಗ್ಯ ಸಿಬ್ಬಂದಿ. ಕೊರೋನಾ ವಾರಿಯರ್ ಕೊಡುಗೆಯನ್ನು ಇಂದು ಮಾತ್ರವಲ್ಲ ಬದಲಾಗಿ ಇತಿಹಾಸದಲ್ಲೂ ನೆನಪಿಸಿಕೊಳ್ಳಲಾಗುತ್ತದೆ' ಎಂದು ಬರೆದಿದ್ದಾರೆ. ಜೊತೆಗೆ ಫೋಟೋ ಕರ್ಟಸಿಯನ್ನೂ ನೀಡಿದ್ದಾರೆ.

ಮಾನವೀಯತೆ, ದೃಢತೆ ಹಾಗೂ ಮಾನವೀಯತೆಗೊಂದು ಸಲಾಂ

कोरोनो वॉरीयर आपके साहस,जज्बे, हिम्मत, त्याग , मानवता,........ के लिए ये विश्व और भारत देश सदा
आपका ऋणी रहेगा 🙏🙏
एक बार फिर सलाम है आपको
धरती के रियल सुपरमैनो को
🙏🙏🙏🙏

— sumit rai (@Sumitgeoraphy1)

तकलीफ़, हताशा और थकान...कोरोना की चपेट में आकर जान गंवाने वाली एक महिला को दफ़नाने से पहले सुस्ताता एक स्वास्थ्यकर्मी. तस्वीर दिल्ली की है...

(तस्वीर: ADNAN ABIDI/REUTERS) pic.twitter.com/5IjrzMYzvM

— Green Planet News (www.greenplanetmagazine.in) (@GreenPlanetMag1)

ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಈ ಫೊಟೋಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲರು ಇವರನ್ನು ರಿಯಲ್ ವಾರಿಯರ್ ಎಂದು ಬಣ್ಣಿಸಿದ್ದರೆ ಇನ್ನು ಕೆಲವರು ಇವರ ಧೈರ್ಯ ಹಾಗೂ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!