ಒಂದು ವಾರದಲ್ಲಿ 2 ಪರೀಕ್ಷೆ: ಅಮಿತ್ ಶಾ ಕೊರೋನಾ ವರದಿ ನೆಗಟೀವ್!

By Suvarna NewsFirst Published Aug 24, 2020, 8:27 PM IST
Highlights

ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಾಳರಾಗಿದ್ದಾರೆ. ಕಳೆದೊಂದು ವಾರದಲ್ಲಿ ಎರಡು ಬಾರಿ ಅಮಿತ್ ಶಾಗೆ ಕೋವಿಡ್-19 ಟೆಸ್ಟ್ ಮಾಡಿಸಲಾಗಿದ್ದು, ಎರಡೂ ಪರೀಕ್ಷೆಯಲ್ಲಿ ನೆಗಟೀವ್ ಬಂದಿದೆ.

ನವದೆಹಲಿ(ಆ.24):  ಕೇಂದ್ರ ಸರ್ಕಾರದ ಸಚಿವರಿಗೆ ಕೊರೋನಾ ತಗುಲಿ ಆತಂಕದ ವಾತವಾರಣ ಸೃಷ್ಟಿಯಾಗಿತ್ತು. ಇದೀಗ ನಿರಾಳವಾಗಿದೆ. ಆಗಸ್ಟ್ 17 ರಂದು ಆಸ್ಪತ್ರೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ವರದಿ ನೆಗಟೀವ್ ಬಂದಿದೆ. ಕಳೆದೊಂದು ವಾರದಲ್ಲಿ 2 ಬಾರಿ ಅಮಿತ್ ಶಾಗೆ ಕೊರೋನಾ ವೈರಸ್ ಪರೀಕ್ಷೆ ನಡೆಸಲಾಗಿದೆ. ಎರಡೂ ವರದಿ ನೆಗಟೀವ್ ಬಂದಿದೆ.

ಕೊರೋನಾದಿಂದ ಚೇತರಿಕೆಯಾಗಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು!

ಅಮಿತ್ ಶಾ ಆಸ್ಪತ್ರೆಯಲ್ಲಿ ಸ್ವತಃ ಕ್ವಾರಂಟೈನ್ ಆಗಿದ್ದಾರೆ. ಅವರಿಗೆ ಯಾವುದೇ ಕೃತಕ ಆಮ್ಲಜನಕ ನೀಡಿಲ್ಲ. ಇಷ್ಟೇ ಅಲ್ಲ ಆರೋಗ್ಯವಾಗಿದ್ದಾರೆ. ಎರಡು ಪರೀಕ್ಷೆಯಲ್ಲಿ ಕೊರೋನಾ ನೆಗಟೀವ್ ಇದೆ. ಅಮಿತ್ ಶಾ ಸರ್ಕಾರಿ ಕಡತಗಳ ಪರಿಶೀಲನೆ, ಅಗತ್ಯ ಕಡತಗಳಿಗೆ ಸಹಿ ಹಾಕಿ ಕೆಲಸ ಕಾರ್ಯ ಮುಂದುವರಿಸಿದ್ದಾರೆ ಎಂದು ದೆಹಲಿಯ ಏಮ್ಸ್ ವೈದ್ಯರು ಹೇಳಿದ್ದಾರೆ.

ಕೊರೋನಾ ಗೆದ್ದ ಅಮಿತ್ ಶಾ ಅದೊಂದು ಮಾತು ಹೇಳಲು ಮರೆಯಲಿಲ್ಲ!

ಆಗಸ್ಟ್ 2 ರಂದು ಕೊರೋನಾ ವೈರಸ್ ಲಕ್ಷಣ ಕಂಡು ಬಂದ ಕಾರಣ ಅಮಿತ್ ಶಾ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ವೈರಸ್ ದೃಢಪಟ್ಟ ಕಾರಣ ಅಮಿತ್ ಶಾಗೆ ಚಿಕಿತ್ಸೆ ನೀಡಲಾಗಿತ್ತು. 12 ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿ ಹೊರಬಂದಿದ್ದರು. ಆದರೆ ಆಗಸ್ಟ್ 17 ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಆಯಾಸ ಮತ್ತು ದೇಹದ ನೋವಿನ ಸಮಸ್ಯೆ ಕುರಿತು ಅಮಿತ್ ಶಾ ವೈದ್ಯರಿಗೆ ಹೇಳಿದ್ದರು. ಇಷ್ಟೇ ಅಲ್ಲ ಕೊರೋನಾ ವೈರಸ್ ಚಿಕಿತ್ಸೆ ಪಡೆದ ಕಾರಣ ಸುಸ್ತು ಕೂಡ ಹೆಚ್ಚಾಗಿತ್ತು. ಹೀಗಾಗಿ ಕೋವಿಡ್ ನಂತರದ ಆರೈಕೆಗಾಗಿ ಅಮಿತ್ ಶಾ ಆಸ್ಪತ್ರೆ ದಾಖಲಾಗಿದ್ದರು.

click me!