ಪ್ರೀತಿಯ ಪವಿತ್ರ ಅಗ್ನಿ: 104 ವರ್ಷದ ಪತಿ ಸತ್ತ 1 ಗಂಟೆಯಲ್ಲಿ ಅಸುನೀಗಿದ 100 ವರ್ಷದ ಪತ್ನಿ!

Published : Nov 13, 2019, 05:12 PM ISTUpdated : Nov 13, 2019, 05:38 PM IST
ಪ್ರೀತಿಯ ಪವಿತ್ರ ಅಗ್ನಿ: 104 ವರ್ಷದ ಪತಿ ಸತ್ತ 1 ಗಂಟೆಯಲ್ಲಿ ಅಸುನೀಗಿದ 100 ವರ್ಷದ ಪತ್ನಿ!

ಸಾರಾಂಶ

104 ವರ್ಷದ ಪತಿ ಸತ್ತ 1 ಗಂಟೆಯಲ್ಲಿ ಅಸುನೀಗಿದ 100 ವರ್ಷದ ಪತ್ನಿ/ ತಮಿಳುನಾಡಿನ ಪುಡುಕೊಟ್ಟೈಯಲ್ಲಿ ಅಪರೂಪದ ಘಟನೆ/ ವಯೋಸಹಜ ಅನಾರೋಗ್ಯದಿಂದ ಅಸುನೀಗಿದ 104 ವರ್ಷದ ವೆಟ್ರಿವೆಲ್/ ಪತಿಯ ಸಾವಿನ ದು:ಖ ತಡೆಯಲಾರದೇ ಹೃದಯಾಘಾತದಿಂದ ಅಸುನೀಗಿದ 100  ವರ್ಷದ ಪಿಚಾಯಿ/

ಸಾಂಧರ್ಭಿಕ ಚಿತ್ರ

ಪುಡುಕೊಟ್ಟೈ(ನ.13): ಅವರವರ ಭಾವಕ್ಕೆ ತಕ್ಕಂತೆ ಪ್ರೀತಿಯ ವಿಶ್ಲೇಷಣೆ ನಡೆಯುತ್ತದೆ. ಪ್ರೀತಿ ಎರಡು ಹೃದಯಗಳ ಪಿಸುಮಾತು. ಅದು ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಸಾವಿನ ಬಳಿಕವೂ ಈ ಪ್ರೀತಿ ಮುಮದುವರೆಯುತ್ತದೆ.

ಅಂತ್ಯದವರೆಗೂ ಒಂದಾಗಿ ಬಾಳಿ, ಸಾವಿನಲ್ಲೂ ಒಂದಾಗುವ ಜೋಡಿ ಅತೀ ವಿರಳ. ಅದರಂತೆ ತಮಿಳುನಾಡಿನ ಪುಡುಕೊಟ್ಟೈಯಲ್ಲಿ 104 ವರ್ಷದ ಪತಿ ಸಾವಿನ ಕೇವಲ 1 ಗಂಟೆಯಲ್ಲಿ 100 ವರ್ಷದ ಪತ್ನಿ ಅಸುನೀಗಿದ ಘಟನೆ ನಡೆದಿದೆ.

ಇಲ್ಲಿನ ವೆಟ್ರಿವೆಲ್ ಎಂಬ 104 ವರ್ಷದ ವ್ಯಕ್ತಿ ವಯೋಸಹಜ ಅನಾರೋಗ್ಯದಿಂದ ಅಸುನೀಗಿದ್ದು, ಪತಿಯ ಸಾವಿನ ಆಘಾತ ತಡೆಯಲಾರದೇ 100 ವರ್ಷದ ಪಿಚಾಯಿ ಕೂಡ ಹೃದಯಾಘಾತದಿಂದ ಅಸುನೀಗಿದ್ದಾರೆ.

ಕಳೆದ 75 ವರ್ಷದಿಂದ ಸಹಬಾಳ್ವೆಯ ಜೀವನ ನಡೆಸಿದ್ದ ವೆಟ್ರಿವೆಲ್ ಹಾಗೂ ಪಿಚಾಯಿ, ಪರಸ್ಪರರನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಎದೆನೋವು ಕಾರಣದಿಂದ ವೆಟ್ರಿವೆಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಟ್ರಿವೆಲ್ ಅಸುನೀಗಿದ್ದರು. ವೆಟ್ರಿವೆಲ್ ಅವರ ಪ್ರಾರ್ಥೀವ ಶರೀರ ಕಂಡೊಡನೆ ಆಘಾತಗೊಂಡ ಪಿಚಾಯಿ ಕೂಡ ಹೃದಯಾಘಾತದಿಂದ ಅಸುನೀಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!