ಅಂತರ್‌ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು‌ ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ

By Suvarna News  |  First Published Aug 24, 2020, 4:46 PM IST

ಅಂತರ್ ರಾಜ್ಯ ನಡುವಿನ ಓಡಾಟ ನಿರ್ಬಂಧ ಸಂಪೂರ್ಣ ತೆರವು/ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ/ ಅನ್ ಲಾಕ್ 3.0 ದಲ್ಲಿಯೇ  ಹೇಳಲಾಗಿತ್ತು/ ಆಗಸ್ಟ್  5 ರಿಂದಲೇ ಹಲವು ಸಡಿಲಿಕೆ ನೀಡಲಾಗಿತ್ತು.


ನವದೆಹಲಿ(ಆ. 24) ಕೊರೋನಾ  ಲಾಕ್ ಡೌನ್ ಸಡಿಲಿಕೆಯಾಗಿ  ಅನ್ ಲಾಕ್ ಘೋಷಣೆಯಾಗಿ ಹಲವು ದಿನಗಳೆ ಕಳೆದಿವೆ. ಒಂದೊಂದೆ ಸಡಲಿಕೆ ನೀಡುತ್ತಾ ಬರಲಾಗಿದೆ. ಸಿನಿಮಾ ಮಂದಿರ ಮತ್ತು ಮೆಟ್ರೋ ಸಂಚಾರಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ. ಈ ನಡುವೆ ಕೇಂದ್ರ ಸರ್ಕಾರ ಮಹತ್ವದ ಸಡಿಲಿಕೆಯೊಂದನ್ನು ನೀಡಿದೆ.

ರಾಜ್ಯ ರಾಜ್ಯಗಳ ನಡುವೆ ಪ್ರಯಾಣಿಕರು ಮತ್ತು ಸರಕು ಸಾಗಣೆ ಸಂಬಂಧ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಿದೆ.  ಕೇಂದ್ರ ಗೃಹ  ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ಬಂಧ ತೆಗೆದುಹಾಕಿರುವುದನ್ನು ತಿಳಿಸಿದ್ದಾರೆ.

Latest Videos

undefined

ಕೊರೋನಾ ಪರಿಹಾರಕ್ಕೆ ಬಿಪಿಎಲ್ ಕಾರ್ಡ್ ಅಡ್ಡಿ

ಆರ್ಥಿಕ ಚಟುವಟಿಕೆ ಮೇಲೆ ಈ ಅಂತರ್ ರಾಜ್ಯ ನಿರ್ಭಂದ ಪರಿಣಾಮ ಉಂಟುಮಾಡುತ್ತಿದ್ದು ತೆಗೆದುಹಾಕಲಾಗಿದೆ.  ಅನ್ ಲಾಕ್ 3.0 ದಲ್ಲಿಯೇ ಈ ವಿಚಾರ ಹೇಳಲಾಗಿತ್ತಾದರೂ ಅಧಿಕೃತ ಆದೇಶ ಹೊರಬಂದಿರಲಿಲ್ಲ.

ಪ್ರಮುಖ ಅಂಶಗಳನ್ನು ಗಮನಿಸಿ

* ಇವೆಲ್ಲ ರದ್ದು

ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು

ರಾಜ್ಯದ ಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ 

ಜಿಲ್ಲೆಯ ಕೇಂದ್ರಗಳಲ್ಲಿ ತಪಾಸಣೆ

ಕೈಗಳ ಮೇಲೆ ಮುದ್ರೆ ಹಾಕುವುದು

14 ದಿನಗಳ ಕ್ವಾರಂಟೈನ್

ಮನೆಯ ಬಾಗಿಲಿಗೆ ಪೋಸ್ಟರ್ ಹಚ್ಚುವುದು

ಕೋವಿಡ್ ಗುಣಲಕ್ಷಣಗಳು ಇದ್ದರೆ, ಗುಣಲಕ್ಷಣಗಳು ಇಲ್ಲದೇ ಇದ್ದರೆ ಎಂಬ ಆಧಾರದಲ್ಲಿ ನಿಯಮಾವಳಿ ರೂಪಿಸಲಾಗಿದೆ.

* ಕೋವಿಡ್-19 ರೋಗ ಲಕ್ಷಣಗಳಿಲ್ಲದಿದ್ದರೆ

- 14 ದಿನಗಳ ಕ್ಯಾರೆಂಟೈನ್ ಅಗತ್ಯವಿರುವುದಿಲ್ಲ

- ತಮ್ಮ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು

- ಆದರೆ, 14 ದಿನಗಳವರೆಗೆ  ಕೊಪಿಡ್-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ಗಂಟಲು ನೋವು, ಉಸಿರಾಟಕ್ಕೆ ತೊಂದರೆ ಬಗ್ಗೆ ಸ್ವಯಂ-ನಿಗಾ ವಹಿಸುವುದು

- ಈ ವೇಳೆಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯುವುದು

- ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆ ಮಾಡುವುದು

2. ಕೋವಿಡ್-19 ರೋಗ ಲಕ್ಷಣಗಳಿದ್ದರೆ

- ರಾಜ್ಯಕ್ಕೆ ಆಗಮನದ ವೇಳೆ ಕೋವಿಡ್-19 ರೋಗಲಕ್ಷಣವಿದ್ದರೆ, ತಕ್ಷಣವೇ ಸ್ವಯಂ-ಪ್ರತ್ಯೇಕವಾಗಿರಬೇಕು 

- ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು

- ಅಥವಾ ಆಪ್ತಮಿತ್ರ ಸಹಾಯವಾಣಿ 14410 ಕರೆ‌ ಮಾಡಬೇಕು

 - ಕೋವಿಡ್-19 ತಡೆಗಟ್ಟಲು ಫೇಸ್ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು

- 2 ಮೀಟರ್ (ಅಥವಾ 6 ಅಡಿ) ದೈಹಿಕ ದೂರವಿರುವುದು

- ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವುದು ಅಥವಾ ಕೈ ಸ್ಯಾನಿಟೈಸ್‌‌ ಬಳಸುವುದು

- ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ಪಾಲಿಸುವುದು.

 

"

 

click me!