ರಾಹುಲ್‌ಗೆ ಇಟಲಿ ಭಾಷೆಯಲ್ಲಿ ಸಿಎಎ ತರ್ಜುಮೆ ಮಾಡುವೆ: ಅಮಿತ್ ಶಾ!

By Suvarna NewsFirst Published Jan 3, 2020, 5:48 PM IST
Highlights

ಪೌರತ್ವ ಕಾಯ್ದೆ ಜಾರಿ ಮಾಡಿಯೇ ಸಿದ್ಧ ಎಂದ ಅಮಿತ್ ಶಾ| ಕಾಯ್ದೆ ಜಾರಿ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯಲ್ಲ ಎಂದ ಗೃಹ ಸಚಿವ| ರಾಹುಲ್ ಗೆ ಕಾಯ್ದೆಯ ನಿಯಮ ಇಟಲಿ ಭಾಷೆಯಲ್ಲಿ ತರ್ಜುಮೆ ಮಾಡುವೆ ಎಂದ ಶಾ|  ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಶಾ ಚಾಲನೆ| ‘ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನೂ ಕಸಿಯುವುದಿಲ್ಲ’|

ಜೋಧಪುರ್(ಜ.03): ಎಷ್ಟೇ ವಿರೋಧ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ನಿರ್ಧಾರದಿಂದ ಸರ್ಕಾರ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದ ಜೋಧಪುರ್’ದಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌ ಸೇರಿದಂತೆ ಎಲ್ಲಾ ವಿಪಕ್ಷಗಳೂ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.

Union Home Minister Amit Shah in Jodhpur: Even if all these parties come together, BJP will not move back even an inch on this issue of . You can spread as much misinformation as you want. pic.twitter.com/aQOz4WKczm

— ANI (@ANI)

ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ ಎಂದು ಅಮಿತ್ ಶಾ ಭರವಸೆ ನೀಡಿದರು.

ನೀವು ಪಾಕಿಸ್ತಾನದ ಪ್ರಧಾನಿ ಏನ್ರೀ?: ಮೋದಿಗೆ ದೀದಿ ಪ್ರಶ್ನೆ!

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಗೃಹ ಸಚಿವ, ರಾಹುಲ್ ಅವರಿಗೆ ಕಾಯ್ದೆ ಅರ್ಥವಾಗಿರದಿದ್ದರೆ ಅವರಿಗೆ ಇಟಲಿ ಭಾಷೆಯಲ್ಲಿ ತರ್ಜುಮೆ ಮಾಡಿ ತಿಳಿಸುವೆ ಎಂದು ಲೇವಡಿ ಮಾಡಿದರು.

जोधपुर, राजस्थान में नागरिकता संशोधन कानून पर केंद्रीय गृह मंत्री अमित शाह : राहुल बाबा कानून पढ़ा है, तो कहीं पर भी चर्चा करने के लिए आ जाओ। नहीं पढ़ा है तो मैं इटैलियन में इसका अनुवाद करके भेज देता हूं, उसको पढ़ लीजिए। pic.twitter.com/Fk0BVqkymq

— ANI_HindiNews (@AHindinews)

ಸಿಎಎ ಕುರಿತು ಕಾಂಗ್ರೆಸ್ ಜನರಲ್ಲಿ ಅನಗತ್ಯ ಭಯ ಸೃಷ್ಟಿಸುತ್ತಿದೆ. ಆದರೆ ಜನತೆ ಕಾಂಗ್ರೆಸ್’ನ ಎಲ್ಲಾ ಹುನ್ನಾರಗಳನ್ನು ತಿರಸ್ಕರಿಸಲಿದ್ದಾರೆ ಎಂಭ ಭರವಸೆ ಇದೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!

click me!