
ದೆಹಲಿ(ಏ.10): ಟ್ವಿಟರ್‌ನಲ್ಲಿ ಕ್ಟಿವ್ ಆಗಿರುವ ಉದ್ಯಮಿಗಳಲ್ಲಿ ಆನಂದ್ ಮಹಿಂದ್ರ ಕೂಡ ಒಬ್ಬರು. ತಮ್ಮ ಸೂಚನೆಗಳನ್ನು ನೀಡುವುದಕ್ಕೂ, ಉತ್ತಮ ಕೆಲಸಗಳನ್ನು ಪ್ರಶಂಸಿಸುವುದಕ್ಕೂ ಎಲ್ಲದಕ್ಕೂ ಆನಂದ್ ಅವರು ಟ್ವಿಟರ್ ಬಳಸುತ್ತಾರೆ.
ಇದೀಗ ತಮ್ಮ ಸಂಸ್ಥೆಗಳ ಕ್ಯಾಂಟೀನ್‌ಗಳಲ್ಲಿ ಕೆಲಸಗಾರರಿಗೆ ಊಟ ಮಾಡಲು ಬಾಳೆ ಎಲೆಗಳನ್ನು ಬಳಸುತ್ತಿದ್ದಾರೆ. ಪದ್ಮ ರಾಮ್‌ನಾಥ್ ಎಂಬ ಹಿರಿಯ ಪತ್ರಕರ್ತರೊಬ್ಬರ ಸಲಹೆಯ ಮೇರೆಗೆ ಆನಂದ್ ಅವರು ಈ ಕ್ರಮವನ್ನು ಅನುಸರಿಸುತ್ತಿದ್ದಾರೆ.
ಈಗಿನ ಲಾಕ್‌ಡೌನ್‌ನ ಕಷ್ಟದ ಸ್ಥಿತಿಯಲ್ಲಿ ಬಾಳೆ ಎಲೆಯನ್ನು ಹೆಚ್ಚಾಗಿ ಬಳಸುವುದರಿಂದ ಈ ಮೂಲಕ ಬಾಳೆ ಬೆಳಗಾರರಿಗೆ ಸಹಾಯ ಸಿಗಲಿದೆ ಎಂದು ಪತ್ರಕರ್ತ ಸಲಹೆ ನೀಡಿದ್ದರು.
48 ಗಂಟೆಯಲ್ಲಿ 7500ರು.ನ ವೆಂಟಿಲೇಟರ್ ಮಾದರಿ ತಯಾರಿಸಿದ ಮಹೀಂದ್ರಾ!
ಪದ್ಮ ರಮನಾಥ್ ಎಂದ ನಿವೃತ್ತ ಪತ್ರಕರ್ತರೊಬ್ಬರು ನನಗೆ ಮೇಲ್ ಮಾಡಿ ನಮ್ಮ ಕ್ಯಾಂಟೀನ್‌ಗಳಲ್ಲಿ ಬಾಳೆ ಎಲೆಯನ್ನು ಉಪಯೋಗಿಸಿದರೆ ಇದರಿಂದ ಬಾಳೆ ಬೆಳೆಗಾರರಿಗೆ ವರಮಾನ ಸಿಗುತ್ತದೆ ಎಂದಿದ್ದರು. ಅವರ ಸಲಹೆಯನ್ನು ಸ್ವಾಗತಿಸಿ ನಮ್ಮ ಕ್ಯಾಂಟೀನ್‌ಗಳಲ್ಲಿ ಬಾಳೆ ಎಲೆಯನ್ನು ಬಳಸುತ್ತಿದ್ದೇವೆ. ಥ್ಯಾಂಕ್ಯೂ ಎಂದು ಟ್ವೀಟ್ ಮಾಡಿದ್ದಾರೆ.
ಕೊರೋನಾ ಸಮರಕ್ಕೆ ಮಹೀಂದ್ರಾ ಸಾಥ್: ಸ್ಯಾಲರಿ, ರೆಸಾರ್ಟ್ ಎಲ್ಲವೂ ರೋಗಿಗಳ ಸಹಾಯಕ್ಕೆ!
ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬಾಧಿತರಾದಂತಹ ಜನರಿಗೆ ನೆರವಾಗಲು ತಮ್ಮ ಸಂಬಳದ 100% ನೀಡುವುದಾಗಿ ಘೋಷಿಸಿದ್ದರು. ಮಹಿಂದ್ರ ಫ್ಯಾಕ್ಟರಿಯಲ್ಲಿ ವೆಂಟಿಲೇಟರ್‌ಗಳನ್ನು ತಯಾರಿಸಿ ಕೊರೋನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸುವುದಾಗಿ ತಿಳಿಸಿದ್ದರು.
ಒಂದೇ ನಿಮಿಷದಲ್ಲಿ ಹೀಗೆ ಮಾಸ್ಕ್ ತಯಾರಿಸಿ, ಆನಂದ್ ಮಹೀಂದ್ರಾ ಟ್ವೀಟ್ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ