BSY ಪರ ಮಠಾಧೀಶರ ಬ್ಯಾಟಿಂಗ್, ತೆರೆ ಮೇಲೆ ಮತ್ತೆ ಮೇಘನಾ ಮಿಂಚಿಂಗ್? ಆ. 2ರ ಟಾಪ್ 10 ಸುದ್ದಿ

By Suvarna News  |  First Published Aug 2, 2020, 5:26 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ವಕ್ಕರಿಸಿದ ಕೊರೋನಾ/ ಶ್ರೀರಾಮುಲು ವಿರುದ್ಧ ಮಾಜಿ ಶಾಶಕನ ಏಕವಚನ ವಾಗ್ದಾಳಿ/ ಮತ್ತೆ ತೆರೆಯ ಮೇಲೆ ಮೇಘನಾ ರಾಜ್/ ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ/ ಬಿಎಸ್‌ವೈ ಪರ ಮಠಾಧೀಶರ ಬ್ಯಾಟಿಂಗ್


ಭಾನುವಾರವೂ ಸುದ್ದಿಗಳಿಗೇನು ಬರವಿಲ್ಲ.   ಎಂದಿನಂತೆ ಕೊರೋನಾ ಆರ್ಭಟ ಈಗ ಶುರುವಾಗಿರುವ ರಾಜಕೀಯ ಮೇಲಾಟ ಮುಂದುವರಿದೆ ಇದೆ. ಕೊರೋನಾ ಕೇಸುಗಳ ಸಂಖ್ಯೆ  ಒಂದು ಸುದ್ದಿಯಾದರೆ ರಾಜಕಾರಣಿಗಳ ಆರೋಪ-ಪ್ರತ್ಯಾರೋಪ ಇದ್ದೆ ಇದೆ. ಈ ನಡುವೆ  ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.  ಭಾನುವಾರದ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ

ಅಮಿತ್ ಶಾ ಗೆ ವಕ್ಕರಿಸಿದ ಕೊರೋನಾ ವೈರಸ್

Latest Videos

undefined

 

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದು, ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೆ ಒಳಪಡಬೇಕಾಗಿ ಕೇಳಿಕೊಂಡಿದ್ದಾರೆ. ಜೊತೆಗೆ ನನ್ನ ಆರೋಗ್ಯ ಚೆನ್ನಾಗಿದೆ ಮತ್ತು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 

ಶಿಕ್ಷಣ ನೀತಿ ರೂಲ್ಸ್: ಕೇಂದ್ರ ಸರ್ಕಾರದಿಂದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜೊತೆಗೆ ಬೆಳಗಿನ ಉಪಾಹಾರವನ್ನು ಕೂಡ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

 

ಸುಶಾಂತ್‌ ಸಾವಿಗೆ ನ್ಯಾಯ ಕೋರಿ ಸೋದರಿಯಿಂದ ಪ್ರಧಾನಿ ಮೋದಿಗೆ ಪತ್ರ

ನಟ ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಶನಿವಾರ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ರದ ಚಿಕ್ಕ ಟಿಪ್ಪಣಿಯೊಂದನ್ನು ಪೋಸ್ಟ್‌ ಮಾಡಿರುವ ಶ್ವೇತಾ, ‘ನನ್ನ ಸಹೋದರನಿಗೆ ಬಾಲಿವುಡ್‌ನಲ್ಲಿ ಗಾಡ್‌ಫಾದರ್‌ ಇರಲಿಲ್ಲ. ಈಗ ನಮ್ಮ ಸಹಾಯಕ್ಕೆ ಯಾರೂ ಇಲ್ಲ. ನಾವು ಸರಳ ಕುಟುಂಬದಿಂದ ಬಂದಿದ್ದೇವೆ. ಈ ಪ್ರಕರಣವನ್ನು ತಕ್ಷಣವೇ ಪರಿಶೀಲಿಸಿ ಎಂದಿದ್ದಾರೆ.

ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ: ಹಾವೇರಿ ವೈದ್ಯರ ಕಾರ್ಯಕ್ಕೆ ಸಚಿವ ಸುಧಾಕರ್‌ ಶ್ಲಾಘನೆ

ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಅವರು ಕೋವಿಡ್ ಸೋಂಕಿತರಿಗೆ ಉಚಿವ ಸೇವೆ ನೀಡಲು ಮುಂದಾಗಿರುವ ಖಾಸಗಿ ವೈದ್ಯರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಬಿಎಸ್‌ವೈ ಪರ ಅಖಾಡಕ್ಕಿಳಿದ ಮಠಾಧೀಶರು

ರಾಜ್ಯ ಬಿಜೆಪಿಯಲ್ಲಿ ನಾಯಕಯತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿದ್ದು, ಬಿಎಸ್‌ವೈ ಸರ್ಕಾರಕ್ಕೆ ಒಂದು ವರ್ಷ ಆಗುತ್ತಿದ್ದಂತೆ ಸಿಎಂ ಬದಲಾವಣೆಯ ಮಾತು ಮುನ್ನೆಲೆಗೆ ಬಂದಿದೆ.  ಪಕ್ಷದಲ್ಲಿ ಆಂತರಿಕವಾಗಿ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಮ್ಮಿಶ್ರ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷಗಳ ಬಳಿಕ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಬಿ.ಎಸ್‌ ಯಡಿಯೂರಪ್ಪ ಅಧಿಕಾರ ಹಸ್ತಾಂತರದ ಮಾತುಕತೆಯೂ ನಡೆದಿತ್ತು ಎನ್ನಲಾಗಿದೆ. 

ಐದು ದಿನ ಭಾರೀ ಮಳೆಯ ಮುನ್ನೆಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಗಳು, ಶನಿವಾರದಿಂದ ಮುಂದಿನ 5 ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಗಾಳಿಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿವೆ.

 

ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಾ ಮೇಘನಾ ರಾಜ್?

ಚಿರು ಅಗಲಿಕೆ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಮೇಘನಾ ರಾಜ್‌ ಮತ್ತೆ ಅಭಿನಯಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ತುಂಬು ಗರ್ಭಿಣಿ ಮೇಘನಾ ರಾಜ್‌ ಸದ್ಯಕ್ಕೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದೆಲ್ಲಾ ನಿಜಾನಾ?  ಸುಳ್ಳಾ ? ಇಲ್ಲಿದೆ ನೋಡಿ..

ವಿದೇಶಿ ಟಿ20 ಲೀಗ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!

ಭಾರ​ತದ ಮಾಜಿ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌, ಇದೇ ತಿಂಗಳು 28ರಿಂದ ಆರಂಭ​ಗೊ​ಳ್ಳ​ಲಿ​ರುವ ಉದ್ಘಾ​ಟನಾ ಆವೃ​ತ್ತಿಯ ಲಂಕಾ ಪ್ರೀಮಿ​ಯರ್‌ ಲೀಗ್‌(ಎಲ್‌ಪಿಎಲ್‌) ಟಿ20 ಲೀಗ್‌ನಲ್ಲಿ ಪಾಲ್ಗೊ​ಳ್ಳುವ ಸಾಧ್ಯತೆ ಇದೆ.

ಆ ಮನುಷ್ಯ ತೋಳಿನ ಮೇಲೇ ಶಿಶ್ನ ಬೆಳೆಸಿಕೊಂಡ!

ನಾನು ಬಳ್ಳಾರಿಗೆ ಬರ್ತೇನೆ, ನೀನು ಬಾ: ಶ್ರೀರಾಮುಲುಗೆ ಮಾಜಿ ಶಾಸಕ ಪಂಥಾಹ್ವಾನ

 

click me!