RCEPಗೆ ಮೋದಿ ಸಹಿ ಹಾಕಿಲ್ಲವೇಕೆ?: ಶಾ ಬಿಚ್ಚಿಟ್ಟರು ಗುಟ್ಟು!

By Web DeskFirst Published Nov 13, 2019, 7:40 PM IST
Highlights

RCEPಗೆ ಮೋದಿ ಸಹಿ ಹಾಕದ ಉದ್ದೇಶ ಬಹರಿಂಗಪಡಿಸಿದ ಅಮಿತ್ ಶಾ/ RCEP ಒಪ್ಪಂದದಿಂದ ಪ್ರಧಾನಿ ಮೋದಿ ಹಿಂದೆ ಸರಿದಿದ್ದೇಕೆ/ ಮೋದಿ ಸರ್ಕಾರದ ಇಂಡಿಯಾ ಫಸ್ಟ್ ನೀತಿಯ ಪರಿಣಾಮ ಎಂದ ಗೃಹ ಸಚಿವ/ ಒಪ್ಪಂದಕ್ಕೆ ಸಹಿ ಹಾಕದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಅಮಿತ್ ಶಾ/ ‘ಭಾರತೀಯ ವ್ಯಾಪಾರಸ್ಥರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದದಿಂದ ಸರಿಯಲಾಗಿದೆ’/

ನವದೆಹಲಿ(ನ.13): ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(RCEP) ಒಪ್ಪಂದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಿ ಹಾಕದಿರುವ ಐತಿಹಾಸಿಕ ನಿರ್ಣಯ ಕೈಗೊಂಡಿದೆ.

ನಿರಾಳ ತಂದ ಮೋದಿ ಘೋಷಣೆ: ಸಾಗರಾದಚೆಯಿಂದ ಸಿಹಿ ಸುದ್ದಿ ಕೊಟ್ಟ ಪ್ರಧಾನಿ!

ಆರ್‌ಸಿಇಪಿ ಒಪ್ಪಂದದ ಪ್ರಸ್ತುತ ರೂಪ ಮೂಲ ಮನೋಭಾವ ಮತ್ತು ಈ ಹಿಂದೆ ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್‌ಸಿಇಪಿ ಒಪ್ಪಂದವನ್ನು ಅಳೆದರೆ ಸಕಾರಾತ್ಮಕ ಉತ್ತರ ಸಿಗುವುದಿಲ್ಲ ಎಂದು ಪ್ರಧಾನಿ ಮಾರ್ಮಿಕವಾಗಿ ಹೇಳಿದ್ದರು.

ಮೋದಿ ನಿರ್ಧಾರದಿಂದ ರೈತರ ಮೊಗದಲ್ಲಿ ಹರ್ಷ

ಅಲ್ಲದೇ ಯಾವುದೇ ಕಾರಣಕ್ಕೂ ಭಾರತ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದರು.

ಸದ್ಯ ಮೋದಿ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೋದಿ ಸರ್ಕಾರದ ಇಂಡಿಯಾ ಫಸ್ಟ್ ನೀತಿ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಆರ್‌ಸಿಇಪಿ ಒಪ್ಪಂದ ಕೈಬಿಟ್ಟಿದ್ದಕ್ಕೆ ರಾಜ್ಯದ ರೈತರು ನಿರಾಳ: ಪ್ರಭು ಚವ್ಹಾಣ್

ಭಾರತೀಯ ವ್ಯಾಪಾರಸ್ಥರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

click me!