ಜಗತ್ತಿನಲ್ಲೇ ಅತೀ ಹೆಚ್ಚು ದ್ವಿಚಕ್ರ ವಾಹನವನ್ನು ಭಾರತ ಬಳಸೋದು ಯಾಕೆ ಅಂತಾ ಗೊತ್ತಾಯ್ತಲ್ಲ ಅಂದ್ರು ಆನಂದ್ ಮಹೀಂದ್ರಾ!

By Suvarna News  |  First Published Apr 3, 2022, 9:59 PM IST

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಏಕೆ ತಯಾರಿಸುತ್ತಿದೆ ಎಂಬುದನ್ನು ವಿವರಿಸಲು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಆಕರ್ಷಕ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು (ಏ.3): ಟ್ವಿಟ್ಟರ್ ನಲ್ಲಿ ಆನಂದ್ ಮಹೀಂದ್ರಾ (Anand Mahindra) ಅವರ ಟ್ವೀಟ್ ಗಳಿಗೆ ಒಂದು ಬಳಗವೇ ಇದೆ. ಪ್ರತಿ ದಿನಕ್ಕೆ ಆಯಾ ದಿನದ ಸ್ಪೆಷಲ್ ಆಗಿ ಏನನ್ನಾದರೂ ಪೋಸ್ಟ್ ಮಾಡುವ ಮೂಲಕ ಜನರಿಗೆ ಹತ್ತಿರವಾಗಿರುವ ಉದ್ಯಮಿ, ಭಾನುವಾರದಂದು ಸಖತ್ ಫೋಟೋವೊಂದನ್ನು ಪ್ರಕಟ ಮಾಡಿ, ಭಾರತ  (India) ವಿಶ್ವದಲ್ಲೇ ಅತೀ ಹೆಚ್ಚು ದ್ವಿಚಕ್ರ ವಾಹನ (Two-Wheelers)  ಬಳಕೆದಾರ ಎನ್ನುವುದು ಯಾಕೆ ಅಂತಾ ಗೊತ್ತಾಯ್ತಲ್ಲ ಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಅವರ ಟ್ವೀಟ್‌ಗಳು (Tweets) ಯಾವಾಗಲೂ ನಮ್ಮನ್ನು ಸೆಳೆದಿವೆ. ಕೈಗಾರಿಕೋದ್ಯಮಿ ತನ್ನ ಅನುಯಾಯಿಗಳಿಗೆ ಸಾಕಷ್ಟು ಸ್ಫೂರ್ತಿ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಪ್ರೇರಕ ಮತ್ತು ಆಸಕ್ತಿದಾಯಕ ವೀಡಿಯೊಗಳು, ಫೋಟೋಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ, ಅವರು ಭಾರತದಲ್ಲಿ ದ್ವಿಚಕ್ರ ವಾಹನಗಳ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದರು. ಭಾರತವು ವಿಶ್ವದ ದ್ವಿಚಕ್ರ ವಾಹನಗಳ ಅತಿದೊಡ್ಡ ಉತ್ಪಾದಕರಲ್ಲಿ ಒಂದು ಹೇಳುವ ಆನಂದ್ ಮಹೀಂದ್ರಾ ಅದನ್ನು ಸಾಬೀತು ಮಾಡಲು ಸಖತ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಪುರುಷ ಮತ್ತು ಮಹಿಳೆ ಮೋಟಾರ್ ಬೈಕ್ ನಲ್ಲಿ ಹೋಗುತ್ತಿರುವ ಫೋಟೋವನ್ನು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಅವರು ದ್ವಿಚಕ್ರ ವಾಹನದಲ್ಲಿ ಕುರ್ಚಿಗಳು ಮತ್ತು ಚಾಪೆಗಳನ್ನು ಕೂಡ ಹೊತ್ತೊಯ್ಯುತ್ತಿದ್ದಾರೆ. ದ್ವಿಚಕ್ರ ವಾಹನಕ್ಕೆ ಇಷ್ಟು ಸರಕು ತುಂಬುವುದು ಅಸಾಧ್ಯವೆಂದು ಮೇಲ್ನೋಟಕ್ಕೆ ಅನಿಸಿದರೂ, ಈ ಜೋಡಿ ಅದನ್ನು ಸಲೀಸಾಗಿ ಮಾಡುತ್ತಿರುವಂತೆ ಚಿತ್ರದಲ್ಲಿ ಕಂಡಿದೆ.

Now you know why India makes the most two-wheelers in the world. We know how to carry the highest volume of cargo per square inch of wheel…We are like that only… pic.twitter.com/3A0tHk6IoM

— anand mahindra (@anandmahindra)


“ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಏಕೆ ತಯಾರಿಸುತ್ತದೆ ಎಂದು ಈಗ ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. ಪ್ರತಿ ಚದರ ಇಂಚಿನ ಚಕ್ರಕ್ಕೆ ಅತ್ಯಧಿಕ ಪ್ರಮಾಣದ ಸರಕುಗಳನ್ನು ಸಾಗಿಸುವುದು ಹೇಗೆ ಎಂದು ನಮಗೆ ತಿಳಿದಿದೆ...ನಾವೀರೋದೇ ಹೀಗೆ" ಎಂದು ಆನಂದ್ ಮಹೀಂದ್ರಾ "ಸಂಡೇ" ಹ್ಯಾಶ್ ಟ್ಯಾಗ್ ಅಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ಬರೆಯುವ ವೇಳೆಗೆ ಈ ಟ್ವೀಟ್ 63 ಸಾವಿಕ್ಕೂ ಅಧಿಕ ಲೈಕ್‌ಗಳನ್ನು ಪಡೆದಿದೆ.

Tap to resize

Latest Videos

ಎಂಥಾ ಬ್ಯಾಲೆನ್ಸ್‌: ತಲೆ ಮೇಲೆ ದೊಡ್ಡ ಗಂಟು: ಸೈಕಲ್‌ನಲ್ಲಿ ಪಯಣ ಕೈ ಬಿಟ್ಟು

ಟ್ವಿಟರ್ ನಲ್ಲಿ ಆನಂದ್ ಮಹೀಂದ್ರಾ ಅವರ ಫಾಲೋವರ್ ಗಳ ಪೈಕಿ ಒಬ್ಬರು, ಉದ್ಯಮಿಯ ಒಳನೋಟಗಳ ಬಗ್ಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಆನಂದ್ ಮಹೀಂದ್ರಾ ಅವರಿಗೆ ಅದ್ಭುತ ಮೀಮ್ ಗಳ ನಿಧಿಗೆ ಹೇಗೆ ಇಳಿಯುವುದು ಎನ್ನುವುದು ತಿಳಿಸಿದೆ. ಪೊಲೀಸರು ಮೋಟಾರು ವಾಹನ ನಿಯಮಗಳನ್ನು ಆಳವಾಗಿ ಪರಿಶೀಲನೆ ಮಾಡುವ ಮುನ್ನ ಇದು ಯಾವ ಬೈಕ್, ಯಾವ ಕಂಪನಿ, ಮಾಡೆಲ್ ಹೇಗೆ ಎನ್ನುವ ಚರ್ಚೆಗಳು ನಡೆಯುತ್ತದೆ' ಎಂದು ಬರೆದಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳೆಕೆದಾರರು"ಸರ್, ದಯವಿಟ್ಟು ಈ ಅದ್ಭುತ ಪತಿಗೆ ಹೊಸ ಮಹೀಂದ್ರಾ XUV700 ಅನ್ನು ಉಡುಗೊರೆಯಾಗಿ ನೀಡಿ. ಅವರು ಎಲ್ಲವನ್ನೂ ಸಮತೋಲನಗೊಳಿಸುತ್ತಿರುವ ರೀತಿಯನ್ನು ಯಾವುದಕ್ಕೂ ಹೋಲಿಸಲಾಗುವುದಿಲ್ಲ." ಎಂದಿದ್ದಾರೆ.

ತನಗಿಂತ ದೊಡ್ಡ ಮೀನು ಹಿಡಿದ ಪುಟ್ಟ ಬಾಲಕ : ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಕೆಲವು ದಿನಗಳ ಹಿಂದೆ, ಆನಂದ್ ಮಹೀಂದ್ರಾ ಅವರು ಮತ್ತೊಂದು ಟ್ವೀಟ್‌ನಲ್ಲಿ ಯುವಕನೊಬ್ಬ ಬೈಸಿಕಲ್ ಸವಾರಿ ಮಾಡುವಾಗ ತನ್ನ ಕೈಗಳಿಂದ ಬಟ್ಟೆಯ ಹೊರೆಯನ್ನು ತಲೆಯ ಮೇಲೆ ಹೊತ್ತಿರುವ ವೀಡಿಯೊಗೆ ಮೆಚ್ಚುಗೆ ಸೂಚಿಸಿದ್ದರು. ಟ್ವಿಟರ್‌ನಲ್ಲಿ ತನ್ನನ್ನು ಏಂಜೆಲ್ ಹೂಡಿಕೆದಾರ ಎಂದು ಬಣ್ಣಿಸಿಕೊಳ್ಳುವ ಪ್ರಫುಲ್ ಎಂಬಿಎ ಚಾಯ್ ವಾಲಾ ಮೂಲತಃ ವೀಡಿಯೊವನ್ನು ಹಂಚಿಕೊಂಡಿದ್ದರು. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಮಹೀಂದ್ರಾ, ಆ ವ್ಯಕ್ತಿಯನ್ನು "ಮಾನವ ಸೆಗ್ವೇ, ಅವನ ದೇಹದಲ್ಲಿ ಗೈರೊಸ್ಕೋಪ್ ಅನ್ನು ನಿರ್ಮಿಸಲಾಗಿದೆ!" ಅಸಾಧಾರಣ ಜಿಮ್ನಾಸ್ಟ್‌ಗಳು ಅಥವಾ ಅಥ್ಲೀಟ್‌ಗಳಾಗುವ ಸಾಮರ್ಥ್ಯವನ್ನು ಹೊಂದಿರುವ ದೇಶದಲ್ಲಿ ಅವರಂತಹ ಇನ್ನೂ ಅನೇಕರು ಇದ್ದಾರೆ ಆದರೆ ಎಂದಿಗೂ ಗುರುತಿಸಲ್ಪಡದ ಕಾರಣ ಅವರು ನೋವು ಅನುಭವಿಸಿದ್ದಾರೆ ಎಂದು ಬರೆದಿದ್ದರು.

click me!