ಯುಪಿ ಚುನಾವಣೆಗೆ ಕಾಂಗ್ರೆಸ್ ನಿಂದ ಪ್ರತಿಜ್ಞಾ ಯಾತ್ರೆ: ಬಿಜೆಪಿಗೆ ಮುಳುವಾಗುತ್ತಾ ಕೈ ತಂತ್ರ?

By Kannadaprabha NewsFirst Published Oct 23, 2021, 2:10 PM IST
Highlights

* ಪ್ರತಿಜ್ಞೆ.. ಹೋರಾಟ.. ಹಾಗು ಫಲಿತಾಂಶ

* ಪಂಚರಾಜ್ಯ ಚುನಾವಣೆಗೆ  ಕಾಂಗ್ರೆಸ್ ಪಕ್ಷ ಬಳಸಲು ಹೊರಟಿರುವ ಹೊಸ ಅಸ್ತ್ರ

ಇಂಡಿಯಾ ರೌಂಡ್ಸ್, ಡೆಲ್ಲಿ ಮಂಜು

ನವದೆಹಲಿ (ನವೆಂಬರ್ 23): ಪ್ರತಿಜ್ಞೆ.. ಹೋರಾಟ.. ಹಾಗು ಫಲಿತಾಂಶ..! ಇದು ಪಂಚರಾಜ್ಯ ಚುನಾವಣೆಗೆ  ಕಾಂಗ್ರೆಸ್ ಪಕ್ಷ ಬಳಸಲು ಹೊರಟಿರುವ ಹೊಸ ಅಸ್ತ್ರ. ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹೊಸ ಹೊಸ ತಂತ್ರಗಾರಿಕೆ ಯನ್ನು ಪ್ರಯೋಗಿಸಲು ಮುಂದಾಗಿದೆ.

ಪ್ರತಿಜ್ಞಾ ಯಾತ್ರೆ : ಉತ್ತರ ಪ್ರದೇಶದಲ್ಲಿ ಪಾರ್ಟಿಯನ್ನು ಶತಾಯಗತಾಯ ಮೇಲೆತ್ತಲು ಜೂನಿಯರ್ ಇಂದಿರಾ ಅಲಿಯಾಸ್ ಪ್ರಿಯಾಂಕಾ ಗಾಂಧಿ ಹೋರಾಟ ಆರಂಭಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಯು ಪಿ ಯಲ್ಲೇ ಮೊಕ್ಕಾಂ ಹೂಡಿರುವ ಜೂನಿಯರ್ ಇಂದಿರಾಗಾಂಧಿ, ಹತ್ತು ಹಲವು ತಂತ್ರಗಳನ್ನು ಬತ್ತಳಿಕೆಯಲ್ಲಿ ಇರಿಸಿಕೊಂಡಿದ್ದಾರೆ. 

ಇದರ ಮೊದಲ ಭಾಗವಾಗಿ ಪ್ರತಿಜ್ಞಾ ಯಾತ್ರೆ . ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಪ್ರತಿಜ್ಞಾ ಯಾತ್ರೆ  ಚಾಲನೆ ನೀಡಲು ಮುಂದಾಗಿದ್ದಾರೆ. ಮೂರು ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿರುವ ಪ್ರಿಯಾಂಕಾ ಸುಮಾರು 12 ಸಾವಿರ ಕಿಲೋಮೀಟರ್ ಯಾತ್ರೆ ಮಾಡಲಿದ್ದಾರೆ.

ಬಾರಾಬಂಕಿಯಿಂದ ಮೂರು ಮಾರ್ಗದಲ್ಲಿ 'ಪ್ರತಿಜ್ಞಾ ಯಾತ್ರೆ' ಆರಂಭವಾಗಲಿರುವ ಯಾತ್ರೆ, ಬಾರಾಬಂಕಿಯಿಂದ ಬುಂದೇಲ್‌ಖಂಡ್‌, ಸಹರಾನ್‌ಪುರ- ಮಥುರಾ, ಹಾಗು ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಿಂದ ರಾಯ್‌ಬರೇಲಿಯವರೆಗಿನ ಯಾತ್ರೆ ನಡೆಸಲಿದ್ದಾರೆ. ಅಕ್ಟೋಬರ್ 23 ರಿಂದ ನವೆಂಬರ್ 1 ರ ವರೆಗೆ ಯಾತ್ರೆ ನಡೆಯಲಿದೆ.

ಶೇ.40 ರಷ್ಟು ಸೀಟು ಮೀಸಲು

ಚುನಾವಣೆ ತಯಾರಿ ಆರಂಭದಲ್ಲೇ ಮಳೆಯರನ್ನು ಟಾರ್ಗೆಟ್ ಮಾಡಿಕೊಂಡಿರುವ ಪ್ರಿಯಾಂಕಾ, ಚುನಾವಣೆಯಲ್ಲಿ ಶೇ.40 ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಉಳಿದ ಪಕ್ಷಗಳು ಜಾತಿ, ವರ್ಗ ಸಮೀಕರಣದಲ್ಲಿದ್ದರೇ ಪ್ರಿಯಾಂಕಾ ಗಾಂಧಿ ಬಹುದೊಡ್ಡ ಮತ ಬ್ಯಾಂಕ್ ಗೆ ಕೈ ಹಾಕಿದ್ದು, ಆ ಮೂಲಕ ಮಹಿಳಾ ಮತಗಳು ಪಡೆಯಲು ಮುಂದಾಗಿದ್ದಾರೆ. ಜೊತೆಗೆ ಮಹಿಳೆಯರಿಗೆ ಸ್ಮಾಟ್ ಫೋನ್, ಸ್ಕೂಟಿ ನೀಡುವಂತ ಘೋಷಣೆಗಳು ಈಗಾಗಲೇ ಹೊರಬಿದ್ದಿವೆ.

ಘೋಷಣೆಗೆ ಮುಂಚೆ ಘೋಷಣೆ : 

ಚುನಾವಣೆ ಘೋಷಣೆಗೆ ಮುಂಚೆ ಅಭ್ಯರ್ಥಿಗಳ ಘೋಷಣೆಯ ಸ್ಕೀಂ ಕಾಂಗ್ರೆಸ್ ಈ ಬಾರಿ ಮುಂದಿಟ್ಟಿದೆ. ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವ ಹಳೇ ಸಂಪ್ರದಾಯಕ್ಕೆ ಏಳು ನೀರು ಬಿಟ್ಟಿರುವ ಯು ಪಿ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಘೋಷಣೆಗೆ ಮುಂಚೆ ಘೋಷಣೆ  ಅಂಥ ಪಣತೊಟ್ಟಿದ್ದಾರೆ. 

ಈ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ದತೆ ನಡೆಸಿದೆ. ಇದರ ಜೊತೆಗೆ ಮಹಿಳೆಯರಿಗೆ ಶೇ.40 ರಷ್ಟು ಸೀಟು ಮೀಸಲು ಅನ್ನೋದಕ್ಕೂ ಕೂಡ ಒತ್ತು ನೀಡಿದ್ದಾರೆ ಎನ್ನಲಾಗುತ್ತಿದೆ. 

ಯು ಪಿಯಲ್ಲಿ ಸಣ್ಣ ಚಾನ್ಸ್ ಕೂಡ ಬಿಡದೇ ಪ್ರತಿ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ಯು ಪಿ ಪೂರ್ಣ ಉಸ್ತುವಾರಿ ಹೊತ್ತಿರುವ ಗಾಂಧಿ, ಪ್ರತಿ ಹೆಜ್ಜೆಯನ್ನು ಬಹಳ‌ ಗಂಭೀರವಾಗಿಡುತ್ತಿದ್ದಾರೆ. ಪ್ರತಿ ತೀರ್ಮಾನವನ್ನೂ ಬಹಳ ಗಂಭೀರವಾಗಿ ತೆಗೆದುಕೊಳುತ್ತಿದ್ದಾರೆ. ಈಗಾಗಲೇ ಜೂನಿಯರ್ ಇಂದಿರಾಗಾಂಧಿ, ಪ್ರಧಾನಿ ಕ್ಷೇತ್ರ ವಾರಣಾಸಿಯಲ್ಲಿ ರ್ಯಾಲಿ ನಡೆಸಿದ್ದಾರೆ, ಲಂಖೀಪುರ್ ಕೇರಿ ಪ್ರಕರಣವನ್ನು ಬಹಳ ಯಶಸ್ವಿಯಾಗಿ ಬಳಕೆ ಮಾಡಿಕೊಂಡು ಮತ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ.

click me!